ಪುಟ:ನೀರೆದೆ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹತ್ತೊಂಬತ್ತನೆಯ ನುಚ್ಚೇದ ೬೫ ದೆಯು ಕಿಂಕರ್ತವ್ಯವಿಮಢಿಯಾಗಿ ನಾಲ್ಕೂ ಕಡೆ ನೋಡಿದಳು ಯುವಾಪು ರುಡನೊಬ್ಬನು ನಿಂತಿದ್ದುದನ್ನು ನೋಡಿದಳು ಅವನದನ್ನು ಕಂಡನು. ಆ ಯುವಕನು ವೀರಭೂಮಿಯು ಪತೃದೊಬ್ಬ ಜಮೀನುದಾರನ ಮಗನಾಗಿದ್ದನು. ಹೆಸರು ರತ್ನತ್ರರ..ಅವನು ವಾಯುಪರಿವರ್ತನೆಗೆ ಸಲವಾಗಿ ಮಧು ಪ್ರರಕ್ಕೆ ಬಂದಿದ್ದನು-ವಿದ್ಯವಿಲ್ಲದ ಧನವಂತರಾದ ಯುವಕರ ರೀತಿ ನೀತಿ ಚರ್ಯಗಳು ಹೇಗೆ ಸಾಮಾನ್ಯವಾಗಿರುವುವೋ: ರನ್ನರನ ರೀತಿ ನೀತಿ ಚರ್ಯೆಗಳ ಹಾಗಿದ್ದುವು. ಅವನೊಬ್ಬ ಸ್ನೇಹಿತನನ್ನು ನೋಡಲು ಅಂದು ದೇವಗಡಕ್ಕೆ ಬಂದಿದ್ದನು-ದೇವರ ದರ್ಶನಕ್ಕೆ ಅಲ್ಲದಿದ್ದರೂ ಮಂದಿ ರವನ್ನು ನೋಡುವುದಕ್ಕೆ ಸಲವಾಗಿ ಬಂದಿದ್ದವನು ನೀರಲೆಯನ್ನು ನೋಡಿ ದನು-ನೋಡಿ ಅವಳ ಭಾವಗತಿಕಗಳನ್ನು ಕಂಡು ಸಂಗಡ ಬಂದಿದ್ದವಳನ್ನು ಕಳೆದುಕೊಂಡಿದ್ದಳೆಂದು ತಿಳಿದವನಾಗಿ, “ ಹೆಂಗಸೊಬ್ಬಳು ನಿನ್ನನ್ನು ಹುಡು ಕುತಿದ್ದಳು ” ಎಂದು ಹೇಳಿದನು. ನೀರದೆಯು ಲಜ್ಞೆಯನ್ನು ಬಿಟ್ಟು ಉತ್ಸುಕೆ ಬಂದೆ, “ಎಲ್ಲಿ? ಎಂದಳು. ಯುವಕ-ದೊಡ್ಡ ಮಾರ್ಗವಾಗಿ ಹೋಗುತ್ತಿದ್ದಳು. ನಾವು ಬಂಡಿ ಯಲ್ಲಿ ಹೋದರೆ ಅವಳು ಸಿಕ್ಕುವಳು. ಸೀರದೆಯು ಸ್ವಲ್ಪವೂ ಯೋಚಸದೆ- ಅವನನ್ನು ಬೆನ್ನಟ್ಟಿ ಹೋ ದಳು. ಅವರಿಬ್ಬರೂ ಮಂದಿರವನ್ನು ಬಿಟ್ಟು ಬೀದಿಗೆ ಬಂದರು-ಅಲ್ಲೊಂದು ಬಂಡಿಯ ಯುವಕನಿಗೆ ಸಲವಾಗಿ ಕಾದು ನಿಂತಿದ್ದಿತು. ಯುವಕನು ನೀರದೆ ಯನ್ನು ಬಂಡಿಯಲ್ಲಿ ಹತ್ತಿಸಿ, ತಾನು ಕೋಚವಾನನು ಕುಳಿತುಕೊಳ್ಳುವ ಸ್ಥಳದಲ್ಲಿ ಕುಳಿತುಕೊಂಡನು-ಬಂಡಿಯು ನಕ್ಷತ್ರವೇಗದಿಂದ ಹೊರಟಿತು. * ಒಂದು ಘಂಟೆಯ ಹೊತ್ತಿನಲ್ಲಿ ಬಂಡಿಯು ವೈದ್ಯನಾಥದ ಸಂಕಷಬಳಿ (Junction -ಮರು ನಾಲ್ಕು ಕಡೆಗಳಿಂದ ಬಂಡಿಗಳು ಬಂದು ಸೇರುವ ಸ್ಥಳ) ಬಂದಿತು. ಯುವಕನು ಕೊಡುವಾಕ್ಸಿಂದಿಳಿದು ಬಂದು ಬಂಡಿಯ ಬಾಗಿಲನ್ನು ತೆರದನು.ಆಗ ನಿಲ್ದಾಣಕ್ಕೆ (Station) ಬಂಡಿಗಳು ಬಂದಿದ್ದುವು. ನಿಂದೆಯು “ ನಾವೆಲ್ಲಿಗೆ ಬಂದೆವು ? ?” ಎಂದು ವಿಚಾರಿ ಸಿದಳು.