ಪುಟ:ನಿರ್ಮಲೆ.djvu/೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಉ ನಿರ್ಮಲ - ಹ೦ಡಿ:- ಏನಿದ್ದರೇನು? ನನ್ನ ಪುರಾತನಪದ್ಧತಿಯ ಗಂಡನು ಹೊಸ ವಿಷಯಗಳಿಗೆಲ್ಲಾ ಅಡ್ಡಿ ಬರುವನು. ನಾನೊಂದನ್ನು ಹೇಳಿದರೆ ತಾನೊಂದನ್ನು ಹೇಳುವನು. ನಾಜೋಕು ನಯ ನೈಪುಣ್ಯಗಳು ಅವನ ಸಮೀಪಕ್ಕೆ ಬರಲೂ ಆಗದು, ಮುದುಕನಾಗುತ್ತ ಹೋದಂತೆಲ್ಲಾ ಅವನಿಗೆ ಇವುಗಳಲ್ಲಿ ಅಶ್ರದ್ದೆ ಯು ಹೆಚ್ಚುತ್ತಲಿದೆ. ಪ್ರಿಯ:ಗಂಡಸರು ಮುದುಕರೆಂದೂ ಹೆಂಗಸರು ಕುರೂಪಿಗ ಳೆಂದೂ ತಾವಾಗಿಯೇ ಒಪ್ಪಿ ಕೊಳ್ಳುವ ಮುದುಕಗಂಡಸರೂ ಕುರೂಪಿ ಹೆಂಗಸರೂ ಎಲ್ಲಿಯಾದರೂ ಇರುವರೆ ? ಚಂಡಿ: ಓಹೋ! ಜ್ಞಾಪಕಕ್ಕೆ ಬಂತು, ಪಟ್ಟಣಗಳಲ್ಲಿ ಈಗ ಯಾವ ವಯಸ್ಸಿನ ಹೆಂಗಸರ ಸೌಂದರಕ್ಕೆ ಗೌರವವು ಹೆಚ್ಚು ? ಪ್ರಿಯ:-ಇದುವರೆಗೂ ೪೦ (ನಲವತ್ತು ವರುಷದವರೆಗೂ ಹೆಂಗ ಸರಿಗೆ ಸೌಂದಯ್ಯಕ್ಕಾಗಿ ಗೌರವವನ್ನು ಕೊಡುತ್ತಿದ್ದರು. ಇನ್ನು ಮುಂದೆ ಅದೇರೀತಿ ೫೦ (ಐವತ್ತು ವರ್ಷದವರೆಗೂ ನಡೆಯಿಸಬೇಕೆಂದು ಸ್ತ್ರೀಸಮ ಹವು ಸಿದ್ದಾಂತಮಾಡಿದಂತೆ ಇದೆ. - ಚಂಡಿ:-ಹಾಗಾದರೆ ನಾನು ಇನ್ನೂ ಮುದುಕಿಯಾಗಿಲ್ಲ ವಷ್ಟೆ ? ಪ್ರಿಯ:-ನಲ್ವತ್ತು ವರ್ಷಗಳು ಕಳೆಯುವವರೆಗೂ ಯಾವ ಹೆಂಗಸೂ ಒಡವೆಗಳನ್ನು ಧರಿಸುವುದಿಲ್ಲ, ಇನ್ನು, ನಿಮ್ಮ ಕಮಲಾವತಿಯು ಸ್ತ್ರೀ ಸಮಾಜದಲ್ಲಿ ಶಿಶುಪ್ರಾಯಳು. ಚಂಡಿ: ನೋಡು ! ನನ್ನ ಸೊಸೆ ಕಮಲೆಯು ತಾನೊಬ್ಬ ವಯಸ್ಸು ಮೀರಿದಹೆಂಗಸೆಂದು ಭಾವಿಸಿ, ಜವಾಹಿರಿಯನ್ನು ಧರಿಸಲು ನಮ್ಮಂತೆ ಆಶ ಪಡುವಳು, ಏನು ಹೇಳಲಿ ? [ದುರ್ಮತಿ ಕಮಲಾವತಿಯರು ಬರುವರು.] ಪ್ರಿಯ:-ನಿನ್ನ ಸೊಸೆಯೆ? ಸರಿ; ಸರಿ, ಅವನಾರು? ನಿನ್ನ ತಮ್ಮನೊ? ಚಂಡಿ:ಇಲ್ಲ. ನನ್ನ ಸೋದರಳಿಯನು, ಅವರಿಬ್ಬರಿಗೂ ಶೀಘ್ರ