ಪುಟ:ನೀರೆದೆ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

구이 ಸೀರದೆ ಏಳನೆಯ ವರಿಚ್ಛೇದ. ೦ ಟ

  • ವಾಮಾ, ತಾಯಿ : ) “ ಏನೋ ಮಗು ! ”

ಹುಡುಗಿಯನ್ನು ಕರತಂದಿದ್ದೇನೆ. ” “ ಒಳ್ಳೆಯ ಕೆಲಸವನ್ನು ಮಾಡಿದೆ ನೀನು ಚಿರಜೀವಿಯಾಗಿರು ? ” ಹುಡುಗಿಯು ಸಂಕುಚಿತಭಾವದಿಂದ ಒತ್ತಟ್ಟು ನಿಂತಿದ್ದಳು. ನಾಮೆ ಯು ಅವಳನ್ನು ನೋಡಿ, “ ಆಹಾ ! ಇಂತಹ ಹೆಣ್ಣು ಗೂನನ್ನು ಮಾಡು ವಳೆ ? ದರೋಗನಿಗೆ ದಯೆ, ಧರ್ಮ ಆವುದೂ ಇಲ್ಲವೆ ? ” ಎಂದಳು. ಹುಡುಗಿಯನ್ನು ವಾಮ ತಾಯಿಯ ವಶದಲ್ಲಿ ಬಿಟ್ಟು ರಮಣೀಮೋ ಹನನು ತಾಯಿಯ ಬಳಿ ಹೋವನು-ನಾಮೆಯು ಹುಡುಗಿಯನ್ನು ಕೊಳಕ್ಕೆ ಕರೆದುಕೊಂಡು ಹೋಗಿ ಸ್ನಾನವನ್ನು ಮಾಡಿಸಿ, ಉಟ್ಟುಕೊಳ್ಳಲು ತನು ದೊಂದು ಸೀರೆಯನ್ನು ಕೊಟ್ಟಳು. ಇತ್ಯ ರನುಸೀಮೋಹನನು ತಾಯಿಯಬಳಿ ಹೋಗಿ, ಇಂದು ನಿನ್ನ ಅನುಮತಿಯನ್ನು ಪಡೆಯದೆ ಒಂದು ಕೆಲಸವನ್ನು ಮಾಡಿದೆನು ” ಎಂದನು. ತಾಯಿ-ಏನನ್ನು ಮಾಡಿದೆಯೋ, ಮಗು ? ರಮಣಿ-ಪೊಲಿಸದರೋಗನು ಒಬ್ಬ ಚಿಕ್ಕ ಹುಡುಗಿಯಮೇಲೆ ಬಹಳ ಅತ್ಯಾಚಾರಗಳನ್ನು ನಡೆಯಿಸಿದ್ದನು. ಅವಳನ್ನು ಪೊಲಿಸ ಗ್ರಾಸ ದಿಂದ ತಪ್ಪಿಸಿ ಕರಕೊಂಡು ಬಂದೆನು. ತಾಯಿ-ಪೊಲಿಸರ ಗೋಜಿಗೆ ಹೋಗದಿರುವುದು ಒಳ್ಳೆಯದು. ರಮಣೀ. ಪೊಲಿಸರು ಅತ್ಯಾಚಾರಗಳನ್ನು ಮಾಡುತ್ತಿರುವಾಗ ನಾನು ಕುಳಿತು ನೋಡುತ್ತಿರುವುದೆ ? ತಾಯಿ-ದೇಶದಲ್ಲಿ ಎಷ್ಟೋ ಅತ್ಯಾಚಾರಗಳು ನಡೆಯುತ್ತಿವೆ-ಅದ ನೆಲ್ಲಾ ಕುರಿತು ಪೊಲಿಸರೊಂದಿಗೆ ಕಾದಾಡಿ ತೀರುವುದೆ ? ರಮಣಿ:-ನಾವು ಹೋರಾಡದಿದ್ದರೆ, ಬಡವರನ್ನು ಕಾಪಾಡದಿದ್ದರೆ, ಮತ್ತಾರು ಅವರಗೆ ಸಹಾಯವನ್ನು ಮಾಡುವರು ?