ಪುಟ:ನಿರ್ಮಲೆ.djvu/೫೬

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೪೭ ದಲ್ಲಿಯೇ ವಿವಾಹವಾಗುವುದು. ಈಗಲೇ ಇವರು ಗಂಡಹೆಂಡರಂತೆ ದಿನಕ್ಕೆ ಹತ್ತಾರುಸಾರಿ ಕಚ್ಚಾಡಿ ಮರಳಿ ಒಂದಾಗುವರು, (ದುರ್ಮತಿಯನ್ನು ಕುರಿತು) ದುರ್ಮತಿ, `ಮಗೂ, ಕಮಲೆಗೆ ಏನೇನು ವಿಶೇಷ ಮೃದುವಿಷಯ ಗಳನ್ನು ಹೇಳುವಿ ? - ದುರ್ವ:-ನಾನು ಮೃದುವಿಷಯಗಳನ್ನಾಗಲೀ ಮೃದುನುಡಿಗಳ ನಾಗಲೀ ಹೇಳುತ್ತಿಲ್ಲ, ಅವಳು ಬೆನ್ನು ಹತ್ತಿ ಸುಮ್ಮನೆ ಕಾಡುವಳು. ಅರೆ ಗಳಿಗೆಯಾದರೂ ಸುಖವಾಗಿರಬೇಕೆಂದರೆ ನನಗೆ ಮನೆಯಲ್ಲಿ ಸ್ಥಳವಿಲ್ಲ. ಮನೆಗೆ ಬಂದರೆ ಸುಮ್ಮನೆ ಕಾಡಿಸುವಳು. ನಾನು ತಬೇಲಿಗೆ ಹೋದರೆ ಅಲ್ಲಿ ಯಾವ ತೊಂದರೆಯೂ ಇರುವುದಿಲ್ಲ. - ಚಂಡಿ:ಕಮಲೆ, ಅವನ ಮಾತಿಗೆ ಗಮನ ಕೊಡಬೇಡ, ನಿನ್ನ ಬೆನ್ನಿನ ಹಿಂದೆ ಅವನು ಬೇರೊಂದುರೀತಿ ಹೇಳುವನು. ಕಮ:-ನಮ್ಮ ದುರ್ಮತಿಯು ಬಹು ಧಾರಾಳಸ್ವಭಾವದವನು. ನಾಲ್ವರೆದುರಿಗೆ ಜಗಳವಾಡಿ ಗೋಪ್ಯವಾಗಿ ಕ್ಷಮೆಯನ್ನು ಬೇಡುವನು. ದುರ್ಮ: -- ಇದೊಂದು ಸುಳ್ಳು ? ಮನೆಹಾಳಿ ! ಚಂಡಿ: ಎಲ, ಎಲಾ! ನೀನೊಳ್ಳೆಯ ಕೊರಮನೊ! (ಪ್ರಿಯಸೇನ ನನ್ನು ಕುರಿತು) ಪ್ರಿಯಸೇನ, ಅವರ ಮುಖಭಾವವನ್ನು ನೋಡು, ಅವರಿಬ್ಬ ರಿಬ್ಬರಿಗೂ ಹೋಲಿಕೆಯು ಚೆನ್ನಾಗಿಲ್ಲ ವೆ? ಚೆನ್ನಾಗಿ ಒಪ್ಪುವುದಿಲ್ಲವೆ ? ಎತ್ತರವೂ ಸರಿಯಾಗಿದೆ. ಎಲ್ಲಿ ಮಗೂ, ನಿನ್ನ ಬೆನ್ನಿಗೆ ಅವಳ ಬೆನ್ನನ್ನು ಸೇರಿಸಿ ನಿಲ್ಲು. ನೋಡುವ, ದುರ್ಮತಿ, ಹೀಗೆ ಬಾ, ಪ್ರಿಯಸೇನನು ನೋಡಲಿ, ನಿಂತುಕೊ. (ದುರ್ಮತಿಯು ಕಮಲಾವತಿಯ ಬೆನ್ನಿಗೆ ತನ್ನ ಬೆನ್ನನ್ನು ಸೇರಿಸಿ ನಿಲ್ಲುವನು. ] ದುರ್ಮ:-ನನಗೇನು ಗೋಳುಬಂತಪ್ಪ ! (ಅಳತೆಯನ್ನು ಮಾಡಲು ತಲೆಯನ್ನು ಹಿಂದಕ್ಕೆ ಸರಿಸುವನು) |