ಪುಟ:ನಿರ್ಮಲೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ನಿರ್ಮಳೆ ಮೂರನೆಯ ಅಂಕ T [ದೇವದತ್ತನ ಮನೆಯ ಪಡಸಾಲೆ, ದೇವದತ್ತನು ಪ್ರವೇಶಿಸುವನು ] ದೇವ :-(ಸ್ವಗತ) ವಿಜಯಪಾಲನು ಸಭ್ಯಗೃಹಸ್ಥನು, ತನ್ನ ಮಗ ನಂತಹ ವಿಜಯಸಂಪನ್ನನು ಜಗತ್ತಿನಲ್ಲೇ ಬೇರೊಬ್ಬನಿಲ್ಲ ವೆಂದು ಪತ್ರ ವನ್ನು ಬರೆದಿರುವನು. ಆದರೆ, ಅವನಂತಹ ಪಟಿಂಗನು ಮತ್ತೊಬ್ಬನಿಲ್ಲ ವೆಂದು' ಬೋಧೆಯಾಗುತ್ತಲಿರುವುದು, ಅವನ ವರ್ತನವು ಅಸಾಧ್ಯವಾದು ದಾಗಿರುವುದು, ಪಡಸಾಲೆಯಲ್ಲಿ ನನ್ನ ಆರಾಮ ಕುರ್ಚಿ (Easy Chair) ಯ ಮೇಲೆ ಸುಖವಾಗಿ ಕುಳಿತು, ಪಾದರಕ್ಷೆಗಳನ್ನು ಅಲ್ಲಿಯೇ ಬಿಸುಟು ಅವನ್ನು ತೆಗೆದಿಡಲು ನನಗೆ ಆಜ್ಞೆ ಮಾಡುವನು, ಇವನ ನಡತೆಯನ್ನು ನೋಡಿದ ನಿರಲೆಯ ಪಾಡೇನಾಗಿರಬಹುದು ? ಪ್ರಾಯಶಃ ಅವಳಿಗೆ ಹುಚ್ಚ ಹಿಡಿದಿರಬಹುದು. ಬುದ್ದಿ ಭ್ರಮೆಯಿಂದ ಅವಳು ಗಾಬರಿಯಾಗಿರುವುದರ ಲೇನೂ ಸಂಶಯವಿಲ್ಲ. (ನಿರಲೆಯು ತನ್ನ ಸಾಮಾನ್ಯವಾದ ಉಡುಪನ್ನು ಧರಿಸಿ ಬರುವಳು) ದೇವ:-ನಿರಲೆ ! ನನ್ನ ಮಾತಿನಂತೆ ನೀನು ಉಡುಪನ್ನು ಬದಲಾಯಿ ಸಿರುವಿ, ಈ ಬದಲಾವಣೆಯ ಆವಶ್ಯಕತೆಯೇ ಇಲ್ಲ ವೆಂದು ತೋರುತ್ತಿದೆ. ನಿಮ್ಮ:-ನಿನ್ನ ಆಜ್ಞೆಯು ಸರಿಯಾದುದೋ, ಅಲ್ಲವೋ, ಎಂಬುದನ್ನು ಕ್ಷಣಮಾತ್ರವೂ ಚರ್ಚಿಸದೆ, ಶಿರಸಾವಹಿಸಿ ನಡೆಯಿಸುವುದು ನನ್ನ ಕರ್ತವ್ಯ ವೆಂದು ತಿಳಿದಿರುವೆನು. ದೇವ:- ಕೆಲವುವೇಳೆ ನಾನು ನನ್ನ ಅಭೀಷ್ಟಗಳನ್ನು ಸಕಾರಣವಾಗಿ ತಿಳಿಸುವೆನಲ್ಲ ವೆ ? ನೀನು ವರಿಸಬೇಕಾಗಿರುವ ಯುವಕನು ಒರುವನೆಂದು ಆರೀತಿ ಮಾಡೆಂದು ಹೇಳಿದೆನು. ನಿಮ್ಮ:-ಏನೋ ಅಸಾಧಾರಣವಸ್ತುವನ್ನು ನಿರೀಕ್ಷಿಸಬೇಕೆಂದು ನೀ ನು ಹೇಳಲಿಲ್ಲವೆ ? ಮೂಲವಸ್ತುವು ನಿನ್ನ ವರ್ಣನೆಗಿಂತ ಬಹುಮಟ್ಟಿನ ಪರಿ