ಪುಟ:ನಿರ್ಮಲೆ.djvu/೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆd ನಿರ್ಮಲೆ ಕೊಳ್ಳುವರೇ ಗತಿಯಿಲ್ಲ. ಆ ಸೇವಕಳೊಬ್ಬಳೇ ನನ್ನ ನ್ನು ಸ್ಪಲ್ಪ ವಿಚಾರಿ ಸುವಳು. ಇರಲಿ, ಅವಳು ಈಗ ಇಲ್ಲಿಯೇ ಬರುತ್ತಿರುವಳು, ಅವಳಿ೦ದ | ಹೆಚ್ಚು ಸಂಗತಿಗಳು ತಿಳಿದುಬಂದರೂ ಬರಬಹುದು, (ನಿಮ್ಮಲೆಯು ಬರು ತಿರುವಳು) ಎಲ್ ರಮಣಿ, ಎಲ್ಲಿಗೆ, ಇಷ್ಟು ಅವಸರವಾಗಿ ಹೋಗುವೆ? ಎಲ್ಲಿ, ಒಂದು ಮಾತು, ಒಂದೇ ಒಂದುಮಾತು. [ನಿರಲೆಯು ಬರುವಳು] - ನಿಮ್ಮ :-ಬೇಗ ! ನನಗೆ ಅವಸರ !! ಬೇಗಹೇಳಿ !!! (ಸ್ವಗತ) ಇವ ಲಗೆ ತಮ್ಮ ತಪ್ಪುಗಳೆಲ್ಲವೂ ತಿಳಿದಂತೆ ಇದೆ. ನಿಜಸ್ಥಿತಿಯನ್ನು ತಿಳಿಸುವ ಕಾಲವು ಇನ್ನೂ ಬಂದಿಲ್ಲ, ಆಗಲಿ, ವಿಚಾರಿಸಿ ನೋಡುವ. - ರಾಮ :-ನನ್ನ ಒಂದೇ ಒಂದು ಪ್ರಶ್ನೆಗೆ ಉತ್ತರವನ್ನು ಕೊಡು. ಈ ಮನೆಯಲ್ಲಿ ನಿನಗೇನು ಕೆಲಸವಿದೆ ? ನಿಮ್ಮ :-ಯಜಮಾನನಿಗೆ ನಾನೊಬ್ಬ ನಂಟಳು. 'ರಾಮ :-ಬಡನಂಟಳೊ ? ನಿಮ್ಮ :-ಅಹುದು, ಬಡನಂಟಳೇ ಅಹುದು, ಮನೆಯ ಬೀಗದ ಕೈಗಳನ್ನು ಇಟ್ಟು ಕೊಂಡು, ಮನೆಗೆ ಬಂದ ಅತಿಥಿಗಳಿಗೆ ಬೇಕಾದ ಆನುಕೂ ಲ್ಯಗಳನ್ನೆಲ್ಲಾ ಕಲ್ಪಿಸಿಕೊಡುವುದಕ್ಕೆ ನನ್ನ ನ್ನು ನೇಮಿಸಿದಾರೆ. - ರಾಮ :-- ಈ ಭೋಜನಶಾಲೆಯಲ್ಲಿ ನೀನೇ ಮುಖ್ಯಳೊ ? ನಿಮ್ಮ :-ಇದು ಭೋಜನಶಾಲೆಯೆ ? ಅಯ್ಯೋ ! ಹೋ ! ಹೋ !! ಇದೇಕೆ ಹೀಗೆ ಹೇಳುವಿರಿ ? ಈ ಸುತ್ತಿನಲ್ಲೆಲ್ಲಾ ಗಣ್ಯನೆಂದು ಹೆಸರನ್ನು ಪಡೆದಿರುವ ದೇವದತ್ತನ ಮನೆಯು ಭೋಜನಶಾಲೆಯ ! ರಾಮ-(ಗಾಬರಿಗೆ ಪ್ರಾರಂಭವಾಗುವುದು) ಇದು...ಇದೇನೆ... ದೇವದತ್ತನಮನೆ ? .ಎಲ್ ರಮಣಿ, ಇದೇನೇ ದೇವದತ್ತನ ಮನೆ ? ನಿಮ್ಮ :-ಅಹುದು, ಮತ್ತಾರದೆಂದು ತಿಳಿದಿರಿ ? ರಾಮ:-ಹಾಗಾದರೆ, ಈಗಲೀಗ ಎಲ್ಲವೂ ತಿಳಿದಂತಾಯಿತು.