ಪುಟ:ನಿರ್ಮಲೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲ [ರಾಮವರ್ಮನು ಬರುವನು.] ರಾಮ:- (ಸ್ವಗತ೦) ಈ ಜನರ ಉಪಚಾರವು ನನಗೆ ಸಾಕಾಯಿತು. ಇನ್ನು ಸಹಿಸಲಾಗುವುದಿಲ್ಲ, ಈ ಭೋಜನಾಲಯದ ಅಧ್ಯಕ್ಷನು, ನಮ್ಮ ನ್ನು ಒಂಟಿಯಾಗಿ ಬಿಡುವುದೂ ಮರ್ಯಾದೆಯಲ್ಲ ವೆಂದು ಭಾವಿಸಿ, ಪತ್ನಿ ಸಮೇತನಾಗಿ ನಮ್ಮ ಬೆನ್ನು ಹಿಂದೆಯೇ ಅಲೆಯುತ್ತಿರುವನು, ನಮ್ಮೊ ಡನೆಯೇ ಊಟಮಾಡುವರಂತೆ ! ನಮ್ಮೊಡನೆಯೇ ಇರುವರಂತೆ ! ಇನ್ನೂ ಮನೆಯಲ್ಲಿ ಆರಾರ: ಇರುವರೋ ? ಆರಾರೊಡನೆ ಏನೇನು ಕಷ್ಟಗಳನ್ನ ನುಭ ವಿಸಬೇಕೆ ? ಚಿಃ ! ಸಾಕು ! (ಪ್ರಕಾಶಂ) ಅದಾರಲ್ಲ ? ಪ್ರಿಯ:-ರಾಮ! ನಿನ್ನ ಪುಣ್ಯಕ್ಕೆ ಎಣೆಯಿಲ್ಲ, ಎಂತಹ ಅನಿರೀ ಕ್ಷಣೆಯ ಭಾಗ್ಯವು ಲಭಿಸಿರುವುದು? ಈಗತಾನೆ ಗಾಡಿಯಿಂದ ಇಳಿದು ಒಳಗೆ ಬಂದವರಾರೆಂದು ಬಲ್ಲೆ ಯ ? ರಾಮ: ನನಗೆ ತಿಳಿಯದು. ಪ್ರಿಯ:-ನಮ್ಮ ಪತ್ನಿ ಯರು, ನಿಮ್ಮಲೆ, ಕಮಲಾವತಿಯರಲ್ಲವೆ ? ಇದೊ ! (ಕಮಲಾವತಿಯ ಕಡೆಗೆ ಕೈ ತೋರಿಸಿ) , ಈಕೆಯೇ ನನ್ನ ಕಮಲಾ ವತಿಯು, ನಿಮ್ಮಲೆಯು ಪಕ್ಕದ ಕೊಠಡಿಯಲ್ಲಿರುವಳು. ಅವಳೂ ಇಲ್ಲಿಗೆ ಬರುವಳು, ನಾವು ಅದೃಷ್ಟಶಾಲಿಗಳಲ್ಲವೆ ? - ರಾಮ:-(ಸ್ವಗತಂ) ನನಗೆ ಈಗಲೇ ಹುಚ್ಚು ಹಿಡಿದಿರುವುದು, ಜತೆಗೆ ಅವಳೊಬ್ಬಳು ಬಂದು ಸೇರಿಬಿಟ್ಟರೆ, ನನ್ನ ಅವಸ್ಥೆಯು ಯಾರಿಗೂ ಬೇಡ. - ಪ್ರಿಯ:- ಇದಕ್ಕಿಂತ ಉತ್ತಮವಾದ ಅದೃಷ್ಟವಿದೆಯೆ ? ರಾಮ:-ಅಡ್ಡಿ ಯೇನು ? ನಾವು ಬಹು ಅದೃಷ್ಟಶಾಲಿಗಳು ! ಪರ ಮಾನಂದವಾಯಿತು, ನನ್ನ ಬಟ್ಟೆಗಳು ಸರಾಸಹ್ಯವಾಗಿವೆ. ನಾಳೆಯವರೆಗೂ ಆ ನಿಮ್ಮಲೆಯನ್ನು ನೋಡದಿದ್ದರೇನು ? ನಾಳೆಯದಿನ ಅವಳ ಮನೆಯಲ್ಲೇ ಅವಳನ್ನು ನೋಡುವ ಪುಣ್ಯವಿರಲಿ, ಅದೇ, ಎಲ್ಲಾ ಭಾಗದಲ್ಲಿಯೂ ಅನು ಕೂಲವೆಂದೂ ಗೌರವವೆಂದೂ ನನಗೆ ತೋರುವುದು ; ನಾಳೆಯೇ ಆಗಲಿ.