ಪುಟ:ನಿರ್ಮಲೆ.djvu/೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಳ ದ ಮಮತೆಯು ಇರಲಾರದು ! ಕಮಲೆಯು ಸುಂದರಳೂ, ಶಾಂತಿಸ್ವಭಾವ ದವಳೂ ಆಗಿರುವಂತಿದೆ. - ದುರ್ಮ:-ಅಹುದು ; ಅಹುದು, ಆ ವಿಷಯಗಳು ನಿನಗೇನು ಗೊ ತ್ತು ? ಅವಳ ಸ್ವಭಾವಗಳನ್ನು ಎಳ್ಳಷ್ಟೂ ತಪ್ಪಿಲ್ಲದೆ ನಾನು ಚೆನ್ನಾಗಿ ಬಲ್ಲೆ ನು, ಅವಳು ಶಾಂತಳೆ ? ಅಬ್ಬಾ ! ಅವಳ ರಗಳೆ, ನಸಿನಸಿ, ಅಸಹ್ಯದ ಕೃತ್ಯ ಗಳು, ಥ ! ಅವಳಂತಹ ವಸ್ತುವು ಪೃಥ್ವಿಯಲ್ಲಿಯೇ ಇಲ್ಲ. ಪ್ರಿಯ:-- (ಸ್ವಗತ) ಪ್ರಣಯಿಗೆ ಒಳ್ಳೆಯ ಪ್ರೋತ್ಸಾಹವಲ್ಲವೆ ? ದುರ್ಮ:-ಸಣ್ಣ ಹುಡುಗಿಯಾಗಿದ್ದಾಗಿನಿಂದಲೂ ಅವಳನ್ನು ನಾನು ಚೆನ್ನಾಗಿ ಒಲ್ಲೆನು, ಪೊದರಿನಲ್ಲಿರುವ ಮೊಲ, ನಡಿಗೆಯನ್ನು ಕಲಿಯುತ್ತಿ ರುವ ಕುದುರೆಗಳಿಗಿಂತಲೂ ಹೆಚ್ಚಾಗಿ ಅವಳಲ್ಲಿ ಚೇಷ್ಟೆಗಳಿವೆ. ಪ್ರಿಯ :-ಅವಳು ಮಿತಭಾಷಿಣಿಯೆ೦ದು ಕೇಳಿರುವೆನು. ದುರ್ಮ :ನಾಲ್ವರೆದುರಿಗೆ ಅವಳು ಹಾಗಿರುವಳು, ಜತೆಗಾರರ ಸಂಗಡ ಅವಳ ಆರ್ಭಟವನ್ನು ನೋಡಬೇಕು ! ಪ್ರಿಯ :-ಅವಳಲ್ಲಿರುವ, ವಿನಯವನ್ನು ನೋಡಿದರೆ ನನಗೆ ಅಕ್ಕ ರೆಯು ಹುಟ್ಟುವುದು. - ದುರ್ಮ :-ಅವಳ ಇಷ್ಟಕ್ಕೆ ಸ್ವಲ್ಪವಾದರೂ ವಿರೋಧವಾಗಿ ನಡೆ ದವರನ್ನು ಅವಳು ಒದೆದು ಬಚ್ಚಲಿಗೆ ನೂಕಿಬಿಡುವಳು, ಅವಳು ಸಾಮಾನ್ಯ ಳಾದ ಸ್ತ್ರೀಯಲ್ಲ, ಪ್ರಿಯ : ... ಹೋಗಲಿ ' ಅವಳು ಸುಂದರಿಯು ಅಹುದೊ ಅಲ್ಲವೊ? ಅದನ್ನಾದರೂ ಒಪ್ಪವಿಯೊ ಇಲ್ಲವೊ? ದುರ್ಮ :-ಆಹಾಹಾ ? ಏನುಹೇಳಲಿ ? ಅದೂ ಒಂದು ಸೌಂದ ರ್ಯವೆ ? ಈ ಪ್ರಾಂತದಲ್ಲಿ ಕಲಾಮಣಿಯನ್ನು ಬಿಟ್ಟರೆ, ಬೇರೆ ರೂಪವಂತ ರಿಲ್ಲ ! ಅವಳಿಗಿಂತ ರೂಪವಂತರು ಬೇರೆ ಇರುವರೆ ? ಥ ! ಕಮಲೆಯ ಕಕ್ಷರಿಗೂ ಕಾಡಿಗೆಯಹಾಗೆ ಕಪ್ಪಗಿವೆ. ಕೆನ್ನೆ ಗಳು ಕೆಂಪಗೆ ವರಗುದಿಂಬಿ ಕಿ