ಪುಟ:ನೀರೆದೆ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪರಿಚ್ಛೇದ wwwwwwwwwwwwwww ಯಜಮಾನಿಯ ಮುಖವು ಗಂಭೀರವಾಯಿತು. ಅವಳು ಸ್ವಲ್ಪ ರುದ್ದ ಕಂಠಯಾಗಿ, “ ಅವಳಿನ್ನೂ ಇಲ್ಲಿರುವಳೆ ? ಇಂದೂ ಇರುವಳೇನು ? ಎಂದಳು. ವ್ಯಾಮೆ-ಇಲ್ಲ ನಿಮ್ಮ ಮನೆಯಲ್ಲೊಂದು ದಿನವಾದರೂ ಇರಳುಇಂದು ನನ್ನೊಡನೆ ಹೊರಟುಹೋಗುವಳು. ಯಜಮಾನಿ--ನಿನ್ನ ಸಂಗಡಲೆ ? ನಾಮೆ-ಅಹುದು-ನನ್ನ ಸಂಗಡ. ಯಜಮಾನಿ-ನೀನೆಲ್ಲಿಗೆ ಹೋಗುವೆ ? ನಾಮೆ ನನ್ನ ಮನೆಗೆ ಯಜಮಾನಿ--ನಿನ್ನ ಮನೆಯಲ್ಲಿರುವವರಾರು ? ಇಷ್ಟು ಕಾಲದ ಮೇಲೆ ನಿನ್ನ ನಾಡಿಯು ಬಿಗಡಾಯಿಸಿದಂತಿದೆ. ವಾಮೆ-ಆರಿಲ್ಲದಿದ್ದರೂ ಮನೆಬಾಗಿಲು ಇದೆ. ಯಜಮಾನಿ-ನಿನಗೆ ಮನೆ ಬಾಗಿಲು ಇಲ್ಲವೆಂದು ತೋರುತ್ತದೆ. ನಾಮೆ-ಇಲ್ಲದಿದ್ದರೆ ಹೊಸದಾಗಿ ಕಟ್ಟಿಸುವೆನು. ಯಜಮಾನಿ ಹಾಗಾದರೆ ಹೋಗಲೇ ಬೇಕೆ ? ನಾಮೆ-ಅಹುದು-ಹೋಗಬೇಕು. ಯಜಮಾನಿ- ಹೋಗಲೇಕೆ ? ಹೇಳಬಾರದೆ ? ನಾಮೆ-ಹೋಗದಿದ್ದರೆ, ಹುಡುಗಿಯಿರುವುದಕ್ಕೆ ಸ್ಥಳವನ್ನೆ ಕೊಡಲಿ ? ಯಜಮಾನಿ-ಹುಡುಗಿಯು ನಿನಗೇನಾಗಬೇಕು ? ಅವಳಿಗೆಸಲ ವಾಗಿ ಅಷ್ಟೊಂದು ಕಡ್ಡಾಟವೇಕೆ ? ನಾಮೆ-ಹುಡುಗಿಗೆ ಮತ್ತಾರೂ ದಿಕ್ಕಿಲ್ಲ-ಇಂದಿನಿಂದ ನಾನವಳ ಪೋಷಣೆಯ ಭಾರವನ್ನು ವಹಿಸಿದ್ದೇನೆ. ನನ್ನ ಮರಣಕಾಲದಲ್ಲಿ ನನಗಿ ರುವುದನ್ನೆಲ್ಲಾ ಅವಳಿಗೆ ಕೊಟ್ಟು ಸಾಯುವೆನು. ಯಜಮಾನಿಯು ಸಂಗತಿಯನೆಲ್ಲಾ ತಿಳಿದವಳಾದಳು. ತಿಳಿದು ಸ್ವಲ್ಪ ಚಿಂತಿತೆಯಾದಳು. ನಾಮೆಯನ್ನು ಬಿಡುವುದಕ್ಕೆ ಅವಳಿಗಿಷ್ಟವಿಲ್ಲ. ಮೂ * ವತ್ತು ವರ್ಷಗಳಿಂದ ಸಹಚರಿಯಾಗಿದ್ದವಳನ್ನು ಬಿಡುವುದು ಸುಲಭವಲ್ಲ, ಈ