ಪುಟ:ನಿರ್ಮಲೆ.djvu/೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೭೩ ನಿರ್ಮಲೆ ರಾಮ:- ಹೇಗಾದರೇನು? ಪೆಟ್ಟಿಗೆಯು ಭದ್ರವಾಗಿದೆಯಷ್ಟೆ. ನಾವು ಎಂತಹ ವಿಚಿತ್ರ ಪ್ರಾಣಿಗಳ ಮಧ್ಯದಲ್ಲಿ ಸಿಕ್ಕಿ ಬಿದ್ದೆವು? ಹಾ! ಹಾ! ಆ ಸೇವ ಕಳು ನನ್ನ ಹೃದಯವನ್ನು ಕಯ್ದೆರೆಮಾಡಿಕೊಂಡಿರುವಳು, ಅವಳ ವಿಷ ಯವನ್ನು ವಿಚಾರಮಾಡುತ್ತ ಕುಳಿತರೆ, ಉಳಿದುದೆಲ್ಲಾ ಮರೆತೇಹೋಗು ವುವು, ಅವಳು ನನ್ನವಳೇ-ನನ್ನ ವಳೇ ಆಗಬೇಕು, ಇಲ್ಲವಾದರೆ ನಾನೇ ಮೋಸಹೋಗಿರಬೇಕು. (ಪ್ರಿಯಸೇನನು ಬರುವನು) ರಾಮ: ಪ್ರಿಯಸೇನನೆ, ಈಗ ನೀನೇನುಹೇಳುವೆ? ನನಗೆ ಶಹ ಬಾಸ್‌ಗಿರಿಯನ್ನು ಕೊಡು, ಭಲಾ ಎನ್ನು, ನನ್ನಂತಹ ಪುರುಷನಿಗೆ ಜಯ ವು ದೊರೆವುದಿಲ್ಲವೆ ? ಪ್ರಿಯ:-.ಕೆಲವು ಸ್ತ್ರೀಯರಲ್ಲಿ ಮಾತ್ರವೆಂದು ಹೇಳು, ನಿನ್ನ ಎನ ಯದಿಂದ ಪ್ರಾಪ್ತವಾದ ಜಯೋತ್ಸವಕ್ಕೆ ಕಾರಣರಾರು ? ನಿನ್ನ ಜಯದಿಂದ ನಿಮಗೇನೂ ತೊಂದರೆಯು ಬರುವಂತೆ ತೋರುವುದು. ರಾಮ:-ನಡುವಿಗೆ ಬೀಗದಕೈ ಗೊಂಚಲನ್ನು ತಗಲುಹಾಕಿಕೊಂಡು ಮನೆಯಲ್ಲೆಲ್ಲಾ ಪಾದರಸದಂತೆ ಓಡಾಡುತ್ತಿರುವ ಆ ಮದನಮೋಹನ ಸುಂದ ರಿಯನ್ನು ನೀನು ನೋಡಲಿಲ್ಲ ವೊ? ಪ್ರಿಯ:- ನೋಡಿದೆನು, ಆಮೇಲೆ? ರಾಮ:- ಅವಳು ನನ್ನ ವಳೇ ! ತಿಳೆಯಿತೊ ? ಆ ರೂಪು, ಆ ಲಾವ ಣ್ಯ, ಆ ಸವಿನೋಟ, ಆ 'ಕೆಂದುಟಿಗಳು, ಆ ಕಣ್ಣುಗಳು, ಏನು ? ಅಬ್ಬಾ ! ಎಷ್ಟು ಚೆನ್ನಾಗಿರುವಳು ! ಚುಂಬಿಸಲು ಅವಳು ಅವಕಾಶವನ್ನೇ ಕೊಡಲಿಲ್ಲ. ಪ್ರಿಯ:-ಅವಳ ವಿಷಯವಾಗಿ ಯಾವ ಆಕ್ಷೇಪಣೆಯನ್ನೂ ನೀನು ಹೇಳುವುದಿಲ್ಲ ವೊ ? ಇದನ್ನು ನಾನು ನಂಬಿ ? ರಾಮ: ಓಹೊ ! ಅವಳು ತಾನು ಮಾಡಿರುವ ಕಸೂತಿಯ ಕೆಲಸ ಗಳನ್ನೆಲ್ಲಾ ತೋರಿಸಲು ಒಪ್ಪಿರುವಳು, ಅವಳು ಮಾಡಿರುವ ತಪ್ಪುಗಳನ್ನು 10