ಪುಟ:ನಿರ್ಮಲೆ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ನಿರ್ಮಲ ದೇವ:-ನಿನ್ನಿಂದ ನನಗೆ ಸ್ವಲ್ಪವೂ ಸಂತೋಷವಿಲ್ಲ, ಹೊರಡು. ಮೊದಲು ಹೊರಡು, ಮೊದಲು ಮನೆಯಿಂದ ಹೊರಟುನಡೆ. ರಾಮ:-ರಾತ್ರೆಯಕಾಲ, ಅವೇಳೆ, ಅದರಲ್ಲಿಯೂ ಈ ಕಾಳ ರಾತ್ರೆ, ನೀನು.ನಿಜವಾಗಿಯೂ ಪರಿಹಾಸ್ಯ ಮಾಡುತ್ತಿರಬಹುದು. ದೇವ:-ನಾನು ಹೇಳುವುದು ಪರಿಹಾಸ್ಯಕ್ಕಲ್ಲ ; ನನಗೆ ಕೋಪೋ ದ್ರೇಕವಾಗಿದೆ. ಹೊರಡು. ಇದು ನನ್ನ ಮನೆಯೇ ಅಹುದು, ತಿಳಿಯಿತೆ ? ನೀವುಗಳೆಲ್ಲರೂ ಈಗಲೇ ಹೊರಡಬೇಕೆಂದು ಆಜ್ಞಾಪಿಸುವೆನು, ತಡಮಾಡದೆ, ಮತ್ತೊಂದುಮಾತನ್ನೂ ಆಡದೆ, ಹೊರಡಿರಿ, ತೊಲಗಿ, ರಾಮ:-ಹಾ ! ಹಾ !! ಇದೊಳ್ಳೆಯ ಸಹವಾಸ !! ನಾನು ಒಂದು ಹಜ್ಜೆಯನ್ನಾದರೂ ಮುಂದಿಡುವುದಿಲ್ಲ, ತಿಳಿಯಿತೊ ? (ಸಿಟ್ಟು ಗೊಂಡ ವನಂತೆ) ಇದು ನಿನ್ನ ಮನೆಯೊ ? ಚಿಃ ! ಇದು ನನ್ನ ಮನೆ, ನನ್ನ ದು. ನಾನು ಇಲ್ಲಿರುವವರೆಗೂ ನನ್ನ ದೇ ; ಹೊರಡೆಂದು ಹೇಳಲು ನಿನಗೇನು ಅಧಿ ಕಾರವಿದೆ ? ಇಂತಹ ಪಟಿಂಗನನ್ನು ನಾನೆಲ್ಲಿಯೂ ನೋಡಲಿಲ್ಲ. ಓಹೋ! ನೀನೇ ಮೊದಲು ಇಲ್ಲಿಂದ ಹೊರಡು. ತಿಳಿಯಿತೆ ? ದೇವ:-ನನ್ನಾಣೆ ! ನಾನು ಇಂತಹ ಪಟಿಂಗನನ್ನು ಇದುವರೆಗೂ ಎಲ್ಲಿಯೂ ನೋಡಲಿಲ್ಲ, ನನ್ನ ಮನೆಗೆ ಬಂದು, ಸ್ವಚ್ಛೆಯಾಗಿ ವರ್ತಿಸಿ, ಸೇವಕರಿಗೆ ಮನಸ್ವಿ ಕುಡಿದು ಮತ್ತರಾಗಿ ಬೀಳುವಂತೆ ಆಜ್ಞೆಯಿತ್ತು, ಇನ್ನೂ ತೃಪ್ತಿಯಾಗದೆ, ಮನೆಯ ನಿ ನನ್ನ ದೇ ಹೊರಡು. ಎಂದು ಹೇಳುವ ನಿನ್ನ ತುಂಟಾಟವನ್ನು ನೋಡಿದರೆ, ನಗುವು ಬರುವುದು, ಹಾ ! ಹಾ!! ಸ್ವಾಮಿ, ಮನೆಯೇನೋ ತಮ್ಮದಾಯಿತು. ಈ ಪದಾರ್ಥಗಳನ್ನು ನಾನು ತೆಗೆದುಕೊ ಳ್ಳುವ ವಿಚಾರವೇನು ? ಸ್ವಾಮಿ, ಇಲ್ಲೊಂದು ಜತೆ ಬೆಳ್ಳಿ ಯ ದೀಪಸ್ತಂಭ ಗಳಿವೆ, ಅಲ್ಲೊಂದು ಗಂಧದ ಮರದ ಪೆಟ್ಟಿಗೆಯಿದೆ. ಇಗೊ ! ಈ ಮರದ ಬೀರು ; ಆ ದಂತದಗೊಂಬೆ. ಇವುಗಳೇನೂ ತಮ್ಮದಲ್ಲ ವಲ್ಲ ? ರಾಮ:-ನಿನ್ನ ಲೆಖ ವನ್ನು ವ್ಯವಸ್ಥೆ ಮಾಡುವೆನು, ಮೊದಲು ಬಿಲ್