ಪುಟ:ನೀರೆದೆ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ನೀರದೆ wwwwwww www M ಬ. ಹುಡುಗನು ಅಭಿಮಾನಗೊಂಡಿದ್ದನೆಂದು ತಾಯಿಯು ತಿಳಿದವಳು, ಒಬ್ಬ ದಾನಿಯನ್ನು ಕರೆದು, " ಎಲ್ಲಿಂದಲೋ, ಒಬ್ಬ ಹುಡುಗಿಯು ಬಂದಿ ದ್ದಾಳೆ; ಅವಳಿಗೆ ಎರಡುತುತ್ತು ಅನ್ನವನ್ನು ಕೊಡುವಂತೆ ಹೇಳು. ಈಗ ರಾತ್ರಿ ಮತ್ತೆಲ್ಲಿಗೆ ಹೋಗುವಳು ? ಇಲ್ಲಿಯೇ ಇರಲಿ-ನಾಳೆ ಬೆಳಿಗ್ಗೆ ಅವ ಳನ್ನು ಮನೆಯಿಂದ ಹೊರಗೆ ಕಳುಹಿಸಿ ಬಿಡಲಿ ” ಎಂದು ಹೇಳಿದಳು. ದಾಸಿ-ನಾಮೆಯು ಅವಳಿಗೆ ಊಟವನ್ನು ಮಾಡಿಸಿದಳು, ¥ರು. ಎಂಟನೆಯ ಪರಿಚ್ಛೇದ. ಮರುದಿನ ಬೆಳಿಗ್ಗೆ ಯಜಮಾನಿಯೆದ್ದು ನೋಡಿದಳು. ಹುಡುಗಿ ಯೊಬ್ಬಳು ಹಜಾರದಿಂದ ಅಂಗಳಕ್ಕೆ ಹೋಗುವ ದಾರಿಯನ್ನು ಗುಡಿಸುತ್ತಿ ದೂಳು, ಅಚ್ಚರಿಗೊಂಡು, “ ನೀನಾರೆ ? ” ಎಂದು ವಿಚಾರಿಸಿದಳು. ನಾಮೆಯು ಹತ್ತರ ಇದ್ದವಳು ಓಡಿಬಂದು, ” ಮತ್ತಾರು ? ಅವ ಳೊಬ್ಬ ಮನುಷ್ಯಳು ” ಎಂದಳು. “ಯಜಮಾನಿ-ಮನುಷ್ಯಳೇನೋ ಅಹುದು-ಮನುಷ್ಯರಿಗೆ ಹೆಸರಿಲ್ಲವೆ? ನಾಮೆ-ಹೆಸರಿಂದ ಪರಿಚಯವಾದಂತಾಗುವದೆ ? ಹುಡುಗಿಯ ಹೆ ಸರು, ನೀರದೆ ಯಜಮಾನಿ-ಮೊನ್ನೆ ದಿನ ಭಿಕ್ಷಕ್ಕೆ ಬಂದ ಹುಡುಗಿಯಲ್ಲವೆ? ನಾಮೆ-ಅಹುದು. ಯಜಮಾನಿ-ಇಂದು ಪುನಃ ಭಿಕ್ಷಕ್ಕೆ ಬಂದಳೆ ? ನಾಮೆ-ಅಂದು ಬಹಳ ಭಿಕ್ಷವನ್ನು ಕೊಟ್ಟೆ -ಅದೇ ಆಶೆಗೆ ಬಂದಳು. ಯಜಮಾನಿ -ನಿನ್ನ ಮಾತಿಗೆ ಮಾತನ್ನು ಹವಣಿಸುವುದು ಕಷ್ಟ. ಸಮಾಚಾರವೇನು ? ವಿವರವಾಗಿ ಹೇಳು. ನಾಮೆ-ಮೋಹನನು ನಿನ್ನೆ ಠಾಣೆಯಿಂದ ಕರತಂದಿರುವ ಹುಡುಗಿ, ತಾಯಿ !