ಪುಟ:ನಿರ್ಮಲೆ.djvu/೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೦ ನಿರ್ಮಲೆ ದಿಲ್ಲ ವೆನ್ನು ವುದಕ್ಕೆ ಪ್ರತಿಯಾಗಿ ಈರೀತಿ ಹೇಳುವಿ, ಅವು ಬಹು ಬೆಲೆಯುಳ್ಳ ವಾದಕಾರಣ ನೀನು ಸಿಕ್ಕಿದೆಡೆಯಲ್ಲಿ ಖಂಡಿತವಾಗಿಯೂ ಇಡುವುದಿಲ್ಲ, ಅವು ಗಳ ಬೆಲೆಗೆ ನೀವೇ ಹೊಣೆಯಾಗಿರಬೇಕು. ಚಂಡಿ:ಗಾಬರಿಯಾಗಬೇಡ, ಅವುಗಳೇನಾದರೂ ನಾಶವಾಗಿದ್ದರೆ, ಅವುಗಳ ಬೆಲೆಯನ್ನು ನಾನೇ ಕೊಡುವೆನು, ದುರ್ಮತಿಯನ್ನು ಕೇಳು. ಒಡವೆಗಳು ನಿಜವಾಗಿಯ ಮನೆಯಲ್ಲಿಲ್ಲ, ನಾನೇನು ಸುಳ್ಳಾಡುವೆನೆ ? ದುರ್ಮ:-ನಾನು ಅದಕ್ಕೆ ಸಾಕ್ಷಿ, ಅವು ಮನೆಯಲ್ಲಿಲ್ಲ. ಎಲ್ಲೋ ಕಳುವಾಗಿ ಹೋಗಿವೆ, ಅವು ಹಾಳಾದವೆಂದು ನಾನು ಪ್ರಮಾಣ ಮಾಡಿ ಹೇಳುವೆನು. ಚಂಡಿ :-ದೈವಸಂಕಲ್ಪಕ್ಕೆ ಪ್ರತಿಯಾಡದೆ ಸಮಯಕ್ಕೊದಗಿದು ದನ್ನು ಅನುಭವಿಸಿ ಕೊಂಡಿರುವುದನ್ನು ಕಲಿಯಬೇಕು ಎನ್ನು, ನಮ್ಮ ಆಸ್ತಿಯು ಹಾಳಾದರೂ, ನಾವು ತಾಳ್ಮೆಯನ್ನು ಕಳೆದುಕೊಳ್ಳಬಾರದು. ನನ್ನನ್ನು ನೋಡು, ಎಷ್ಟು ಶಾಂತಳಾಗಿರುವೆನು ? ಕಮ :- ತೊಂದರೆಯು ಇತರರಿಗೆ ಸಂಭವಿಸಿದರೆ ನಾನೂ ಶಾಂತಳಾ ಗಿರಬಲ್ಲೆನು, ಅದು ಸ್ವಭಾವಜನ್ಯವಾದುದೇ ಅಹುದು, ಚ೦ಡಿ:-ನೀನು ಒಹಜಾಣೆಯಲ್ಲವೆ ? ಹಾಳಾದ ಒಡವೆಗಳಿಗಾಗಿ ಇಷ್ಟು ಆಲೋಚನೆಗಳನ್ನು ವ್ಯರ್ಥಮಾಡುವಿ, ಹುಡುಕಿದರೆ, ಪ್ರಾಯಶಃ ಅವು ಸಿಕ್ಕಿದರೂ ಸಿಕ್ಕಬಹುದು, ಅವನ್ನು ಹುಡುಕುವ ಪರ್ಯ೦ತ ನೀನು ನನ್ನ ಕೆಂಪಿನ ಬುಲಾಕನ್ನು ಬೇಕಾದರೆ ಹಾಕಿಕೊಂಡಿರು. ಕಮ:-ಬುಲಾಕನ್ನು ಹಾಕಿಕೊಳ್ಳುವುದೇ ? ಥ ! ಅಸಹ್ಯ. - ಚಂಡಿ:ನಿರ್ಮಲವಾದ ನಿನ್ನ ಮುಖದ ಕಾಂತಿಯು ಮತ್ತಷ್ಟು ಮನೋಹರವಾಗಿರಬೇಕಾದರೆ, ನಿನಗೆ ಕೆಂಪಿನ ಬುಲಾಕೇ ಯೋಗ್ಯವಾದುದು ನಾನು ಬುಲಾಕನ್ನು ಹಾಕಿಕೊಂಡಿರುವಾಗ ನೀನು ನೋಡಿಲ್ಲವೆ ? ಎಷ್ಟು ಚೆನ್ನಾಗಿ ಕಾಣುವೆನು ? ಬುಲಾಕನ್ನು ನಿಜವಾಗಿಯೂ ಕೊಡುವೆನು. ( ಹೊರಟು ಹೋಗುವಳು )