೭೪
ನಿರ್ಮಲೆ
ತಿದ್ದ ಬೇಕೆಂದೂ ಹೊಸ ಮಾದರಿಗಳನ್ನು ತೋರಿಸಬೇಕೆಂದೂ ಪ್ರಾರ್ಥಿಸಿ ರುವಳು.
ಪ್ರಿಯ:-ರಾಮವರ್ಮ, ಪಾಪ ! ಆ ಒಡಹೆಂಗಸಿನ ಮಾನವನ್ನು ಕಳೆಯಬೇಕೆಂದು ಸಂಕಲ್ಪಿಸಿರುವಿಯೇನು ?
ರಾಮ:-ಹೋ ! ಹೋ !! ಈ ಸೇವಕರ ಮಾನಮತ್ಯಾದೆಗಳು 'ನಮಗೂ ಗೊತ್ತು ! ಅವಳಿಗೆ ನಾನು ಅನ್ಯಾಯಮಾಡುವುದಿಲ್ಲ, ಉಚಿತ ವಾದ ಸಂಭಾವನೆಯನ್ನು ಮಾಡುವೆನು. ಈ ಮನೆಯಲ್ಲಿ ನನಗೆ ಯಾವ ವಸ್ತು ವೂ ಪುಗಸಟ್ಟೆ ಯಾಗಿ ಬೇಡ.
ಪ್ರಿಯ:- ಅವಳು ಗೌರವಸ್ತ್ರಿಯಾಗಿರಬಹುದು.
ರಾಮ:-ಹಾಗಾದರೆ, ದೇವರಾಣೆ, ನಾನು ಅವಳ ಗೊಡವಿಗೆ ಹೋಗುವುದಿಲ್ಲ.
- ಪ್ರಿಯ:ಇದಿರಲಿ, ನಾನು ನಿನ್ನಲ್ಲಿ ಭದ್ರವಾಗಿ ಇಟ್ಟಿರಲು ಕೊ ಟ್ಟಿದ್ದ ಪೆಟ್ಟಿಗೆಯನ್ನು ಸುರಕ್ಷಿತವಾಗಿ ಇಟ್ಟಿರುವಿಯಷ್ಟೆ ?
ರಾಮ: ಓಹೋ ! ಅದನ್ನು ಬಹಳ ಭದ್ರವಾಗಿಯೇ ಇಡತಕ್ಕ ಏರ್ಪಾಡನ್ನು ಮಾಡಿರುವೆನು, ಬೀದಿಯ ಬಾಗಿಲಿನಲ್ಲಿ ನಿಂತಿರುವ ಗಾಡಿಯ ಇಟ್ಟರೆ ಚನ್ನಾಗಿರುವುದೆಂದು ತಿಳಿದಿಯೇನೊ ? ನೀನು ಬಲು ಜಾಣ. ಅದರ ವಿಚಾರದಲ್ಲಿ ನಿನಗಿಂತಲೂ ಹೆಚ್ಚು ಶ್ರದ್ದೆಯು ನನಗಿರುವುದೆಂದು ನಂಬು, ಪೆಟ್ಟಿಗೆಯನ್ನು ....... ..
ಪ್ರಿಯ :-ಏನು, ಏನು ?
ರಾಮ:ಸುರಕ್ಷಿತವಾಗಿಟ್ಟಿರಲು ಪೆಟ್ಟಿಗೆಯನ್ನು ಈ ಮನೆಯ ಯಜ ಮಾನಿಯ ಬಳಿಗೆ ಕಳುಹಿಸಿದೆನು, ಅವಳು ... .
ಪ್ರಿಯ :-ಯಜಮಾನಿಯ ಬಳಿಗೆ ?
ರಾಮ :---ಅಹುದು, ಯಜಮಾನಿಯ ಒಳಿಗೇ ಕಳುಹಿಸಿರುವೆನು. ಅದಕ್ಕೆ ಅವಳೇ ಹೊಣೆಗಾರಳು.
ಪುಟ:ನಿರ್ಮಲೆ.djvu/೮೩
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
