ಪುಟ:ನಿರ್ಮಲೆ.djvu/೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


وو ನಿರ್ಮಲೆ ವನಾದರೂ ಅವನು ಇಲ್ಲಿಗೆ ಬಂದನಂತರ ನಮಗೆ ಕಾವ್ಯವನ್ನು ಸಾಧಿಸಿ ಕೊಳ್ಳಲು ಹೇಗೆ ಸುಲಭವಾಗುವುದು ? ಕಮ:-ಜವಾಹಿರಿಯು ಭದ್ರವಾಗಿದೆಯಷ್ಟೆ ? - ಪ್ರಿಯ:-ನಾನು ಅದನ್ನು ರಾಮವರ್ಮನ ವಶಕ್ಕೆ ಒಪ್ಪಿಸಿರುವೆನು ಅವನ ಬಳಿಯಲ್ಲಿಯೇ ನಮ್ಮ ಪೆಟ್ಟಿಗೆಗಳ ಬೀಗದ ಕೈಗಳಿವೆ, ಈಗಲೇ ನಾನು ಅವನ ಬಳಿಗೆ ಹೋಗಿ, ನಾವು ಓಡಿಹೋಗಲಿಕ್ಕೆ ತಕ್ಕ ಸನ್ನಾ ಹವನ್ನು ಮಾಡು ವೆನು, ನಮಗೆ ಒಳ್ಳೆಯ ಕುದುರೆಯನ್ನು ಕೊಡುವೆನೆಂದು ದುರ್ಮತಿಯು ವಾಗ್ದಾನ ಮಾಡಿರುತ್ತಾನೆ, ಅವನು ಮರೆಯದಿರುವಂತೆ ಒಂದು ಕಾಗದ ವನ್ನೂ ಬರೆಯುವೆನು. (ಹೊರಟು ಹೋಗುವನು) ಕಮ-ನಾನು ನಮ್ಮತ್ತೆಯಬಳಿಗೆಹೋಗಿ, ದುರ್ಮತಿಯಲ್ಲಿ ನನಗೆ ಬಲವಾದ ಮಮತೆಯಿರುವುದೆಂದು ತಿಳಿಸಿ ಬರುವೆನು, ನಾವು ನಟನೆಯನ್ನು ಮಾಡದಿದ್ದರೆ ಯತ್ನ ವಿಲ್ಲ. (ಹೊರಟು ಹೋಗುವಳು) [ರಾಮವರ್ಮನೂ ಒಬ್ಬ ಸೇವಕನೂ ಬರುವರು) ರಾಮ:- ಇದೇನು ಪ್ರಿಯಸೇನನ ಕೆಲಸ ? ಜವಾಹಿರಿಯ ಪೆಟ್ಟಿಗೆ ಯನ್ನು ನಾನೆಲ್ಲಿ ಭದ್ರಪಡಿಸಲಿ ? ಈ ಭೋಜನಶಾಲೆಯ ಮುಂಭಾಗದಲ್ಲಿ ನಿಂತಿರುವ ಗಾಡಿಯಮೇಲಲ್ಲದೆ ಮತ್ತೆಲ್ಲಿಯಾದರೂ ನನಗೆ ಕುಳಿತುಕೊಳ್ಳ ಲಾದರೂ ಸ್ಥಳವಿದೆಯೆ ? ಪೆಟ್ಟಿಗೆಯನ್ನು ನಾನು ಹೇಳಿದಂತೆ ಭೋಜನಶಾಲಾ ಧ್ಯಕ್ಷಳವಶಕ್ಕೆ ಕೊಟ್ಟು ಬಂದೆಯ ? ಅವಳ ಕಯ್ಯಲ್ಲಿಯೇ ಕೊಟ್ಟೆಯೊ ? ಸೇವಕ:-ಅಹುದ.; ಮಹಾಸ್ವಾಮಿ, ರಾಮ:-ಭದ್ರವಾಗಿಟ್ಟಿರುವುದಾಗಿ ಹೇಳಿದಳೊ, ಇಲ್ಲವೊ ? ಸೇವಕ:-ಭದ್ರವಾಗಿಯೇ ಇಡುವಳು. ನನಗೆ ಅದು ಹೇಗೆ ಸಿಕ್ಕಿ ತೆಂದು ವಿಚಾರಿಸಿ, “ನಿನ್ನ ನಡತೆಯ ವಿಷಯದಲ್ಲಿ ನನಗೆ ಅನುಮಾನವ ಹುಟ್ಟಿರುವುದು' ಎಂದಳು.. (ಹೊರಟು ಹೋಗುವನು)