ಪುಟ:ನಿರ್ಮಲೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೬ ನಿರ್ಮಲೆ ನೋಡಿ) ಅತ್ತೆ, ದುರ್ವತಿಯು ಈಗ ರಾಮವರ್ಮನಿಗೆ ಕೊಟ್ಟ ಉತ್ತರಗಳನ್ನು ನೀನು ಕೇಳಿದರೆ ನಕ್ಕು ನಕ್ಕು ಬೀಳುವಿ, ನಿನಗಿನ್ನೂ ತಿಳಿಯದೇನೋ? ಹೀಗೆ ಬಾ ; ದುರ್ಮತಿಗೆ ಕೇಳಿಸದಂತೆ ಎಲ್ಲವನ್ನೂ ಹೇಳುವೆನು, ಬಾ ! ಇತ್ತ ಬಾ!! (ಅವರಿಬ್ಬರೂ ಹೊರಡುವರು.) ದುರ್ಮ:-(ಕಾಗದವನ್ನು ನೋಡುತ್ತ) ಇದೆಂತಹ ವಿಚಿತ್ರವಾದ ಬರ ವಣಿಗೆ ದುಂಡಗೂ ಉದ್ದುದ್ದಾಗಿಯೂ ಸೊಟ್ಟ ಸೊಟ್ಟಾಗಿಯ ಚಿತ್ರ ವಿಚಿತ್ರವಾಗಿಯೂ ಇದೆ. ಅಚ್ಚಿನಕ್ಷರವನ್ನು ಓದಲು ನನಗೆ ಬರುವುದು, ಈ ಗಂಡಾಂತರದ ಹಾಳು ಮೋಡಿಯನ್ನು ಓದಬಲ್ಲವರಾರು ? ಈ ಕಾಗದದಲ್ಲಿ ಅಕ್ಷರದ ತಲೆಯಾವುದೊ ಬಾಲವಾವುದೊ ತಿಳಿವುದಿಲ್ಲ. ವಿಳಾಸವೇನೊ ಮಹಾರಾಜಶ್ರೀ ದುರ್ಮತಿರಾಯರಿಗೆ' ಎಂದಿದೆ. ನನ್ನ ಹೆಸರನ್ನು ನಾ ನು ಚನ್ನಾಗಿ ಓದಬಲ್ಲೆನಲ್ಲವೆ ? ಅದೂ ಆಶ್ಚರ್ಯವೇ ಸರಿ. ಕಾಗದವನ್ನು ಒಡೆದರೆ, ಸರಿ;-ಸರಿ-ನನ್ನ ತಲೆ ! ನನಗೇನು ತಿಳಿವುದು ? ಕಾಗದದ ಸ್ವಾರಸ್ಯ ವೇನಿರಬಹುದು ? ತಿಳಿಯದು ! ಏನುಮಾಡಲಿ ! (ಕಾಗದದ ಮಡಿಕೆಯನ್ನು ಬಿಚ್ಚಿ ಹಿಡಿದು ನೋಡುವನು.) - ಚಂಡಿ:-(ಒಂದುಭಾಗದಲ್ಲಿ) ಹಾ ! ಹಾ !! ಬಹಳ ಸೊಗಸು ! ದು ರ್ಮತಿಯನ್ನು ಮಾತಿನಲ್ಲಿ ಸೋಲಿಸಲು ಆ ತತ್ವಜ್ಞನಿಗೆ ಕಷ್ಟವಾಯಿತೆ ? ಕಮ:-ಅಹುದು; ಅತ್ತೇ, ನಾನೇನು ಸುಳ್ಳಾಡು ವೆನೆ? ಇನ್ನೂ ಸ್ವಾ ರಸ್ಯವನ್ನು ಹೇಳುವೆನು, ಕೇಳು, ಹೀಗೆ ಬಾ, ರಾಮವರ್ಮನು ದುರ್ಮ ತಿಯ ಮಾತುಗಳಿಗೆ ಸಿಕ್ಕಿಕೊಂಡು ಒದ್ದಾಡಿದ ರೀತಿಯನ್ನು ಹೇಳುವೆನು. ಹೀಗೆ ಬಾ. ಚಂಡಿ:-ದುರ್ಮತಿಯೇ ಒದ್ದಾಡಿದನೆಂದು ನನಗೆ ತೋರುವುದು. - ದುರ್ಮ:-(ಇನ್ನೂ ಕಾಗದವನ್ನು ನೋಡುತ್ತ) ಇದೆಂತಹ ಬರಹ ! ಇದೇನು ಇಂಗ್ಲೀಷ್ ? ಕನ್ನಡವೊ ? ಓಹೋ ! ಇದು ಕನ್ನಡಾಕ್ಷರ, (ಓದುವನು) ಸ್ವಾಮಿ', ಸರಿ, ಮುಂದಕ್ಕೆ ಮ' ಆಮೇಲೆ ಟ' ಅನಂ