ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣ ಮಹೋತ್ಸವ. ೪೯

  • - *

ಗಳ ನಿವಾರಣಮಾಡಿದ್ದ , ಸ್ವಾಭಾವಿಕವಾಗಿ ಪ್ರಕಟವಾದ ಆತನದೈವಿಕ ಕೃತಿ ಗಳನ್ನೂ ವರ್ಣಿಸಲಿಕ್ಕೆ ಇಲ್ಲಿ ಸ್ಥಳವಿಲ್ಲದ್ದರಿಂದ ವಿಷಾದ ಪಟ್ಟು ಬಿಡಬೇಕಾಗಿದೆ. ಅವೆಲ್ಲವುಗಳ ವರ್ಣನವನ್ನು ಶ್ರೀ ಗುರುಗಳ ತಾತ್ವಿಕವೂ-ರಹ ಓಪೂರ್ಣವೂಗಂಭೀರವೂ-ಮನೋಹರವೂ-ಬೋಧ ಪ್ರದವೂ ಆದ ವಿಸ್ತ್ರತ ಚರಿತ್ರವು ಸಿದ್ಧವಾದ ಬಳಿಕ ವಾಚಕರು ಓದಿ ಧನ್ಯರಾಗಬಹುದು , ಸದ್ಯಕ್ಕೆ ನಿರ್ಯಾಣ ಪ್ರಸಂಗ ವರ್ಣನೋಚಿ ತವಾದಷ್ಟು ಶ್ರೀ ಗುರುವಿನ ಕೃತಯುಗದ ಸಂಗತಿಗಳನ್ನು ತಿಳಿಸು ವೆವು, ಈ ಯುಗದಲ್ಲಿ ಶ್ರೀಗುರುವು-ಪ್ರತಿನಿಶ್ಯ ಬೆಳಗಿನ ಜಾವದಲ್ಲಿ ಎದ್ದು ತೋಟ ತೋಟ ತಿರುಗಿ ದ್ರಾ ದಶಪುಷ್ಪಗಳನ್ನು ತರಬೇಕು ; ಅನುಷ್ಠಾನದ ಯಾವತ್ತೂ ಅನುಕೂಲತೆಗಳನ್ನು ಪರರ ಹಂಗರಿಲ್ಲದೆ ತಾನೇ ಕೈ ಮುಟ್ಟಿ ನೋಡಿಕೊಳ್ಳಬೇಕು; ಅಲ೦ಕಾರಯುಕ್ತ ದೇವಪೂಜೆಯಿಂದ ತಾನು ಆನಂದವಗ್ಗ ನಾಗಿ, ಜನರ ಚಿತ್ತವನ್ನು ಹರಣಮಾಡಬೇಕು ; ಪ್ರಸಂಗ ಬಂದರೆ ಕುಟ್ಟ ಬೇಕು, ಬೀಸಬೇಕು; ಒಂದೊಂದುದಿನ ಬೆಳತನಕ ನಿಂತು ಭಜನಮಾಡುವಾಗ ಚಪ್ಪಾಳೆಬಡೆದು ಬಡೆದು ಕೈಯಲ್ಲಿ ರಕ್ತ ಬರ ಬೇಕ; ಎರಡೆರಡು ಮರುವರು ಉಪೋಷಣಮಾಡಬೇಕು; ಇಳಿಯಹೊತ್ತಿನಲ್ಲಿ ಒಪ್ಪತ್ತು ಊಟಮಾಡಬೇಕು , ಈ ಯುಗದಲ್ಲಿ ಶ್ರೀ ಗುರುವು ಮಂದಿಯ ಸಂಗಡ ಮಾತಾಡುವದೇ ಕಡಿಮೆ. ಅಷ್ಟಾನಕಾಲದಲ್ಲಿ ಯಂ ತು ಭಾಷಣವು ತೀರವರ್ಜ್ಯ, ಯಾವಾಗಲ ಅರ್ಧ ಮುಚ್ಚಿದ ಕಣಗಳಿಂದ ಜನರನ್ನು ನೋಡುವದು , ಮುಖ ಕ್ಕಿಂತ ಜನರ ಪಾದಗಳ ಮೇಲೆ ಲಕ್ಷ ಬಹಳ, ಹೋಗುವಾಗ- ಬರುವಾಗ, ಕೂಡು ವಾಗ-ಏಳುವಾಗ, ಮಲಗುವಾಗ- ಎದ್ದು ಕುಳಿತುಕೊಳ್ಳು ವಾಗ ಭೇದ ಭಾವವಿಲ್ಲದೆ ಜನರಿಗೆ ತಲೆಬಾಗಿ ನೆಲಕ್ಕೆ ಕೈ ಮುಟ್ಟಿ ನಮಸ್ಕರಿಸುವದು ಸ್ವಭಾವಗುಣವಾಗಿಹೋ ಗಿತ್ತು. ತಮಗೆ ಬಂದ ದಕ್ಷಿಣೆಗಳನ್ನು ಕಾದಿಟ್ಟ, ಗುಡಿ-ಗುಂಡಾರಗಳೊಳಗಿದ್ದ ಬ್ರಾಹ್ಮಣರ ಯೋಗಕ್ಷೇಮಕ್ಕೆ ವೆಚ್ಚ ಮಾಡುತ್ತಿದ್ದರು , ಧಾತು ಸಂವತ್ಸರದ ಬರ ದಲ್ಲಿ ತಮ್ಮ ಪಾಲಿನ ಆಹಾರದಲ್ಲಿ ಅರ್ಧವನ್ನು ಬಡವರಿಗೆ ಹಂಚಿದರು ಸಾರಾಂಶ, ಕೃತಯುಗದಲ್ಲಿ ತಮ್ಮ ದೇಹದ ಪರಿವೆಯಿಲ್ಲದೆ, ಅಭಿಮಾನರ ಹಿತರಾಗಿ, ಮಾಯಾ ಮೋಹಗಳನ್ನು ಬದಿಗಿಟ್ಟು', ಮಾನಾಪಮಾನಗಳನ್ನು ಲೆಕ್ಕಿಸದೆ ಏಕನಿಷ್ಠೆಯಿಂದ ಘೋರ ತಪಶ್ಚರ್ಯ ಮಾಡಿದರು, ಈ ಗುಪ್ತ ಕಾಲದಲ್ಲಿ ನಿಜವಾದ ಮುಮುಕ್ಷುಗಳೇ ಶ್ರೀ ಗುರುವನ್ನು ಕಂಡು ಅನುಗ್ರಹ ಸ೦ಪಾದಿಸಿದರೆ ಸಂಪಾದಿಸಬಹುದಾಗಿತ್ತು; ಯಾಕಂದರೆ, ಸಿಕ್ಕವರು ಗುರುಗಳ ಬಳಿಗೆ ಬರಲಿಕ್ಕೆ, ಆಗ ಯಾವ ಮಾಯಾವ್ಯಾ ಪಾರಗಳೂ ಜನರಲ್ಲಿ ಮೋಹವನ್ನುಂಟುಮಾಡುತ್ತಿದ್ದಿಲ್ಲ, ಇದರ ಮೇಲೆಯ