ಪುಟ:ನಿರ್ಮಲೆ.djvu/೫೦

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪n ನಿರ್ಮಲ ವಾಗಿರಬೇಕೆಂಬುದೇ ನನ್ನ ಮತವು, ಇತರರ ಹುಚ್ಚಾಟವನ್ನು ನೋಡಿದರೆ, ಮನಸ್ಸಿಗೆ ತೊಂದರೆಯಾಗುವುದಿಲ್ಲ. ತಮಾಷೆಯಾಗಿಯೇ ಪರಿಣಮಿಸುವುದು, ಪ್ರಿಯ:-(ರಾಮನನ್ನು ಕುರಿತು) ಧೀರನೇ ಅಹುದು, ರಾಮ ! ನೀನೇ ಧೀರ !! ಹುಟ್ಟಿದಂದಿನಿಂದಲೂ ಇಷ್ಟು ಬುದ್ದಿ ಯನ್ನು ಪಯೋಗಿಸಿ ಹೆಂಗಸರ ಮುಂದೆ ನೀನು ಮಾತನಾಡಿರಲಿಲ್ಲ.. (ನಿರಲೆಯನ್ನು ಉದ್ದೇ ಶಿಸಿ) ನಿಮ್ಮಲೆ, ನೀವಿಬ್ಬರೂ ಸೇರಿದರೆ ಮಾತು ಕಥೆಗಳು ಬಹಳ ಚೆನ್ನಾಗಿ ನಡೆವಂತಿದೆ ನಾವು ಇದ್ದರೆ ನಿಮಗೆ ತೊಂದರೆಯೇನಿನಾ ಸುಖವೇನೂ ಇಲ್ಲ. ರಾಮ:-(ಪ್ರಿಯಸೇನನನ್ನು ಕುರಿತು) ಎಂದಿಗೂ ಇಲ್ಲ. ನಿನ್ನ ಜತೆಯಲ್ಲಿರುವುದೇ ನನಗೆ ಹಿತಕರವಾಗಿದೆ ನೀನು ನನ್ನ ನ್ನು ಬಿಟ್ಟು ಹೋಗ ಬೇಡ. ಪ್ರಿಯ:ನಾವು ಇಲ್ಲಿದ್ದರೆ ನಿಮ್ಮ ಸಂಭಾಷಣೆಗೆ ಅಡ್ಡಿ ಮಾಡಿದಂ ತಾಗುವುದು. ಆದುದರಿಂದ ಮಗ್ಗಲಕೋಣೆಯಲ್ಲಿ ಇರುವೆವು, (ರಾಮ ನನ್ನು ನೋಡಿ) ನಾವು ನಮ್ಮ ವಿಚಾರವನ್ನು ಸ್ವಲ್ಪ ಮಾತನಾಡಿಕೊಳ್ಳ ಬೇಕೆಂಬುದನ್ನು ಮರೆತೆಯೋ ? [ಕಮಲಾವತಿ ಪ್ರಿಯಸೇನರು ಹೊರಟುಹೋಗುವರು | ನಿರ್ಮಲೆ:- ( ಅರೆಗಳಿಗೆ ಸುಮ್ಮನಿದ್ದು) ನಾವು ಕೇವಲ ಪರಿಶೋಧಕ ರಾದರೆ ಸಾಲದು, ತಾವು ಸ್ತ್ರೀಸಮುದಾಯದಲ್ಲಿ ಸ್ವಲ್ಪ ಸ್ವಾಂತಂತ್ರ ವನ್ನು ವಹಿಸಬೇಕು. - ರಾಮ:- (ಗಾಬರಿಗೆ ಮೊದಲಾಗುವುದು) ನಿಮ್ಮಲೆ, ಇಲ್ಲ, ನಾನು ಸ್ತ್ರೀಸಮೂಹಕ್ಕೆ ಸೇರಲು ಅರ್ಹನಾ.... ..ನಾ... .ಗುವಂತೆ ಊ ......ಊ. .. . ಯೋಗ್ಯತೆಯನ್ನು ಪಡೆಯಲು ಪ್ರಯತ್ನ-ಊ. .. . ಊ .... ಪಡುತ್ತಿದೇನೆ. ನಿಮ್ಮಲೆ:-ಹಾಗೆಮಾಡುವುದರಿಂದ ಸ್ತ್ರೀಯರಲ್ಲಿ ಪ್ರೇಮವನ್ನು ಗಳಿ ಸಲು ಸಾಹಾಯ್ಯವಾದಂತಾಗುವುದಿಲ್ಲ.'