ಪುಟ:ನಿರ್ಮಲೆ.djvu/೫೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೪೯ ಚಂಡಿ:-ನೀನು ಹೇಳುವುದೆಲ್ಲಾ ಸುಳ್ಳು, ನೀನು ಉತ್ಸಾಹದಿಂದ ಸಂತೋಷವಾಗಿದ್ದು ದನ್ನು ನಾನು ನೋಡಿಯೇ ಇಲ್ಲ, ನೀನು ಆನಂದಮಂ ದಿರಕ್ಕೋ, ಎಲ್ಲಿಗೋ, ಹೋಗಿ, ಕುಡಿದು ಕುಳಿತಿರುವಿ, ನಾನು ನಿನ್ನೊಡನೆ ಸಂತೋಷವಾಗಿ ಕಾಲವನ್ನು ಕಳೆಯುವದೆಂದು ? ದುರ್ಮ:-ಆ ಕಾಲವು ಬಂದಾಗ ! ಚಂಡಿ: ಇದೆಲ್ಲಾದರೂ ಉಂಟೆ ? ಇವನ ನಡತೆಯನ್ನು ನೋಡಿದರೆ ಎದೆಯು ಒಡೆದುಹೋಗುವುದು. ಪ್ರಿಯ:-ಎಲ್‌ ತಾಯಿ, ನಾನು ಸ್ವಲ್ಪ ಧರ್ಮಬೋಧೆಯನ್ನು ಮಾಡಿ ಈ ತನಲ್ಲಿ ಕರ್ತವ್ಯಜ್ಞಾನವನ್ನು ಹುಟ್ಟಿ ಲು ಪ್ರಯತ್ನ ಪಡುವೆನು. ಚಂಡಿ:-ಕಮಲೆ, ಬಾ, ನಾವು ಹೋಗುವ ಪ್ರಿಯಸೇನನೆ, ನನ್ನ ದುರವಸ್ಥೆಯನ್ನು ನೋಡಿದಿಯಾ ? ಇಂತಹ ಮುದ್ದು ಸುಂದರನಾದ, ಮತ್ತು ಕ್ರೋಧವು ಹುಟ್ಟುವಂತೆ ಮಾಡುವ, ಅವಿಧೇಯನಿಂದ ತೊಂದರೆಗೊಳಗಾಗು ತಿರುವ ಹೆಂಗಸು ಮತ್ತೆಲ್ಲಾದರೂ ಇರುವಳೆ ? ಅಯ್ಯೋ ! ಹಣೆಯಬರಹ. - (ಚಂಡಿ ಕಮಲೆಯರು ತೆರಳುವರು.) ದುರ್ಮ :-(ಕುಣಿದಾಡುತ್ತ) ಅವಳು ಅಳಲಿ ! ಹಾಗೆಯೇ ಮಾಡ ಬೇಕು !! ಅವಳು ಅತ್ತರೇ ನನಗೆ ಸಂತೋಷ !! ಅವರು ಒಂದು ಪುಸ್ತಕವ ನ್ನು ಹಿಡಿದುಕೊಂಡು ಒಂದು ದಿನವನ್ನೆಲ್ಲಾ ಕಳೆಯುವರು, ಅನಂತರ ಒಂದು ಹಗಲೆಲ್ಲಾ ಅಳುವರು, ಅಳಿಸುವ ಪುಸ್ತಕವೇ ಬಹು ಸೊಗಸಾದ ಪುಸ್ತಕ ವಂತೆ !. . ಪ್ರಿಯ:-ನಿನಗೆ ಹೆಂಗಸರ ವಿಷಯದಲ್ಲಿ ವಿಶೇಷ ವಿಶ್ವಾಸವಿರುವಂತೆ ತೋರುವುದಿಲ್ಲ. ದುರ್ಮ:-ಅವರಿಗೆ ಅಷ್ಟೇ ಸಾಕು, ಅವರನ್ನು ಅಷ್ಟರಲ್ಲಿಯೇ ಇಟ್ಟಿರಬೇಕು. ತಿಳಿಯಿತೆ ? ಪ್ರಿಯ:-ನೀನು ವರಿಸಬೇಕಾಗಿರುವ ಸ್ತ್ರೀಯ ಮೇಲೂ ಈ ರೀತಿಯ