ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹತ್ವದ. ಜನರಲ್ಲಿ ಆಗಹತ್ತಿತು, ಭಗವಾನರೆಂದು ಕರೆಯದಿದ್ದರೆ, ಯುಗಧರ್ಮದಂತ ಶಿಷ್ಯರ ಮನಸ್ಸು ನೋಯುತ್ತಿತ್ತೊ ಹ್ಯಾಗೋ ಯಾರಿಗೆಗತ್ಯ! ಈ ದಾ ಸ ರಯುಗದಲ್ಲಿ ಶ್ರೀ ಗುರುಸ್ಥಾನದಲ್ಲಿ ನಿಂತ ಶಿಷ್ಯರ ಹೆಸರು ಲಿ೦ಗಾಭಗವಾನರು, ತಿಪ್ಪಾಪುರಕ್ಕೆ ಹೋದವರು ಶಂಕರಭಗವಾನರು, ಸಾಗರಕ್ಕೆ ಹೋದವರು ನಾರಾಯಣಭಗವಾನರು, ಗು ಭ, ಲಿಂಗಭಗವಾನರೊಬ್ಬರೇ ಸೇವೆಮಾಡ - ಹತ್ತಿದ್ದರಿಂದ, ಶ್ರೀಗುರುವು ತನ್ನ ದೃಷ್ಟಿಯನ್ನು ಅವರಲ್ಲಿ ವಿಶೇಷವಾಗಿ ಇಡಬೇ ಕಾಯಿತು ಶ್ರೀಗುರ.ವಿನ ಈ ಕೃಪಾದೃಷ್ಟಿಯ ಪ್ರಭಾವದಿಂದ ಗು. ಭ, ಲಿಂ ಗಭಗವಾನರ ಯೋಗ್ಯತೆಯು ಹೆಚ್ಚಿತು. ದೊಡ್ಡ ದೊಡ್ಡ ವಿದ್ವಾಂಸರು ಅವರ ಜ್ಞಾನಕ್ಕೂ, ಸದ್ಯಕ್ತಿಗೂ, ಗುರುಭಕ್ತಿಗೂ, ನಿಸ್ಪೃಹತೆಗೂ ತಲೆದೂಗ ಹತ್ತಿದರು. ಲಿಂಗೋಭಗವಾನರು ಸ್ವತಃ ಸಂಚಾರವೂಡಿ ಸೇವೆಯನ್ನು ಧುರಂ ಧರರಾಗಿ ಸಾಗಿಸಹತ್ತಿದರು, ಅವರು ಕೇವಲ ತಪಸ್ತಿ ಗಳಾಗಿ ಕಾಲಹರಣ ಮಾಡಿದರಂತೆ, ಗಟ್ಟಿ ದೋತರ ಉಡಲಿಲ್ಲವಂತೆ, ಸವಿಯುಣಿ ಸುಗಳನ್ನು ಉಣ್ಣಲಿ ಲ್ಲವಂತೆ, ಗಾದಿಯ ಮೇಲೆ ಮಲಗಲಿಲ್ಲವಂತೆ ಕಡೆತನಕ ದೇಹದಂಡನದ ಸೇವೆ ಯನ್ನು ಬಿಡಲಿಲ್ಲವಂತೆ, ಶ್ರೀಗುರುವಿನ ಸೇವೆಯಲ್ಲಿ ಕಡೆತನಕ ದೇಹವನ್ನು ಸವಿ ಸಿದವರಲ್ಲಿ ಶ್ರೀಲಿಂಗಭಗವಾನರು ಅಗ್ರಗಣ್ಯರೆಂದು ಹೇಳಲಿಕ್ಕೆ ಬಾಧೆಯಿಲ್ಲ. ಅವರು ದೇಹದವಿಷಯವಾಗಿದುರ್ಲಕ್ಷಮಡಿ ದೇಹದಂಡನಮಾಡಿದ್ದರಿಂದ, ಅವರಿಗೆ ಹೊಟ್ಟೆ ಶಾಲೆಯ ಬಾಧೆಯು ಉತ್ಪನ್ನ ವಾಯಿತು, ಶ್ರೀ ಗುರುಗಳಂತೆ ಈ ಭಗವಾನರ ಪ್ರೇಯಸ್ಕರಾಚರಣೆಯವರಲ್ಲ; ಅವ ನವರಂತೆ ಶ್ರೇಯಸ್ಕರಾಚರಣೆಯವರು, ಇವರ ಸೇವಾ ಪದ್ಧತಿಯು ಬಹುಕಠಿಣವಾದದ್ದು, ಸ್ವತಃ ಮೈ ಮುರಿದು ನಿರಭಿಮನದಿಂದ ದುಡಿಯುವವರಾದ್ದರಿಂಡ, ಆವರ ಕೈ ಕೆಳಗೆ ಜನರು ಪೂರಯಿಸುವದು ಕಠಿಣವಾಗಿತ್ತು. ಒಂದು ಬಗೆಯಾಗಿ ಲಿಂಗಭಗವಾನರನ್ನು ಅವ್ವನವರ ೧ನೇ ನಂಬರಿನ ಪಟ್ಟ ಶಿಷ್ಯರೆಂದು ಕರೆಯಬಹುದು ಈ ಭಗವಾನರಮೇಲೆಯ, ಆವರ ಸಾಧಿಯಾದ ಕುಟುಂಬದ ಮೇಲೆಯೂ ಆತ್ಮ ನವರ ಪ್ರೇಮಬಹಳ, ಲಿಂಗಭಗವಾನರು ಮಹಾನಿಸ್ಪೃಹಿಗಳು, ಅಥಿತಿಗಳಾಗಿ ಮನೆಗೆ ಬಂದ ಜನರನ್ನು ಮೊದಲನೆಯ ದಿವಸ ದೇವರೆಂತಲೂ, ಎರಡನೆಯದಿವಸ ಬೀಗರೆಂತಲೂ ಭಾವಿಸಿ ನಡಿಸಿಕೊ೦ ಡು, ಮೂರನೆಯದಿವಸ ಮನೆಯವರೆಂದು ತಿಳಿದು, ಅವರನ್ನು ಕೆಲಸಕ್ಕೆ ಜಗ್ಗು ತ್ತಿ ದ್ದರು! ಹೀಗಾಗಿ ನಿರುದ್ಯೋಗಿಗಳ ಸಂಖ್ಯೆಯು ಶ್ರೀಗುರುಸನ್ನಿಧಿಯಲ್ಲಿ ಅಗ ಹೆಚ ಲಿಲ್ಲ, ಇದಕ್ಕೆ ಲಿಂಗಭಗವಾನರ ಪ್ರಖರವಾದ ವರ್ಚಸ್ಸೇ ಕಾರಣವು,