ಪುಟ:ನಿರ್ಮಲೆ.djvu/೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೩೫ ರಾಮ:-ನಿನ್ನ ಪಟ್ಟಿಯಲ್ಲಿರುವ ಪದಾರ್ಥಗಳೆಲ್ಲಾ ಒಂದಕ್ಕಿಂತ ಮತ್ತೊಂದು ರುಚಿಕರವಾಗಿದೆ. ಯಾವುದನ್ನೂ ಬೇಡವೆನ್ನು ವಂತಿಲ್ಲ, ನಿನ್ನ ಮನಸ್ಸಿಗೆ ಬಂದುದನ್ನು ಬಡಿಸು, ಊಟದ ಏರ್ಪಾಡೇನೊ, ಆದಂತಾ ಯಿತು. ಇನ್ನು ನಮ್ಮ ಸಾಮಾನುಗಳನ್ನೆಲ್ಲಾ ಸರಿಮಾಡಿ ಹಾಸುಗೆಯ ಧೂಳ ನ್ನು ಹೊಡೆದು, ಚೆನ್ನಾಗಿ ಗಾಳಿ ಬೀಸುವೆಡೆ ಹಾಸುವಂತೆ ಏರ್ಪಾಡು ಮಾಡುವೆನು. ದೇವ:-ದಯೆಮಾಡಿ ಆ ಕೆಲಸವನ್ನೆಲ್ಲಾ ನನ್ನ ಪಾಲಿಗೆ ಬಿಡಿರಿ, ತಾವು ಅದಕ್ಕಾಗಿ ಶ್ರಮಪಡಬೇಕಾಗಿಲ್ಲ. ರಾಮ:-ನಿನಗೆ ಬಿಡುವುದೆ ? ದಯಮಾಡಿ ಮನ್ನಿ ಸಬೇಕು, ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳುತ್ತೇನೆ. ದೇವ:-ಆ ವಿಚಾರದಲ್ಲಿ ತಾವು ಸ್ವಲ್ಪವೂ ದಾಕ್ಷಿಣ್ಯ ಪಡದೆ ಧಾರಾ ಛವಾಗಿರಬೇಕೆಂದು ನಾನು ಬಲವಂತಪಡಿಸುವೆನು. ರಾಮ:-ಖಂಡಿತವಾಗಿಯೂ ಆ ಕಲಸವನ್ನು ನಾನೇ ಮಾಡ ಬೇಕು (ಸ್ವಗತ॰) ಕೊನೆಗೂ ಇ೦ದು ಎಂತಹ ಕೆಟ್ಟವರ ಸ್ನೇಹವು ದೊರೆಕಿತು ? ದೇವ:ಹಾಗಾದರೆ, ನಾನು ನಿನ್ನ ಜತೆಯಲ್ಲಾದರೂ ಇರಬೇ ಕೆಂದು ಸಂಕಲ್ಪಿಸಿರುವೆನು. (ಸ್ವಗತ) ಇದು ಈಕಾಲದ ನಿಯಮವಿರ ಬಹುದು. ಪೂರ್ವಕಾಲದಲ್ಲಿ ಇದಕ್ಕೆ ಮಿಂಚಿದ ಪಟಿಂಗತನವೇ ಇರಲಿಲ್ಲ. [ರಾಮವರ್ಮ ದೇವದತ್ತ ರಕ್ತಾಕ್ಷರು ಹೊರಟು ಹೋಗುವರು] ಪ್ರಿಯ:-(ಸ್ವಗತಂ) ಇವನ ಮಾನಮರ್ಯಾದೆಗಳು ನಮ್ಮ ಪ್ರಾಣ ವನ್ನು ತೆಗೆಯುವಂತಿವೆ. ಆದರೆ, ಅವನಿಗೇನೋ ಸಂತೋಷಾತಿಶಯವಾಗಿ ರುವಂತಿದೆ. ಆಗಲಿ, ಪಾಪ! ಇದಾರು, ಕಮಲಾವತಿಯೆ ? ಇದೇನಾಶ್ಚರ್ಯ! ಇವಳು ಇಲ್ಲೇಕಿರುವಳು ?