ಪುಟ:ನಿರ್ಮಲೆ.djvu/೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


20 ನಿರ್ಮಲ @| ವಿನಯಸಂಪನ್ನನಾದ ಪ್ರಣಯಿಯು ನೆಲವನ್ನೇ ನೋಡುತ್ತ, ದೂರದಲ್ಲಿ ನಿಂತು ಗೌರವದಿಂದ ಬಿಕ್ಕಿ ಬಿಕ್ಕಿ ಮಾತನಾಡಿದವನು, ಇವನೇನೊ? ನಿಲ್ಮಲೆ, ತಂದೆಯನ್ನೇ ಈ ರೀತಿ ಮೋಸಪಡಿಸಬಹುದೆ? ನಿನಗೆ ನಾಚುಕೆಯಿಲ್ಲವೆ? ನಿರ:-ಅಪ್ಪ, ನನ್ನ ಮಾತುಗಳನ್ನು ಕೇಳು, ನಾನು ಮೊದಲಿನಿಂದ ಲೂ ಆಲೋಚಿಸಿ ನಿಶ್ಚಯಿಸಿರುವಂತೆ ಅವರು ವಿನಯಸಂಪನ್ನ ರೇ ಅಹುದ.. ಅಂತಹ ವಿನಯಸಂಪನ್ನರು ಬೇರೊಬ್ಬರಿಲ್ಲ, ನನ್ನಂತೆಯೇ ನಿನಗೂ ನಿಜ ಸ್ಥಿತಿಯು ತಿಳಿದುಬರುವುದು, ಸ್ವಲ್ಪ ಸಾವಕಾಶ, ಅಷ್ಟೆ. ದೇವ-ದೇವರಾಣೆಗೂ ಅವನಂತಹ ಪಟಿಂಗನು ಮತ್ತೊಬ್ಬನಿಲ್ಲ. ಪಟಿಂಗತನವು ಸಾಂಕ್ರಾಮಿಕರೋಗದಂತೆ ವ್ಯಾಪಿಸಬಲ್ಲುದು, ಅವನು ನಿನ್ನ ನ್ನು ಕೇವಲ ದೂತಿಯಂತೆ ಕಂಡು ವರ್ತಿಸಿದನಲ್ಲ ವೆ? ನೀನು ಅವನನ್ನು ಮಹಾ ವಿನಯಸಂಪನ್ನ ನೆನ್ನು ವಿ. ನಿರ:- ಅವರು ವಿನಯಸಂಪನ್ನರೆಂದೂ, ಸ್ವಲ್ಪ ಕಾಲಾನಂತರ ಸರಿಪ ಡಿಸಬಹುದಾದ ಕೆಲವು ದುರ್ಗುಣಗಳು ಮಾತ್ರ ಅವರಲ್ಲಿರುವುದೆಂದೂ, ಸದ್ಗುಣಗಳು ಜಾಗ್ರತೆಯಾಗಿಯೇ ಪ್ರಕಾಶಕ್ಕೆ ಬರುವುವೆಂದೂ, ನಾನು ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಸ್ಥಿರಮಾಡಿಕೊಟ್ಟರೆ, ಈ ತಪ್ಪುಗಳನ್ನು ಕ್ಷಮಿಸು ವಿಯೋ ? ದೇವ:-ನೀನು ನನಗೆ ಹುಚ್ಚು ಹಿಡಿಸುವಂತೆ ತೋರುವುದು, ನೀನೇನೂ ಹೊಸದಾಗಿ ವಿಷಯಗಳನ್ನು ಸ್ಥಿರಪಡಿಸಬೇಕಾಗಿಲ್ಲ, ಅವನಿನ್ನೂ ಇಲ್ಲಿಗೆ ಬಂದು ಸರಿಯಾಗಿ ಮೂರು ಘಂಟೆಗಳ ಕಾಲವಾಗಿಲ್ಲ ; ಆಗಲೇನನ್ನ ಸ್ವಾತಂತ್ರ್ಯವನ್ನೂ ಅಧಿಕಾರವನ್ನೂ ಆಕ್ರಮಿಸಿಕೊಂಡು ಬಿಟ್ಟಿರುವನು. ಅವನ ಪಟಿಂಗತನವು ನಿನಗೆ ಒಪ್ಪಿತವಾಗಿ ಕಂಡುಬರಬಹುದು ; ಆದರೆ ನನ್ನ ಅಳಿಯನ ಗುಣಗಳು ಬೇ: ರೀತಿಯಾಗಿರಬೇಕು, ಇವನ ಗುಣಗಳು ನನಗೆ ಖಂಡಿತವಾಗಿಯೂ ಸರಿಬರುವುದಿಲ್ಲ . ನಿರ:- ಈ ರಾತ್ರೆಯು ಕಳೆಯಲಿ ; ಆಮೇಲೆ ಎಲ್ಲವೂ ಸ್ಪಷ್ಟ ಒ