ಪುಟ:ನೀರೆದೆ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪರಿಚ್ಛೇದ ೨೫ wwwwwwwwwwwwwwwwwwwwwwwwwwwwwwwwwwwwwww ಹುಡುಗಿಯು ಅಧೋವದನೆಯಾಗಿ ಉತ್ತರವನ್ನು ಕೊಡಲ್ಲ. ಪುನಃಪುನಃ ಒತ್ತಾಯಮಾಡಿದುದರಮೇಲೆ, 'ಮುದುಕಿಯು ಹೊಡಿದಿದ್ದಳು” ಎಂದಳು. ಈ ದರೋಗನು ಹೊಡೆಯಲಿಲ್ಲವೆ ? ೨೨ ಅವಳ ಉತ್ತರದಮೇಲೆ ದರೋಗನ ಜೀವನಮರಣಗಳು ನಿರ್ಭ ರವಾಗಿದ್ದುವು. ದರೋಗನು ಮನಸ್ಸಿನಲ್ಲಿ, “ ಅಯ್ಯೋ ! ಹೊಡಿದೆನೇಕೆ ?- ತಾಯಿ, ದುರ್ಗೆ ! ಈತಡವೆ ರಕ್ಷಿಸು-ಮುಂದೆಂದೂ ಆರ ಮೇಲೂ ಕೈಯೆ ತ್ತುವುದಿಲ್ಲ” ವೆಂದಂದುಕೊಂಡನು. ಆದರೆ ದುರ್ಗೆಯು ರಕ್ಷಿಸಲಿಲ್ಲ-ಹುಡುಗಿಯು ಅಸ್ಪುಟಸ್ಮರದಿಂದ, “ ಅಹುದು, ಹೊಡಿದನು -ಆದರೆ ನಾನದಕ್ಕೆ ಸಲವಾಗಿ ದುಃಖಿತೆಯಾಗಿಲ್ಲ” ವೆಂದಳು. ಸಾಹೆಬ-ನೀನು ದುಃಖಿತೆಯಾಗದಿದ್ದರೂ ಕಾನೂನು ದುಃಖಿತ ವಾಗಿದೆ. ಹೀಗೆಂದು ಹೇಳಿ ಬಳಿಕ ಸಾಹೆಬನು ಸಾಕ್ಷಿಗಳನ್ನು ಕುರಿತು, * ದರೋಗನು ಹೊಡಿದುದನ್ನು ನೀವು ನೋಡಿದಿರಾ ? ಎಂದು ವಿಚಾರಮಾ ಡಿದನು. ಸಾಕ್ಷಿಗಳು ಹಿಂದುಮುಂದು ನೋಡುತಿದ್ದರು-ಸಾಹೇಬನು, “ ನಿಮಗೆ ಭಯವಿಲ್ಲ-ದರೋಗನನ್ನು ದಸ್ತಗಿರಿ ಮಾಡಿದೆ ” ಎಂದನು. ಬಳಿಕ ಸಾಕ್ಷಿಗಳೆಲ್ಲರೂ ಏಕವಾಕ್ಯವಾಗಿ, ಹುಡುಗಿಯನ್ನು ದರೋ ಗನು ಹೊಡೆದುದನ್ನು ಕಂಡೆವೆಂದು ಹೇಳಿದರು. ರಮಣೀಮೋಹನನು ಹಿಂದಿದ್ದವನು ಮುಂದುವರಿದು ಬಂದು, * ಸಾಹೆಬ: ದರೋಗನಿಗೆ ಬೇರೆ ಸ್ಥಳಕ್ಕೆ ಬದಲಾಯಿಸಿದರೆ ಸಾಕು. ಅವ ನಿಗೆ ಬೇರೆ ವಿಧವಾಗಿ ದಂಡಿಸಿದರೆ, ಫಿರ್ಯಾದಿಯು ನಿಮಗೆ ಸಿಕ್ಕಳು !” ಎಂದ ಹೇಳಿದನು. ಹೀಗೆಂದು ಹೇಳಿ ಹುಡುಗಿಯ ಕೈಯನ್ನು ಹಿಡಿದುಕೊಂಡು ಠಾಣೆ ಯಿಂದ ಹೊರಟುಹೋದನು.