ಪುಟ:ನಿರ್ಮಲೆ.djvu/೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೮ ನಿರ್ಮಲೆ - ಕಮ:-ಅಯ್ಯೋ ! ಅಯ್ಯೋ !! ನನ್ನ ತಲೆಯನ್ನು ಇವನು ಒಡೆದು ಹಾಕುವನು !! ಚಂಡಿ:-)ಾ, ಪಾಪಿ ! ಪ್ರಾಪ್ತವಯಸ್ಕನಾದ ಗಂಡಸಾಗಿ ಹೀಗೆ ಮಾಡಬಹುದೇನೋ ? ನಾಚುಕೆಕೇಡು !! ಚಿಃ !! ದುರ್ಮ:- ನಾನು ಪ್ರಾಪ್ತ ವಯಸ್ಕ ನೋ ? ಹಾಗಾದರೆ ನನ್ನ ಆಸ್ತಿ ಯನ್ನು ನನ್ನ ಸ್ವಾಧೀನಕ್ಕೆ ಕಟ್ಟುಬಿಡು, ನನ್ನ ಆಸ್ತಿಯು ನನ್ನ ವಶವಾ ದರೆ ಯಾರಿಂದಲೂ ಪೀಡಿಸಿಕೊಳ್ಳಬೇಕಾದುದೇ ಇಲ್ಲ ; ನನ್ನ ಹೊಟ್ಟೆ ಯನ್ನು ನೀವೆಲ್ಲಾ ಉರಿ ಸುತ್ತಿರುವಿರಿ ? ಚಂಡಿ:--ನಿನಗೆ ವಿದ್ಯೆಯನ್ನು ಹೇಳಿಸಿದ ಶ್ರಮಕ್ಕೆ ಇದೇನೂ ಪ್ರತಿ ಫಲ ? ನನ್ನ ಮಗನಾಗದಿದ್ದ ಮಾತ್ರಕ್ಕೆ ಏನಾಯಿತು? ನಿನ್ನನ್ನು ಬಾಲ್ಯದಿಂ ದಲೂ ಪೋಷಿಸಿ ಸಲಹಿದವರಾರು ? ಸೀನು ವ್ಯಾಧಿಗ್ರಸ್ತನಾದಾಗ ನಾನು ಅಲ್ಲವೆ ? ವೈದ್ಯದ ಪುಸ್ತಕ ನಿನ್ನೆಲ್ಲಾ ಓದಿ ಔಷಧವನ್ನು ತಯಾರಿಸಿ ಕೊಟ್ಟಿಲ್ಲವೆ ? ದುರ್ಮ:-ಹುಟ್ಟಿದಂದಿನಿಂದ ನೀನು ನನ್ನ ನ್ನು ಪ್ರೀತಿಸುತ್ತಿರುವುದ ರಿಂದ ಸೀನು' ಅಳಲೇಬೇಕು' ವೈದ್ಯಪುಸ್ತು ಕ ದಲ್ಲಿ ಮದ್ದನ್ನು ಒಂದಾವರ್ತಿ ಕುಡಿಸಬೇಕೆಂದು ಇದ್ದರೆ ಹತ್ತು ಸಾಗಿ ಕುಡಿಸುವಿ, ಇನ್ನು ಮೇಲೆ ನಿನ್ನ . ರಗಳೆಗಳು ಸಾಕು, ಚ೧ಡಿ:-ನಿನಗೆ ಒಳ್ಳೆಯದಾಗಬೇಕೆಂದು ವೆ ಅದನ್ನೆಲ್ಲವನ್ನು ಮಾಡಿ ದುದು ? ಯಾರಿಗಾಗಿ ಮಾಡಿದೆನೆಂಬುದು ನಿನಗೆ ತಿಳಿಯದೆ ? ದುರ್ಮ:-ನೀನು ನಿನ್ನೆ ಒಳ್ಳೆಯದನ್ನೂ ಕೆಟ್ಟುದನ್ನೂ ಕಟ್ಟಿ ಕೊಂಡು ಅಳುವುದೇಕೆ ? ನಿನಗಾಗಬೇಕಾದುದೇನು ? ನಾನು ಸಂತೋಷ ವಾಗಿರುವಾಗ ನೀನು ಅಡ್ಡಿ ಮಾಡುವುದೇಕೆ ? ನನಗೆ ಒಳ್ಳೆಯದಾಗುವದಿದ್ದರೆ ಆಗುವಕಾಲಕ್ಕೆ ಆಗಲಿ; ಇಲ್ಲವಾದರೆ ಹೋಗಲಿ. ಸೀನು ಸುಮ್ಮನೇ ಹೇಳಿ ಹೇಳಿ ಕಾಡಿಸುವುದೇಕೆ ?