ಪುಟ:ನೀರೆದೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀರದೆ wwwoowwwv M ರಾತ್ರಿ ಒಂಭತ್ತು ಫುಳಿಗೆಯಾಯಿತು-ಎರಡು ನರಿಗಳು ಮುಖವೆತ್ತಿ ಅವಳನ್ನು ನೋಡಿತಿದ್ದುದನ್ನು ಕಂಡು ಹುಡುಗಿಯು ಭಯಗೊಂಡಳು. ಆಗವಳು ಕಾತರಕಂಠಯಾಗಿ, “ ಅಜ್ಜಿ : ಬಾಗಿಲ ತೆಗೆ, ನಾನಿನ್ನು ಇಂತಹ ಕೆಲಸವನ್ನು ಮಾಡೆನು ” ಎಂದು ಕೂಗಿದಳು. ಹುಡುಗಿಯ ಕೂಗು ಗ್ರಾಮದ ಗಸ್ತಿನವನ ಕಿವಿಗೆ ಬಿದ್ದಿತು ಗಸಿನ ವನು ಬಂದು ಅವಳ ಕೈಯನ್ನು ಹಿಡಿದೆಳೆದು ಭೈರವಕಂಠದಲ್ಲಿ, “ನೀನಾರು') ಎಂದನು. ಹುಡುಗಿಯು ಭೀತಿಗೊಂಡು ಅಳುವುದಕ್ಕೆ ತೊಡಗಿದಳುಅವಳು ಕಳವು ಮಾಡತಕ್ಕವಲ್ಲವೆಂದು ತಿಳಿದರೂ ಗಸ್ತಿನವನು, ಹುಡುಗಿಯನ್ನು ಕೆಟ್ಟ ನಡತೆಯವಳಂದ ಹಿಡಿದುಕೊಂಡೊಯ್ದರೆ ತನಗೆ ಅತುಲ ಕಿರ್ತಿಯಂ ಟಾಗುವುದೆಂಬಾತೆಯುಳ್ಳವನಾಗಿದ್ದನು -ಮುಖವ ನೋಡಿದ ಬಳಿಕ ಹುಡುಗಿ ಯೆಂದು ಕಂಡು, ನಿರಾಶನಾಗಿ, “ ನೀನಾರು ? ” ಎಂದು ಕೇಳಿದನು. ಹುಡುಗಿಯು ಭಯದಿಂದ ನಡುಗುತ್ತ ಅಳುತ್ತ, “ ನಾನು, ಸಿರಿ! :) ಎಂದಳು. ಹುಡುಗಿಯ ಹೆಸರು ಸೇರದೆ-ಜನರವಳನ್ನು “ ನೀರಿ” ಎಂದು ಕರೆ ಯುವರು-ಅವಳ ಹೆಸರನ್ನು ಹೇಳಿದ ಬಳಿಕ ಗನವನಿಗೆ ಗುರುತಾಗಿ, * ಇಲ್ಲಿ ಕುಳಿತಿರುವುದೇಕೆ ” ಎಂದು ವಿಚಾರಿಸಿದನು. “ ಅಜ್ಜಿಯು ಮನೆಯೊಳಗೆ ಹೋಗಗೊಡಸಳು.” • ಏಕೆ? “ ತಿರುಪೆ ಎತ್ತಲು ತಿರಿಯುವುದಕ್ಕೆ ಹೋಗಿದ್ದವಳು ಹಿಂದಿರಿ. ಬರಲು ಹೊತ್ತಾಯಿತೆಂದು.” ಅದನ್ನು ಕೇಳಿ ಗಸ್ತಿನವನು ಗರ್ದಭನಿಂದಿತಕಂಠದಿಂದ ಮುದುಕಿ ಯನ್ನು ಕೂಗಿ ಕರೆದನು. ಅವನಾ ಚೀತ್ಕಾರದ ಧ್ವನಿಯು ಪ್ರತಿಧ್ವನಿ ಗೊಂಡು ನೆರೆಹೊರೆಯವರೆಲ್ಲರೂ ಎಚ್ಚರಗೊಂಡರು-ಮುದುಕಿಯು ಮನೆ ಯೊಳಗಿನಿಂದ, “ ಅದಾರು ? ” ಎಂದಳು. ಗಸ್ತಿನವನು - (ಪುಟ್ಟಿಯಾಗಿ) -ಬಾಗಿಲ ತೆಗಿ-ನಿನ್ನ ಮೊಮ್ಮಗಳನ್ನ ಒಳಗೆ ಕರೆದುಕೊ,