ಪುಟ:ನೀರೆದೆ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಪರಿಚ್ಛೇದ ಬ ದಾಸಿ--ಆರೂ ಇಲ್ಲವೆ ? ಆಶಾ : ಹಾಗಾದರಾರಬಳಿ ಇರುತ್ತಿ? ಹುಡುಗಿ-ಮುದುಕಿಯೊಬ್ಬಳು ದಯೆಗೈದು ತನ್ನ ಮನೆಯಲ್ಲೂ ಇಟ್ಟು ಸ್ವಲ್ಪ ಸ್ಥಳವನ್ನು ಕೊಟ್ಟಿದ್ದಾಳೆ. ದಾಸಿ-ಎಷ್ಟು ದಿನಗಳಿಂದ ಮುದುಕಿಯ ಮನೆಯಲ್ಲಿರುತ್ತಿ? ಹುಡುಗಿ -ಒಂದು ವರ್ಷವಾಗುತ ಬಂದಿತು. ದಾನಿ -ಅದಕ್ಕೆ ಮೊದಲು ಎಲ್ಲಿದೆ? ಹುಡುಗಿಯು ಸುಮ್ಮನಿದ್ದಳು-ಉತ್ತರವನ್ನು ಕೊಡಲಿಲ್ಲ. ದಾನಿ ಯು ಆ ಪ್ರಸ್ತಾಪವನ್ನು ಬಿಟ್ಟು, “ನಿನಾವ ಜಾತಿಯವಳು ? ಎಂದು ಕೇಳಿದಳು. ಹುಡುಗಿ-ಅರೆನಗೆ ಗೊತ್ತಿಲ್ಲ. ದುನಿ-ಮುದುಕಿಯು ನಿನ್ನ ಜಾತಿಯವಳೆ ? ಹುಡುಗಿ--ನಾನದನ್ನು ಹೇಳಲಾರೆನು .ನನಗದು ತಿಳಿಯದು. ದಾನಿಯು ಕ್ಷಣಕಾಲ ಮೌನವಾಗಿ ಚಿಂತಿಸುತ್ತಿದ್ದು, ಚಿಂತಾಂತದಲ್ಲಿ, ನಿ? ಕುಳಿತಿರು, ನಾನು ಹೋಗಿ ಯಜಮಾನಿಗೆ ಹೇಳಿ ಎರಡು ತುತ್ತು ಅನ್ನವನ್ನು ತಂದುಕೊಡುವೆನು ” ಎಂದಳು. ಹೀಗೆಂದು ಹೇಳಿ ದಾನಿಯು ಯಜಮಾನಿಯನ್ನು ಹುಡುಕಿಕೊಂಡು ಹೋದಳು. ಯಜಮಾನಿಯು ಶಯನಾಗಾರದಲ್ಲಿ ಮಂಚದ ಮೇಲೆ ಮಲಗಿ ಕೊಂಡು ಕೈಯಲ್ಲೊಂದು ಬೀಸಣಿಗೆಯನ್ನು ಹಿಡಿದು ಬೀಸಿಕೊಳ್ಳುತ್ತಿ ದಳು. ಬಿಳಿ ಪು ಕಪ್ಪು ಮಿಶ್ರಿತವಾಗಿದ್ದವಳ ತಲೆಯ ಕೂದಲರಾತಿಯು ಮಂಚದಮೇಲೆ ಬಿದ್ದು ಹಾರಾಡುತ್ತಿದ್ದಿತು-ಯಜಮಾನಿಯು ಒಂದು ಮಾಂಸ ಸ್ತೂಪವಿಶೇಷವಾಗಿದ್ದಳು ; ಅದರನಳ ತಸ್ಯಕಾಂಚನಗೌರವರ್ಣದಿಂದಾ ದೋಷವು ಬಹಳಮಟ್ಟಿಗೆ ಮುಚ್ಚಲ್ಪಟ್ಟಿತು. ಅವಳು ಮಂಚದಮೇಲೆ ಉರುಡಾಡುತಿದ್ದುದನ್ನು ನೋಡಿದರೆ, ಮಂಚದಮೇಲೆ ಅವರೇ ಬೇಳೆಯ ರಾತಿಯು ಉದ್ದಾಗಿ ಸುರಿದಿದ್ದಂತೆ ತೋರುವುದು. ದಾಸಿಯು ಮರೆಯಲ್ಲಿ ನಿಂತು ನೋಡಿದಳು.ಯಜಮಾನಿಯು ನಿದಾ ಳು-ಆಗವಳಿಗೆ ತೊಂದರೆಯನ್ನು ಕೊಡದೆ ದಾಸಿಯು ಬೇಗನೆ ಅಡಿಗೆಯ ಮನೆಗೆ ಹೋಗಿ ನೋಡಿದಳು, ಅಡಿಗೆಯವನು ಅನ್ನವನ್ನು ದಾಸದಾಸಿಯ ೪ ೦ ಆ ವಿ ವಿ