ಪುಟ:ನಿರ್ಯಾಣಮಹೋತ್ಸವ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮ ಸಬ್ಬೋಧ ಚಂದ್ರಿಕೆ ಅವುಗಳಲ್ಲಿ ಮೊದಲನೆಯದು ಸಂಸ್ಥೆ ಬೆವರ ಲೋಕಸಂಗ್ರಹಕ್ರವ, ಎರಡನೆಯದು ಸಂಸ್ಥೆಯವರ ದಿನಚರ್ಯೆ, ಮೂರನೆಯದು ಸಂಸ್ಥೆಗಳ ಯೋಗಕ್ಷೇವುಗಳ ಸಾಧನ, ಇವುಗಳಲ್ಲಿ ಮೊದಲನೆಯ ಸಂಗತಿಯಾದ ಲೋಕ ಸ೦ಗ್ರಹವನ್ನು ನಿರೀ ಕ್ಷಿಸುವಾ. ಮೊದಲನೆಯ ಅತಿಥಿ ಸತ್ಕಾರದ ಸಂಸ್ಥೆಯಲ್ಲಿ ಸಂಗ್ರಹವಾಗುವವ ರಲ್ಲಿ ಅತಿಥಿಗಳು, ಸೇವಕರು ಎಂಬ ಎರಡು ವರ್ಗಗಳಿರುವವು, ಅತಿಥಿಗಳು ತಕ್ಕಷ್ಟಕ್ಕಿಂತ ಹ7ು ದಿನ ಇದ್ದರೆಂದರೆ, ಅವರು ಸೇವಕರಾಗುವರು ; ಈ ಸೇವ ಕರಲ್ಲಿ ಬಹ.ಜನರು ಬೇಗನೆ ಅಶನಾರ್ಥಿ ವರ್ಗಕ್ಕೆ ಸೇರುವದರಿಂದ ಈ ಸಂಸ್ಥೆ ಯಲ್ಲಿ ಆಶನಾರ್ಥಿವರ್ಗವು ದಿನದಿನಕ್ಕೆ ಹೆಚ್ಚು ನಡೆದಿರುವದು.ಈ ಹಿಂಡಿನಲ್ಲಿ ಅತಿಥಿ ಗಳು ಅಡಗಿದರು, ವಿದ್ಯಾರ್ಥಿಗಳು ಆನ೦ದದನಕ್ಕೆ ಭಾರವಾಗಹತ್ತಿದರು, ವಿದ್ಯಾರ್ಥಿ ಗಳಿಗೆ ಇರಲಿಕ್ಕೆ ಸ್ಥಳ ಸಹಸಿಗದೆ ಹೋಯಿತು! ಅತಿಥಿಸೇವೆಯ ಸವಿಎಚೀನತೆಗೂ, ವಿದ್ಯಾರ್ಥಿಗಳ ಯೋಗಕ್ಷೇಮಕ್ಕೂ ಬಾಧೆ ಬರಹತ್ತಿತು , ಆನಂದವನಕ್ಕೆ ಜೋಳದ ನುಚೂ ಈಡಾಗದ ಹಾಗಾಯಿತು ! ಇದನ್ನು ನೋಡಿ ಶ್ರೀ ಗುರುಗಳು<< ಮಹಾರಾಜಾ , ದೇಹವು ಮೂರು ಮೊಳವಾದರೆ, ಸೇವೆಯು ಆರು ಮೊಳವಾಯಿ ಶು , ” ಎಂದು ಸೌಮ್ಯನುಡಿಯಿಂದ ತಿರಸ್ಕರಿಸುತ್ತಿದ್ದರು ; ಆದರೆ ನನಗೆ ಇದೊ೦ದು ಕೌತುಕದಮಾತಾಗಿ ಪರಿಣಮಿಸಿತು! * ಸ್ಮಾ ವಿಯ ಪುಣ್ಯ ನಡೆಯುತ್ತದೆ. ಮಹಾರಾಯನು , ಯಾರು ಬೇಡವೆನ್ನಲಿಕ್ಕೇನು ? ಯಾರೇನು ತಮ್ಮ ಮನೆಯಿಂದ ಹಾಕತ್ತಾರೋ ? ಸ್ನಾ ವಿ ನಡಿಸುತ್ತಾನೆ” ಎಂಬ ಮಾತುಗಳೇ ಅಗ್ರಹಾರದಲ್ಲಿ ಇರಲಿಕ್ಕೆ ಸಾಕಷ್ಟು ಆಧಾರಗಳು, ಈ ಸಂಸ್ಥೆಯಲ್ಲಿ ಕೌಟುಂಬಿಕರವಿಷಯವಾಗಿ ಉದಾಸೀನಭಾವವಿರುವದರಿಂದ, ಈ ಸಂಸ್ಥೆಯೊಳಗಿನಕ:ಟುಂಬದ ಜನರೂ ಉದಾಸೀ ನರಾಗಿರುವರು, ಮುಖ್ಯಮಂತು, ಈ ಸಂಸ್ಥೆಯೊಳಗಿನ ಕುಟುಂಬದವರು, ಹೊರಗೆ ಮೋಹ ತೊರಿಸದಿರಬೇಕೆಂದು ಎಚ್ಚರಪಡವದುವಿಶೇಷವಾಗಿರುತ್ತದೆ! ಯಾಕಂ ದರೆ, ಇವರು ತಮ್ಮ ಮಕ್ಕಳುಮರಿಗಳನ್ನು ಎತ್ತಿ ಕೊಳ್ಳಲಿಕ್ಕೆ ಕೂಡ ಅ೦ಜವರು , ಇಂಥ ಅಂಜುಬುರುಕರು, ಅಥವಾ ಹೊಟ್ಟೆಯ ಮಕ್ಕಳನ್ನೇ ಪ್ರೀತಿಸಲಾರದವರು ಜಗತ್ತನು ಹ್ಯಾಗೆ ಪ್ರೀತಿಸುತ್ತಾರೋ ತಿಳಿಯದು ! ಇದಕ್ಕೆ ವಿರುದ್ದವಾಗಿ ೨ ನೆಯ ಸಂಸ್ಥೆಯಲ್ಲಿ ಲೋಕಸಂಗ್ರಹದ ಕ್ರಮವು ಸಾಗುವದು, ಅತಿಥಿಗಳಿಗೆ ಈ ಸಂಸ್ಥೆಯಲ್ಲಿ ಯ ಪ್ರತಿಬಂಧವಿಲ್ಲ ; ಆದರೂ ಅತಿಥಿಗಳು ಹೋಗಿ ಸೇವಕರ , ಸೇವಕರು ಹೋಗಿ ಅಶನಾರ್ಥಿಗಳೂ ಈ ಸಂಸ್ಥೆಯಲ್ಲಿ ಆಗಲಾರರು, ವಿದ್ಯಾರ್ಥಿಗಳ ವಿದ್ಯಾಬ್ಯಾಸಂಗಕ್ಕೆ ಎಲ್ಲ ಬಗೆಯಿಂದ