ಪುಟ:ನಿರ್ಮಲೆ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲಿ ನಂತೆ ಇವೆ. ಸಾಮಾನ್ಯ ಹೆಂಗಸರಿಗಿಂತ ಎರಡುಪಾಲು ರೂಪವು ಕಲಾಮ ಣಿಯಲ್ಲಿದೆ. ಪ್ರಿಯ :-ನಿನಗೆ ಒದಗಿರುವ ತೊಂದರೆ, ಗಂಡಾಂತರ, ನಿಮ್ಮತ್ತೆಯ ರಗಳೆಗಳನ್ನು ತಪ್ಪಿಸುವ ಮಿತ್ರನಿಗೆ ಏನನ್ನು ಕೊಡುವಿ ? ದುರ್ಮ :-ಏನು, ಏನು ? ಮತ್ತೊಮ್ಮೆ ಹೇಳು ಪ್ರಿಯ :-ಕಮಲಾವತಿಯನ್ನು ಇಲ್ಲಿಂದ ಕರೆದುಕೊಂಡು ಹೋಗಿ ನೀನು ಕಲಾಮಣಿಯೊಡನೆ ಸುಖವಾಗಿರುವಂತೆ ಮಾಡಿಕೊಡುವ ಮಿತ್ರನನ್ನು ವಂದಿಸಿ ಅವನ ಉಪಕಾರವನ್ನು ಸ್ಮರಿಸುವೆಯೋ ? ದುರ್ಮ :-ಕಮಲಾವತಿಯನ್ನು ಹೊತ್ತುಕೊಂಡು ಹೋಗುವವರೂ ಇರುವರೋ ? ಪ್ರಿಯ :-ಅವನೇ ನಾನು. ನೀನು ಸಾಹಾಯ ಮಾಡುವುದಾದರೆ ನಾನು ಅವಳನ್ನು ಕರೆದುಕೊಂಡು ಚಂದ್ರಪುರಿಗೆ ಓಡಿ ಹೋಗುವೆನು ಪುನಃ ನೀನು ಕಮಲಾವತಿಯನ್ನು ನೋಡುವ ಭಯವಿಲ್ಲ. ದುರ್ಮ :-ಸಾಹಾಯ್ಯವೆ ! ನನ್ನ ಪ್ರಾಣವೇ ಹೋಗುವುದಾದರೂ ಲಕ್ಷ್ಯಮಾಡದೆ ನಿಮಗೆ ನನ್ನ ಕಯ್ಯಲ್ಲಾದ ಸಾಹಾಯ್ಯವನ್ನು ಮಾಡುವೆನು. ಒಂದೇಒಂದು ಗಳಿಗೆಗೆ ಗಾವುದದೂರ ಓಡುವ ಕುದುರೆಗಳನ್ನು ಕಟ್ಟಿ ಗಾಡಿ ಯನ್ನು ಸಿದ್ಧ ಪಡಿಸುವೆನು. ಜತೆಗೆ ನೀವು ಅಪೇಕ್ಷಿಸದೆಯೂ ನಿಮ್ಮ ನಿರೀ ಕ್ಷಣೆಯಲ್ಲಿ ಇಲ್ಲದೆಯೂ ಇರುವ ಕಮಲೆಯ ಜವಾಹಿರಿಯ ಪೆಟ್ಟಿಗೆಯನ್ನೂ ತಂದು ಕೊಡುವೆನು, ಏನು ಹೇಳುವಿ ? ಪ್ರಿಯ :-ನೀನು ನಿಜವಾಗಿಯೂ ಧೀರನೇ ಅಹುದು, ದುರ್ಮ :- ಈ ಕೆಲಸವನ್ನು ಪೂರ್ತಿಮಾಡುವುದರೊಳಗಾಗಿ ನನ್ನ ಧೈರ್ಯವೆಷ್ಟೆಂಬುದನ್ನು ಇನ್ನೂ ಚೆನ್ನಾಗಿ ತಿಳಿಯುವಿ. (ಇಬ್ಬರೂ ಹೊರಟುಹೋಗುವರು.)