ಪುಟ:ನಿರ್ಮಲೆ.djvu/೯೯

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೯೦ ನಿರ್ಮಲೆ ಕಮ:-ಇಷ್ಟಾದರ ಇವನ ಕುಯುಕ್ತಿ, ಅಸೂಯೆಗಳನ್ನು ನೋಡಿ. ನಮ್ಮ ದುರವಸ್ಥೆಯನ್ನು ನೋಡಿಯ ಇವನು ಆನಂದದಿಂದಿರುವನು. ಪ್ರಿಯ:-ಅವಿವೇಕಶಿಖಾಮಣಿ! ಕಷ್ಟ ಸುಖಗಳ ಸುಳಿವನ್ನೇ ತಿಳಿ ಯದ ನಾಯಿ! ದುರ್ಮ:- ಇದೇನು ಗೋಳು ಬಂತಪ್ಪಾ ; ಒಬ್ಬೊಬ್ಬರನ್ನಾಗಿ ಈ ದೊಣ್ಣೆಯಿಂದ ಬಡಿದುಬಿಡುವೆನು. (ಮಗ್ಗ ಲಿನಲ್ಲಿಯೇ ಇದ್ದ ಒಂದು ದೊಣ್ಣೆ ಯನ್ನು ತೆಗೆದುಕೊಳ್ಳುವನು.) ರಾಮ:-ಅವನು ನಮ್ಮ ಕೋಪಕ್ಕೆ ಪಾತ್ರನಾಗಲೂ ಅರ್ಹನಲ್ಲ. ಪ್ರಿಯಸೇನನೆ, ನಿನ್ನ ನಡತೆಯಲ್ಲೇ ನನಗೆ ಅನುಮಾನವು ಬಂದಿರುವಾಗ ಅವನ ಪಾಡೇನು? ನಾನು ಈ ಮನೆಯ ವಿಷಯದಲ್ಲಿ ಮೋಸ ಹೋಗಿರುವೆನೆಂದು ತಿಳಿದೂ, ನೀನು ನನ್ನ ತಪ್ಪನ್ನು ತಿದ್ದಲಿಲ್ಲವಲ್ಲಾ ? ಇದು ಸರಿಯೋ ? ನ್ಯಾಯವೋ? ಪ್ರಿಯ:-ಆಶಾಭಂಗದಿಂದ ನಾನು ಸಾಯುತ್ತಲಿರುವಾಗ, ನಿನಗೆ ಸಮಾಧಾನವನ್ನು ಕೊಡಬೇಕೊ? ರಾಮವರ್ಮನೆ, ಅದು ಸ್ನೇಹಧರ್ಮವಲ್ಲ! ರಾಮ:- ಆದರೆ, ಪ್ರಿಯ ಕಮ:-ರಾಮವರ್ಮನೆ, ನಾವು ಸ್ವಲ್ಪ ಕಾಲ ಸುಮ್ಮನಿದ್ದೆವು. ಅಷ್ಟರಲ್ಲಿಯೇ ನಿನಗೆ ನಿಜವನ್ನು ತಿಳಿಸುವ ಕಾಲವು ಮಾರಿಹೋಯಿತು. ಏನು ಮಾಡುವ? [ಸೇವಕನು ಬರುವನು.] - ಸೇವ:-ಕಮಲಾವತಿಯವರೆ, ಯಜಮಾನಿಯವರು ನಿಮ್ಮನ್ನು ಈ ಕ್ಷಣವೇ ಕರೆದುಕೊಂಡು ಬರಬೇಕೆಂದು ಹೇಳಿರುವರು, ಕುದುರೆಯು ಕುಣಿ ದಾಡುತ್ತಿರುವುದು, ನಿಮ್ಮ ಶಾಲು ಮೇಜಿನಮೇಲಿರುವುದು, ಈ ರಾತ್ರೆ ಯೇ ನೀವು ಮೂವತ್ತು ಮೈಲಿ ಪ್ರಯಾಣ ಮಾಡಬೇಕಂತೆ, ಹೊರಡಿ. (ಸೇವಕನು ಹೊರಡುವನು)