ಪುಟ:ನೀರೆದೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ನೀರದೆ wwwwwwwwww ಸಮಯವು ಬಂದಿತು, ತಾಯಿಂದಲೂ ವಾಮೆಯಿಂದಲೂ ಬೀಳೊಂಡನು. ಹಜಾರಕ್ಕೆ ಹೋಗಿ ವ್ಯಾಕುಲನಯನನಾಗಿ ನಾಲ್ಕೂ ಕಡೆ ನೋಡಿದನು. ಎಲ್ಲಿ ನೋಡಿದರೂ ನೀರದೆಯು ಕಣ್ಣಿಗೆ ಬೀಳಲಿಲ್ಲ. ಅಡಿಗೆಮನೆಗೊಮ್ಮೆ ಹೋಗಿ ನೋಡೋಣವೆಂದು ಇಷ್ಟವಾಯಿತು. ಆದರೆ ಸ್ವಲ್ಪ ಲಜ್ಜೆಯುಂ ಟಾಯಿತು. ನೀರದೆಯಿಂದ ಬೀಳ್ಕೊಳ್ಳಲಿಲ್ಲ, ರಮಣನೇಮೋಹನನು ಕರಿ ಕತೆಗೆ ಹೊರಟುಹೋದನು. ವ ೧ ೪ D

  1. ಸ ಹತ್ತನೆಯ ಪರಿಚ್ಛೇದ.

ಕಲಿಕತ್ತೆಗೆ ಹೋದರೂ ರಮಣೀಮೋಹನನಿಗೆ ಶಾಂತಿಯಿಲ್ಲ-ನೀರ ದೆಯ ವಿಷಯವೇ ಎಲ್ಲಾ ಸಮಯದಲ್ಲಿಯೂ ಮನಸ್ಸಿಗೆ ಹೊಳೆಯುವುದು. ಸೀರದೆಯು ತಾಯಿತಂದೆ ಇಲ್ಲದ ದಾರಿವ್ಯ ಪಾಲಿತೆಯಾದ ಅನಾಥೆ, ತನ್ನವ ರೆಂದೀ ಪ್ರಪಂಚದಲ್ಲವಳಿಗಾರೂ ಇಲ್ಲ -ಸಂನಾರಸಮುದ್ರದ ತರಂಗದ ಶಿಖ ರದಲ್ಲಿ ತೇಲುತ್ತಿದ್ದಳು. ರಮಣೀಮೋಹನನು ಅವಳನ್ನು ತಂದು ದಡಕ್ಕೆ ಹಾಕಿದನು-ಬೆಂಬಲವಿಲ್ಲದ ಅನಾಥೆ ನೀರದೆಗೆ ರಮಣೀಮೋಹನನು ಏಕ ಮಾತ್ರ ಸಂಬಲವಾಗಿದ್ದನು. ರಮಣನೇಮೋಹನನನ್ನು ಬಿಟ್ಟರೆ ಅವಳಿಗೆ ಮತ್ತಾರೂ ಇಲ್ಲ. ರಮಣೀಮೋಹನನಿಗೆ ಅವಳ ಜ್ಞಾಪಕವು ಬಂದರೆ ಸ್ವಲ್ಪ ಗರ್ವಿತನಾಗಿ ಹರ್ಷಾನುಭವವನ್ನು ಮಾಡುವನು. ದಿನದಮೇಲೆ ದಿನವು ಉರಳಿತು. ರಮಣನೇಮೋಹನನು ಬಿ. ಎ. ಪರೀಕ್ಷೆಗೆ ಹೋಗಿ ಒಂದು ವರ್ಷದ ಬಳಿಕ ಮನೆಗೆ ಬಂದನು. ಮನೆಗೆ ಬಂದು ತಾಯಿಯನ್ನು ನೋಡಿದನು-ನಾಮೆಯನ್ನು ನೋಡಿವನು. ಆದರೆ ನೀರದೆಯನ್ನು ಕಾಣಲಿಲ್ಲ. ವ್ಯಾಕುಲನದನನಾಗಿ ನಾಲ್ಲೂಕಡೆ ಹುಡುಕಿ ದನು. ಅವಳಲ್ಲಿಯೂ ಕಾಣಲಿಲ್ಲ. ಕಡೆಗೆ ಹತಾಶನಾಗಿ ಉಡುಪನ್ನು ಬದು ಲಾಯಿಸಲು ಮಲಗುವ ಕೊಠಡಿಗೆ ಹೋದನು- ಆಗ ಮಧ್ಯಾಹ್ನವು ತಿರಿ ಗಿದ್ದಿತು.