ಪುಟ:ನೀರೆದೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಆರನೆಯ ಪುಚ್ಚದೆ MMMMMMMMMMMMM ರಮಣೀಮೋಹನನಿಗೆ ಏಕಾಂತವಾಗಿ ವೃತ್ತಾಂತವನ್ನೆಲ್ಲಾ ವಿವರಿಸಿ ಹೇಳಿ ದಳು. ರವ ಇಮೋಹನನು ಕೇಳಿ ಸಂಭೀತನಾದನು. ವಾಮೆಯು, ಈಗ ಸುಮ್ಮನಿರಲು ಸಮಯವಲ್ಲ ” ಎಂದಳು. ರಮಣೀಮೋಹನ- ಈಗೇನನ್ನು ಮಾಡಲಿ ? ವಾಮಾತಾಯಿ ! ನಾಮೆ-ಹುಡುಗಿಯನ್ನು ಬದುಕಿಸು. ಅಯ್ಯೋ ! ಅವಳಿಗಾರೂಇಲ್ಲ. ರಮಣೀ.-ಆರೂ ಇಲ್ಲದವರಿಗೆ ದೇವರಿದ್ದಾನೆ. ಮನುಷ್ಯಯತ್ನ ದಲ್ಲಿ ಸಾಗುವಷ್ಟು ಹುಡುಗಿಗೆಸಲವಾಗಿ ಪ್ರಯತ್ನ ಪಡುವೆನು. - ಹೀಗೆಂದು ಹೇಳಿ ರಮಣೀಮೋಹನನು ಕುದುರೆಯನ್ನು ಹತ್ತಿ ಕೊಂಡು ಠಾಣಾಭಿಮುಖವಾಗಿ ಓಡಿಸಿಕೊಂಡು ಹೋದನು. ಆಗ ಮೂರು ಫುಂಟೆ-ಬಿಸಿಲ ತಾಪವು ಅತಿಯಾಗಿದ್ದಿತು. ಅವನದನ್ನು ಗ್ರಾಹ್ಯಮಾಡ ಲಿಲ್ಲ. ಶಾಲೆಯು ಹತ್ತರದಲ್ಲಿದ್ದಿತು ಒಂದು ಹರಿದಾರಿಯ ದೂರ. ಅತಿ Kಲ್ಪ ಸಮಯದಲ್ಲಿ ಹೋಗಿ ಠಾಣೆಯಲ್ಲಿ ದರೋಗನನ್ನು ನೋಡಿದನು. ದರೋಗನು ರಮಣೀಮೋಹನನನ್ನು ಬಲ್ಲನು. ಗೋಪಾಲಪುರದ ಜಮೀನುದಾರನನ್ನು ಅರಿಯದವರಾರು ? ದರೋಗನು ರಮಣೀಮೋಹನ ನನ್ನು ಕಂಡು ಸಂಭ್ರಮದಿಂದೆದ್ದು ಕುಳಿತುಕೊಳ್ಳಲು ಅವನಿಗೊಂದು ಅಸ ನವನ್ನು ತಂದುಕೊಟ್ಟನು. ಅವನು ಕುಳಿತ ಬಳಿಕ ತಾನೂ ಅವನ ಬಳಿ ಕುಳಿತುಕೊಂಡನು. ರಮಣೀಮೋಹನನು, “ ನಿಮ್ಮ ಬಳಿ ಒಂದು ಕೆಲಸದ ನಿಮಿತ್ತವಾಗಿ ಬಂದೆನು ” ಎಂದನು. ದರೋಗ-ಅಪ್ಪಣೆಯಾಗಲಿ. ರಮ -ಭೂನಿಯನ್ನು ಮಾಡಿದವಳೆಂದು ಒಬ್ಬ ಹುಡುಗಿಯನ್ನು ಹಿಡಿದಿಟ್ಟಿರುವುದಾಗಿ ಕೇಳಿದೆನು. ದರೋಗ--ತಮಗೆ ಸರಿಯಾದ ಸುದ್ದಿಯು ಮುಟ್ಟಿದೆ~ ರಮ-ಹುಡುಗಿಯು ಸಂಪೂರ್ಣ ನಿರೋಸಿದರೋಗ ತಮಗದು ಗೊತ್ತಾದಬಗೆ ಹೇಗೆ ? ರಮ-ಹುಡುಗಿಯು ಮಧ್ಯಾಹ್ನದಲ್ಲಿ ನಮ್ಮ ಮನೆಗೆ ಭಿಕ್ಷಕೆಸಲ ವಾಗಿ ಬಂದಿದ್ದಳು. ಕೃಷ್ಣಪುರಕ್ಕೆ ಹಿಂದಿರಿಗಿ ಹೋಗಲು ಸಾಯಂಕಾಲವಾ ಗಿರಬಹುದು. ಅದಕ್ಕೆ ಸಲವಾಗಿ ಮುದುಕಿಯು ಅವಳನ್ನು ಮನೆಯೊಳಗೆ - ೬ ಇ