ಪುಟ:ನೀರೆದೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀರದೆ ht WwwwM ಹೋಗತೊಡಿಸಲಿಲ್ಲ-ಹುಡುಗಿಯು ಬಾಗಿಲಲ್ಲಿ ಕಾದು ಕುಳಿತಿದ್ದಳು-ರಾತ್ರಿ ಯಾಗಿ ಗಸ್ಸಿನವನು ಬಂದಾಗ ಅವಳದೇ ಸ್ಥಿತಿಯಲ್ಲಿ ಕುಳಿತಿದ್ದವಳನ್ನು ನೋಡಿದ್ದಾನೆ.ಬಳಿಕ ನಡಿದುದನ್ನೆಲ್ಲಾ ಆರೂ ಕಾಣರು. - ದರೋಗ-ಆರೂ ಕಾಣದಿದ್ದರೂ ನಾವದನ್ನು ಅನುಮಾನದಮೇಲೆ ಊಹಿಸಿ ತಿಳಿಯಬೇಕು, ರವು-ಏನೆಂದು ಅನುಮಾನಿಸಿ ತಿಳಿದಿರಿ ? ದರೋಗ-ಹುಡುಗಿಯು ಕೋಲಿನಿಂದ ಹೊಡೆದು ಮುದುಕಿಯನ್ನು ಬೂನುಮಾಡಿದಳೆಂದು. ರಮ-ಮುದುಕಿಯ ಮೈಯಲ್ಲಿ ಹೊಡೆದ ಗುರುತಗಳಿದ್ದುವೆ ? ಮುದುಕಿಯ ಮೈಮೇಲೆ ಹೊಡೆತದ ಗುರುತಿರಲಿಲ್ಲವೆಂದು ದರೋ ಗನಿಗಾಗ ಸ್ಮರಣೆಗೆ ಬಂದು, ಉತ್ತರವನ್ನು ಕೊಡಲು ತೋಚದೆ ಸುಮ್ಮನಿ ದ್ದನು. ರಮಣೀಮೋಹನನು, ” ಹುಡುಗಿಯು ಎಲ್ಲಿದ್ದಾಳೆ ? ನಾನವಳ ನೋಂಮೆ ನೋಡಬಹುದೆ ? ” ಎಂದು ಕೇಳಿದನು, ಹುಡುಗಿಯು ರಮಣೀಮೋಹನನ ಬಳಿ ಅಪರಾಧವನ್ನೊಪ್ಪಿಕೊ ಳ್ಳುವಳೆಂದು ಭಾವಿಸಿ ದರೋಗನು ಆಕ್ಷೇಪವಿಲ್ಲದೆ, ನೋಡಬಹುದೆಂದು ಹೇಳಿ, “ ಬರೋಣಾಗಲಿ, ಹುಡುಗಿಯ ಬಳಿ ಕರೆದುಕೊಂಡುಹೋಗುವೆನು” ಎಂದು ಹೇಳಿದನು. ಇಬ್ಬರೂ ಎದ್ದು ಸೆರೆಮನೆಯೊಳಗೆ ಹೋದರು. ಹುಡುಗಿಯುಳನ್ನ ಕುಸುಮಿತ ಅತಿಕೆಯಂತೆ ದೂಳಿನ ಬಿದ್ದಿದ್ದಳು-ರಮಣಿಮೋಹನ ನನ್ನು ಕಂಡು ಅಜ್ಞೆಯಿಂದ ಸಂಕುಚಿತೆಯಾಗಿ ಮೆಲ್ಲ ಮೆಲ್ಲನೆ ಎದ್ದು ಕುಳಿತಳು. ದರೋಗನು ರಮಣೀಮೋಹನನನ್ನು ಕುರಿತು, “ ತಾವು ಹುಡುಗಿ ಯನ್ನು ಕೇಳೋಣಾಗಲಿ, ಅವಳು ಮುದುಕಿಯನ್ನು ಹೇಗೆ ಗೂನುಮಾಡಿ ದಳೊ ಅದನ್ನು ಹೇಳಲಿ-ಹುಡುಗಿಯು ತಮ್ಮನ್ನು ಸಮ್ಮಾನಿಸುತ್ತಾಳೆ. ತಾವು ಕೇಳಿದರೆ ಅವಳು ಹೇಳದಿರಳು” ಎಂದು ಹೇಳಿದನು, ರಮಣೀಮೋಹನನು ಸ್ವಲ್ಪ ಉತ್ತೇಜಿತ ಕಂಠದಿಂದ, “ ಹುಡುಗಿ ಯನ್ನು ಕೇಳುವುದೇನು ? ಅವಳು ಗೂನು ಮಾಡಿದಳೆ ಇಲ್ಲವೆ ಎಂದು ಹ