ನಿರ್ಮಲೆ
೬4
ನಾನು ಎಲ್ಲಿ ಬೇಕಾದರೂ ಸಾಕ್ಷಿ ಹೇಳುವೆನು.
ಚಂಡಿ:-ಥ ! ನೀಚ ! ನಿನ್ನೊಡನೆ ನನಗೆ ಸಂಭಾಷಣೆಯು ಸಾಕಾ ಯಿತು, ನನ್ನ ಮಾತನ್ನು ಕೇಳುವುದೇ ಇಲ್ಲ, ಚಿಃ! ಹುಚ್ಚ, ನೀನು ಹುಚ್ಚ ನೆಂದು ನೀನು ಸಾಕ್ಷಿ ಹೇಳುವೆಯೋ ? ಒಂದು ಕಡೆ ಈ ಹುಚ್ಚು ! ಮತ್ತೊಂದು ಕಡೆ ಆ ಮನೆಹಾಳು ಕಳ್ಳರು! ಇಂತಹ ದುರವಸ್ಥೆಯು ನನಗಲ್ಲದೆ ಮತ್ತಾ ರಿಗೂ ಪ್ರಾಪ್ತವಾಗಿರಲಾರದು.
- ದುರ್ಮ:-ಕಳ್ಳರು ಕದ್ದಿರುವರೆಂಬುದಕ್ಕೆ ನಾನು ಸಾಕ್ಷಿ, ಮತ್ತೊಂ ದಕ್ಕೂ ನಾನೇ ಸಾಕ್ಷಿ.
ಚಂಡಿ: ಇನ್ನೊ೦ದುವೇಳೆ ಸಾಕ್ಷಿ ಹೇಳುವೆನೆಂದು ನೀನು ಹೇಳಿದರೆ ನಿನ್ನ ನ್ನು ಹೊರಗೆ ತಳ್ಳುತ್ತೇನೆ, ತಿಳಿಯಿತೆ ? (ಕಮಲೆಯ ಕಡೆಗೆ ತಿರುಗಿ) ಕಮಲೆ, ನಿನ್ನ ಗತಿಯೇನು ? ಎಲಾ ! ಈರಪಾಪಿ, ನಾಯಿ, ನೀನು ನನ್ನ ಸಂಕಟವನ್ನು ನೋಡಿ ನಗುವಿಯ ? ನಿನಗೆ ಸಂತೋಷವಾಗಿದೆಯೊ? ನೀಚ, ತೊಲಗು.
ದುರ್ಮ:-- ಅದಕ್ಕೂ ನಾನೇ ಸಾಕ್ಷಿ.
ಚಂಡಿ:-ನನ್ನನ್ನು ಅವಮಾನಪಡಿಸುವಿಯ ? ನಾಯಿ, ನಿನಗೆ ಸರಿ ಯಾದ ಪ್ರಾಯಶ್ಚಿತ್ರವನ್ನು ಮಾಡುವೆನು. ತಾಳು ; ನಿನಗೆ ಬುದ್ದಿಯನ್ನು ಕಲಿಸುವೆನು.
ದುರ್ಮ:-ಅದಕ್ಕ ನಾನೇ ಸಾಕ್ಷಿ, (ದುರ್ಮತಿಯು ಓಡುವನು. ಚಂಡಿಯು ಹಿಂದೆಯೇ ಓಡುವಳು.)
[ನಿಮ್ಮಲೆಯ ಒಬ್ಬ ದೂತೆಯೂ ಪ್ರವೇಶಿಸುವರು. ] | ನಿಮ್ಮ:-ನಮ್ಮ ದುರ್ಮತಿಯು ಅಪೂರೈಸೃಷ್ಟಿ ಯು. ನಮ್ಮ ಮನೆ ಯನ್ನು ಭೋಜನಶಾಲೆಯೆಂದು ಹೇಳಿರುವನಲ್ಲಾ ? ಹೀಗೂ ಉಂಟೆ ? ಎಂತಹ ದುರ್ಮಾರ್ಗ ? ಹಾ ! ಹಾ !! ಅವನ ಅತ್ಯಗಳನ್ನೆಲ್ಲ ನೆನೆಸಿ ಕೊಂಡರೆ, ಇದೊಂದು ಆಶ್ವರವಲ್ಲ.
ಪುಟ:ನಿರ್ಮಲೆ.djvu/೭೨
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
