ಪುಟ:ನೀರೆದೆ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&ಳ ನೀರದ ಹನ್ನೊಂದನೆಯ ಪರಿಚ್ಛೇದ. M ಎರಡು ತಿಂಗಳಾದಬಳಿಕ ಬಿ. ಎ. ಪರೀಕ್ಷೆಯ ಫಲವು ಹೊರಪಟ್ಟಿತು. ರಮಣನೇಮೋಹನನು ಪರೀತ್ತೀರ್ಣನಾಗಿದ್ದನು. ಮನೆಯ ಯಜ ಮಾನಿಯು ಮಗನ ಮದುವೆಗೆ ಸಲವಾಗಿ ಹವಣಿಸಿ ಸಿದ್ಧಪಡಿಸುತ್ತಿದಳು. ಅನೇಕ ದಿನಗಳಿಗೆ ಮೊದಲೇ ಹೆಣ್ಣು ಗೊತ್ತಾಗಿದ್ದಿತು. ಅದುಕಾ ರ ಮದುವೆಗೆ ಸಲವಾಗಿ ಬೇಕಾದುದನ್ನೆಲ್ಲಾ ಸಿದ್ದಪಡಿಸಿಕೊಳ್ಳಲು ವಿಳಂ ಬವಾಗದು. ಆ ಪಾಢಮಾಸದಲ್ಲಿ ಮದುವೆಯು ಗೊತ್ತಾಯಿತು. ಒಂದಾನೊಂದು ದಿನ ಸಾಯಂಕಾಲವಾದ ಬಳಿಕ ತಾಯಿಯು ಇದ್ದ ಕೊಠಡಿಗೆ ಹೋಗಿ ರಮಣೀಮೋಹನನು " ಅಮ್ಮಾ : ಎಂ. ಏ, ಪರೀ ಕೈಗೆ ಓದಬೇಕೆಂದು ಸಂಕಲ್ಪಮಾಡಿಕೊಂಡಿದ್ದೇನೆ ” ಎಂದನು, ಆ ತಾಯಿ--ಪುನಃ ಓದಲವಶ್ಯವೇನು ? ಈಗ ಓದಿರುವುದೇ ಎಥೇಷ್ಟ ವಾಯಿತು. ಮೋಹನ-ಅಮ್ಮಾ : ಓದುವುದಕ್ಕೆ ತುದಿ ಮೊದಲು ಉಂಟೆ ? ತಾಯಿ-ಬಡವರಾದವರು ಚಿರಕಾಲ ಓದಲಿ, ದೊಡ್ಡವರ ಮಕ್ಕಳು ಒಂದೆರಡು ಬುಕ್ಕುಗಳನ್ನೊದಿದರೆ ಸಾಕು. ಮೋಹನ -ಅದು ಅವರವರ ಇಷ್ಟ; ನನಗೆ ಮತ್ತೊಂದು ವರ್ಷ ಓದುಬೇಕೆಂಬ ಆಸೆ. ತಾಯಿ-ಒಳ್ಳೆಯದು-ಇಷ್ಟವಿದ್ದರೆ ಓದು. ಮೋಹನ-ಅಮ್ಮ'- ತಾಯಿ - -ಏನು ? ಮಗು ! ಮೋಹನ-ಮದುವೆಯು ಈಗ್ಗೆ ನಿಂತಿರಲಿ. ತಾಯಿ-ಅದೇಕೆ ? ಮೋಹನ-ಓದಿ ಪೂರೈಸುವತನಕ ಮದುವೆಯನ್ನು ಮಾಡಿಕೊಳ್ಳೆನು. ತಾಯಿ-ಅದಾಗುವುದಿಲ್ಲ. ಮೋಹನ ಏಕೆ ತಾಯಿ-ಮದುವೆಗೆ ಲಗ್ನವು ಗೊತ್ತಾಗಿದೆ.