ಪುಟ:ನಿರ್ಮಲೆ.djvu/೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೪೩ ಟ್ಯವು ಎಲ್ಲೆಲ್ಲೂ ಹರಡಿರುವ ಈ ಕಾಲದಲ್ಲಿ..... ಏನೊ ಕಪಟದ ವಿಚಾರ ವಾಗಿ ಮಾತನಾಡಿದಂತೆ ಇದ್ದಿತು. ರಾಮ:-ಈ ಕಪಟಕಾಲದಲ್ಲಿ ಸರಿಯಾಗಿ ವಿಚಾರಮಾಡಿ ನೋಡಿದರೆ ಕೆಲವರೇ....ಆ...ಆ.... ನಿಮ್ಮ:-ನೀವು ಹೇಳಬೇಕೆಂದಿರುವುದು ಚೆನ್ನಾಗಿ ತಿಳಿಯಿತು. ರಾಮ:-(ಸ್ವಗತ) ಅಯ್ಯೋ ! ದೇವರೆ !! ನನಗೇ ಅದು ಚೆನ್ನಾಗಿ ಗೊತ್ತಿಲ್ಲವಲ್ಲ ? ನಿಮ್ಮ:-1 ಅಂತರಂಗದಲ್ಲಿ ದುರಾಚಾರಗಳನ್ನು ನಡೆಯಿಸುತ್ತ, ಬಹಿ ರಂಗದಲ್ಲಿ ಸುಗುಣ ಸದಾಚಾರಗಳನ್ನು ಹೊಗಳಿದ ಮಾತ್ರದಿಂದಲೇ ಧರ್ಮ ಕಾರ್ಯವನ್ನು ಮಾಡಿದಂತಾಯಿತೆಂದು ಆಲೋಚಿಸದೆ ಇರುವರ ಅತಿ ವಿರಳರು.” ಎಂಬುದಲ್ಲವೆ ತಮ್ಮ ಅಭಿಪ್ರಾಯವು ? ರಾಮ: ನಿಜ, ನೀನು ಹೇಳಿದುದು ನಿಜ, ಬಾಯಿನಲ್ಲಿ ಮಾತ್ರ ಸದ್ದು ಣಗಳನ್ನು ಹೊಗಳುತ್ತ, ಸದ್ಗುಣಿಗಳಂತೆ ನಟಿಸುವವರು ನಿಜವಾಗಿಯೂ ಸದ್ದು ಣಿಗಳಾಗಿರುವುದಿಲ್ಲ, ಪ್ರಾಯಶಃ ನಾನು ನಿನ್ನನ್ನು ನಿಜವಾಗಿಯೂ ಬೇಸರಪಡಿಸುತ್ತಲಿರಬಹುದು. ನಿಮ್ಮ:- ನನಗೆ ಸ್ವಲ್ಪವೂ ಬೇಸರವಿಲ್ಲ. ನೀವು ಹೇಳುವುದೆಲ್ಲವೂ ಸ್ವಾರಸ್ಯವಾಗಿಯೂ ಹಿತಕರವಾಗಿಯ ಚೆನ್ನಾಗಿಯೂ ಇರುವುದರಿಂದ ದಯಮಾಡಿ ಮಾತನಾಡುತ್ತಿರಬೇಕೆಂದು ಪ್ರಾರ್ಥಿಸುತ್ತೇನೆ. ರಾಮ:-ನಾನು ಹೇಳಬೇಕಾದ ಮತ್ತೊಂದು ಸಂಗತಿಯೇನೆಂದರೆ:- ಧೈರವು ಸಾಲದೆಹೋದರೆ, ಕೆಲವುವೇಳೆ, ಎಲ್ಲವೂ, ಊ-ಊ-ಹಾಳು. ನಿರ:ಸರಿ, ನಿಮ್ಮ ಅಭಿಪ್ರಾಯವು ನನಗೂ ಸಮ್ಮತವಾದುದೆ. ಧೈಯ್ಯಹೀನರಾದವರಿಗೆ ಅನೇಕ ವೇಳೆ ತೊಂದರೆಯು ಪ್ರಾಪ್ತವಾಗುವುದು. ಅದನ್ನು ತಿಳುವಳಿಕೆಯ ಅಭಾವವೆನ್ನು ವರು. ಅಲ್ಲದೆ, ನಾವು ಇಲ್ಲದೆ. ದೊಡ್ಡಸ್ತಿಕೆಯನ್ನು ಬಯಸಿದರೆ, ಮತ್ತಷ್ಟು ಕಷ್ಟಕ್ಕೆ ಸಿಲ್ಕಿ ಕೊಳ್ಳಬೇಕಾ + & S ' + == , - *