ಪುಟ:ನಿರ್ಮಲೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ೩೩ ದೇವ: ಏನೂ ಇಲ್ಲ, ಆದರೂ ನನಗೆ ಒಂದು ಸಂದೇಹವುಂಟು. ನಮ್ಮ ಪರಿಚಾರಕಳಿಗೆ ಇಂತಹವೇಳೆಯಲ್ಲಿ ಮಾತುಕಥೆಗಳು ಬೇಡವಾ ಗಿರುವುವು. ಈಗ ನಾವು ಅವಳನ್ನು ಬರಮಾಡಿದರೆ ಅವಳು ನಮ್ಮನ್ನೆಲ್ಲಾ ಗದರಿಸಿ ಮನೆಯಿಂದ ಹೊರಗೆ ಓಡಿಸಿಬಿಡುವಳು. ಪ್ರಿಯ:--ಎಲ್ಲಿ ? ಊಟಕ್ಕೆ ಯಾವಯಾವ ಪದಾರ್ಥಗಳು ಸಿದ್ದ ವಾಗಿವೆ ? ನಿನ್ನಲ್ಲಿ ಪಟ್ಟಿ ಯಿದ್ದರೆ ಅದನ್ನು ನಮಗೆ ದಯವಿಟ್ಟು ಕೊಡು. ವ್ಯಾಕುಲಪಡಬೇಕಾಗಿಲ್ಲ, ನಾನು ಯಾವಾಗಲೂ ಅಡುಗೆಗೆ ತಕ್ಕಂತೆ ನನ್ನ ರುಚಿಯನ್ನು ಸರಿಮಾಡಿಕೊಳ್ಳುವೆನು, ರಾಮ:-(ಆಶ್ಚರ್ಯದಿಂದ ದೇವದತ್ತನನ್ನು ನೋಡುತ್ತ) ಅಹುದು. ಅವನು ಹೇಳುವುದೇ ಸರಿ, ನನ್ನ ಪದ್ಧತಿಯೂ ಅದೇ ಆಗಿದೆ. ದೇವ:-ಸ್ವಾಮಿ ' ನನಗೆ ನೀವು ಆಜ್ಞೆ ಯನ್ನು ಕೊಡಬಹುದು. ಈ ಸ್ಪಳದಲ್ಲಿ ತಮಗೆ ಅಧಿಕಾರವಿದೆ. ರಕ್ತಾಕ್ಷನೆ, ಇರಾತ್ರಿಯ ಊಟದ ಸಾಮಗ್ರಿಗಳ ಪಟ್ಟಿಯನ್ನು ತೆಗೆದುಕೊಂಡುಬಾ, ಪಟ್ಟಿಯನ್ನು ಬರೆದಿರು ವೆಯಷ್ಟೆ ? ಪ್ರಿಯಸೇನನೆ, ನಿನ್ನ ನಡೆನುಡಿಗಳನ್ನು ನೋಡಿದರೆ, ನನ್ನ ಚಿಕ್ಕಪ್ಪ, ಸೇನಾಧೀಶ ಶ್ರೀಮಂತ ವರ್ಧಮಾನನ ನೆನಪು ಬರುವುದು, ಊಟವು ಪೂರೈಸುವವರೆಗೂ ಅದರ ನಂಬುಗೆಯು ಇಲ್ಲ' ಎಂದು ಅವನು ಹೇಳು ತಿದ್ದನು. ಪ್ರಿಯ:-(ಸ್ವಗತ) ಎಲ್ಲದರಲ್ಲಿಯ ದೊಡ್ಡ ಕ್ರಿಕೆಯೆ ! ಚಿಕ್ಕ ಸ್ಪನು ಶ್ರೀಮಂತನ ಸೇನಾಧೀಶನೂ ಆಗಿದ್ದನಂತೆ, ಇನ್ನೇನು ? ಅವನ ತಾಯಿಯು ಶ್ರೀಮಂತವಂಶದವಳೆಂದು ಹೇಳಒಹುದು, (ಪ್ರಕಾಶ೦) ಸರಿ. ಪಟ್ಟಿಯನ್ನು ಕೊಡು, ನೋಡುವ ! ರಾಮ:-(ಪಟ್ಟಿ ಯನ್ನು ಓದಿ) ಇದೇನು ವಿಪರೀತ ? ಒಂದನೆಯ ಸಲಕ್ಕೆ-ಹೊ ! ಹೋ ! ಎರಡನೆಯ ಆವರ್ತಿಗೆ ಸರಿ, ಸರಿ, ಹೋ! ಹೋ! ಊಟವಾದ ಮೇಲೆ ನಿನ್ನ ಲು ಹಣ್ಣುಗಳು, ಇರೇನು ? ನಾವೇನು, ನಮ್ಮ