ಪುಟ:ನಿರ್ಮಲೆ.djvu/೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೮೫ ನಿರ್ಮಲೆ ಕಮ:- ನಿನ್ನಲ್ಲಿ ಯಾರಿಗೆ ತಾನೆ ಪ್ರೇಮವು ಹುಟ್ಟದು? ಎಷ್ಟು ಜಾಣ್ಮ? ಎಷ್ಟು ಮನೋಹರವೂ ವಿಶಾಲವೂ ಕೆಂವೂ ಆದ (ಕೆನ್ನೆ ಯನ್ನು ಸವರುತ್ತ) ಕಪೋಲಗಳು ! ಎಷ್ಟು ಸೌಂದಯ್ಯ? ಚಂಡಿ: ಇಂದಿಗೆ ನಾನು ಧನ್ಯಳಾದೆನು. ದುರ್ಮ:-ನಾನು ಕಮಲೆಯನ್ನು ಮೊದಲಿನಿಂದಲೂ ಪ್ರೀತಿಸುತ್ತಿ ರುವೆನು. ಚಂಡಿ:-ನಮ್ಮ ದುರ್ಮತಿಯಂತೆ ಸುಂದರಪುರುಷರು ಮತ್ತೊಬ್ಬ ರಿರುವರೆ? ಸಾಕ್ಷಾತ್ ಮನ್ಮಥ ! ನಮ್ಮಣ್ಣನೊಬ್ಬನೇ ಹೀಗಿದ್ದವನು. ಕಮಲೆ, ನಿನ್ನ ಒಡವೆಗಳನ್ನೆಲ್ಲಾ ನಿನಗೆ ಕೊಡುವೆನು, ನಾಳೆಯೇ ನಿಮ್ಮ ವಿವಾಹವು ನೆರವೇರಲಿ! ದುರ್ಮತಿಯ ಓದುಬರಹದ 'ಮಾತನ್ನು ಮುಂದೆ ವಿರಾಮವಾದಾಗ ಆಲೋಚಿಸುವ. [ಚಂಡಗುಪ್ತನು ಬರುವನು.1. ಚ೦ಡ:-ದುರ್ಮತಿಯೆಲ್ಲಿ? ಅವನಿಗೊಂದು ಕಾಗದವಿದೆ. ದುರ್ಮ:-ನಮ್ಮಗೆ ಕೊಡು. ಅವಳೇ ನನ್ನ ಕಾಗದವನ್ನು ಮೊ ದಲು ಓದಲಿ. ಚಂಡ:--ನಿನಗೇ ಕೊಡಬೇಕೆಂದು ನನಗೆ ಅಪ್ಪಣೆಯಾಗಿದೆ, ದುರ್ಮ:-ಯಾರ ಅಪ್ಪಣೆ? ಯಾರು ಅದನ್ನು ಕಳಿಸಿದವರು? ಚಂಡ:-ಕಾಗದವನ್ನೇ ಓದಿದರೆ ತಿಳಿಯುವುದು. ದುರ್ಮ:-ನನಗೆ ಹಾಗೆಯೇ ತಿಳಿಯಬಾರದಾಗಿತ್ತೆ.! (ಕಾಗದವನ್ನು ತೆಗೆದುಕೊಂಡು ತಿರುಗಿಸಿ ನೋಡುವನು.) ಕಮ:-(ಸ್ವಗತ) ಕೆಟ್ಟೆವು. ಕೆಟ್ಟೆವು. ಪ್ರಿಯಸೇನನು ದುರ್ಮ ತಿಗೆ ಬರೆದ ಕಾಗದವೆಂದು ಬರವಣಿಗೆಯಿಂದ ತಿಳಿದುಬರುವುದು, ನಮ್ಮ ತೆಗೆ ಈ ವಿಷಯವು ತಿಳಿದರೆ ನಾವು ಮುಳುಗಿಹೋಗುವೆವು, ಸಾಧ್ಯವಾ ದರೆ ಕಾಗದವು ಅವಳ ದೃಷ್ಟಿಗೆ ಬೀಳದಂತೆ ಮಾಡಬೇಕು. (ಚಂಡಿಯನ್ನು