ಪುಟ:ನಿರ್ಮಲೆ.djvu/೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೬. ನಿರ್ಮಲೆ M ನಿಮ್ಮ:-.ಸರಿ ! ನನ್ನ ಜಾಣೆಯನ್ನು ಕೊಂಡಾಡುತ ಆರಂಭವಾದ ಈ ಸಂಭಾಷಣೆಯು ನನಗೆ ತಿಳುವಳಿಕೆಯಿಲ್ಲ ವೆಂದು ಹೇಳುವುದರಲ್ಲಿ ಕೊನೆ ಗಂಡಂತಾಯಿತು. ಅಷ್ಟೆ ! ದೇವ:-ನಿರಲೆ, ಆಗ್ರಹಗೊಳ್ಳಬೇಡ, ನಿಜವಾಗಿಯೂ ಆ ಪಟಿಂ ಗನಾದ ರಾಮವರ್ಮನು ನಮ್ಮ ವಿರೋಧಾಭಿಪ್ರಾಯಗಳನ್ನು ಸರಿಪಡಿಸ ಬಲ್ಲ ಜಾಣನಾದರೆ ಆಗ ಇಬ್ಬರ ಸಮ್ಮತಿಯನ್ನೂ ಪಡೆಯುವನು. ನಿರ:ನಮ್ಮಿಬ್ಬರಲ್ಲಿ ಯಾರಾದರೊಬ್ಬರು ನಿಜವಾಗಿಯೂ ಮೋಸ ಹೋಗಿರಲೇಬೇಕು. ದೇವ:--- ಅಗತ್ಯವಾಗಿಯೂ ಹಾಗಾಗಲಿ, ಆದರೆ ನಾನು ಮೋಸ ಹೋಗಿಲ್ಲವೆಂಬ ಧೈರವು ನನಗೆ ಚೆನ್ನಾಗಿರುವುದು. ನಿರ:ನಾನೂ ಮೋಸಹೋಗಿಲ್ಲ ವೆಂದು ತಿಳಿದಿರುವೆನು! ನೋಡುವ. (ತೆರಳುವರು) (ದುರ್ಮತಿಯು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು ಓಡಿಬರುವನು) ದುರ್ಮ:- ಸ್ವಗತಂ) ಅಬ್ಬಾ ! ಅಬ್ಬಬ್ಬಾ!! ಸಿಲ್ಕಿ ತಪ್ಪಾ ಸಿಲ್ಕಿ ತು!!! ಇದೇ ಪೆಟ್ಟಿಗೆಯಲ್ಲವೆ ? ಕಮಲೆಯ ಹಾರಗಳು, ಒಡವೆಗಳು, ಎಲ್ಲವೂ ಇಲ್ಲಿವೆ. ನಮ್ಮತ್ತೆಯು ಇದನ್ನು ಕಮಲೆಗೆ ಕೊಡದೆ ಮೋಸಪಡಿಸಬೇಕೆಂ ದಿದ್ದಳಲ್ಲ ? ಈಗ ಏನುಮಾಡುವಳೋ ನೋಡುವ, ನಾನೇ ಧೀರನಲ್ಲವೆ ? ಆ ಪ್ರಿಯಸೇನನೆಲ್ಲಿ ? (ಪ್ರಿಯಸೇನನು ಬರುವನು) - ಪ್ರಿಯ:- ಪ್ರಿಯ ಮಿತ್ರನೆ, ನಿಮ್ಮ ಕೈಯೊಡನೆ ಎಂತಹ ಸಂಧಾನ ವನ್ನು ನಡೆಯಿಸಿದಿ ? ಕಮಲೆಯಲ್ಲಿ ಪ್ರೀತಿಯುಳ್ಳವನಂತೆ ನಟಿಸಿ, ನಿಮ್ಮ ತ್ರೆಯ ಮನೋಭೀಷ್ಟವನ್ನು ನೆರವೇರಿಸುವುದಾಗಿ ವಚನವಿತ್ತು ತೃಪ್ತಿಪಡಿಸಿ ಬಂದಿರುವೆಯೊ ? ನಮ್ಮ ಕುದುರೆಗಳು ಪ್ರಯಾಣಕ್ಕೆ ಸಿದ್ಧವಾಗಿವೆಯೋ ? ನಾವು ಈಗಲೇ ಹೊರಡಲು ಸಿದ್ಧರಾಗಿರುವೆವು.