ಪುಟ:ನೀರೆದೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೧ www ಇಪ್ಪತ್ತು ನಾಲ್ಕನೆಯ ಪರಿಚ್ಛೇದ ರಮಣೀಮೋಹನನು ಮೂಕಾಗಿ ಸ್ಥಂಭಿತನಾದನು. ನೀರದೆಯು ಆ ಧನವಂತನಾದ ಭೂಸ್ವಾಮಿಯ ಮಗಳೆ ? ಸುಳ್ಳುಮಾತು-ಹಾಗಿರದು. ನಿಜವಾಗಿದ್ದರೆ ನಿಜವಾಗಿದ್ದರೆ, ಎಷ್ಟೊಂದು ಸುಖವಾಗುವುದು ? ಸ್ವಲ್ಪ ಹೊತ್ತು ಸುಮ್ಮನಿದ್ದು ಬಳಿಕ ರಮಣೀಮೋಹನನು, “ ತಮ್ಮ ಸಾಕಮಗ ಳೆಂದು ತೋರುತ್ತದೆ ? ” ಎಂದನು. - ಅನ್ನದಾ-ಇ-ನನ್ನ ಕಔರಸನಗಳು. ರಮಣೀ-ತಮ್ಮ ಸ್ಪಂತನಗಳನ್ನು ಭಿಕ್ಷಾಟನೆಗೆ ಬಿಟ್ಟಿರೋ ಸಾಯಿತೆ ? ಅನ್ನದಾ-ಎಲ್ಲವೂ ಅದೃಷ್ಟದೋಷ, ಹೆಂಗಸು ಸ್ವರ್ಗಾರೋಹಣವಂ ಮಾಡಿದಳು. ನಾನು ಸನ್ಯಾಸಾಶ್ರಮವನ್ನು ಕೈಗೊಂಡೆನು-ಮಗಳು ಬಿಕ್ಷು ಕಳಾದಳು. ರಮಣಿ--ನಾನದಾವ ಸಂಗತಿಯನ್ನೂ ಅರಿಯೆನು. ಅನ್ನ ದಾ-ಹಾಗಾದರೆ ಕೇಳು-ಸಂಕ್ಷೇಪವಾಗಿ ಹೇಳುವೆನು-ಎಂಟು ವರ್ಷಕ್ಕೆ ಮೊದಲು ಬಂದೌತಣವು ಬಂದು ನಮ್ಮ ಮಾವನ ಮನೆಗೆ ಹೋಗಿ ದೈನು ಸಂಗಡ ನೀರದೆಯ ಅವಳ ತಾಯಿಯೂ ಇದ್ದರು. ನಾವು ದಾಮೋದರನದಿಯಲ್ಲಿ ದೋಣಿಯಲ್ಲಿ ಹೋಗಬೇಕು-ಹಿಂದಿರುಗಿ ಬರು ವಾಗ ದೋಣಿಯು ಮುಳುಗಿಹೋಯಿತು.ನಾನು ಬದುಕಿಕೊಂಡೆನು. ನನ್ನ ಹೆಂಡತಿ ಮತ್ತು ಮಗಳ ಸಮಾಚಾರವು ಗೊತ್ತಾಗಲಿಲ್ಲ, ಕೆಲವು ದಿನಗಳಲ್ಲಿ ನನ್ನ ಹೆಂಡತಿಯ ಶವವು ಸಿಕ್ಕಿತು. ನೀರದೆಯ ಸಮಾಚಾರವು ಗೊತ್ತಾ ಗಲಿಲ್ಲ. ಅದು ಮೊದಲ್ಗೊಂಡು ನಾನು ಗೃಹತ್ತಾಗಿ ಸನ್ಯಾಸಿಯಾದೆನು. ಅನ್ನದಾಬಾಬುವು ವ್ಯಸನಭಾರಾಕ್ರಾಂತವಾಗಿ ಅಧೋಮುಖಿಯಾಗಿ ಮೌನವಾಗಿದ್ದವನು, ಸ್ವಲ್ಪ ಹೊತ್ತಾದಬಳಿಕ ಪುನಃ ಹೇಳತೊಡಗಿದನು :- ಆರೇಳುವರ್ಷಗಳಾದ ಬಳಿಕ ತಪೋವನದ ಬೆಟ್ಟದಲ್ಲಿ ನೀರದೆಯನ್ನು ನಿನ್ನ ಸಂಗಡ ನೋಡಿದೆನು-ಮೊದಲು ಚೆನ್ನಾಗಿ ಗುರುತಾಗಲಿಲ್ಲ -ಸಂದೇಹವಾಗಿ ದಿತು. ನನ್ನ ಸಂದೇಹದ ನಿವಾರಣೆಗೆ ನೀನೆನಗೆ ಅವಕಾಶವನ್ನು ಕೊಡ ನಿಲ್ಲ-ನೀರದೆಯ ಕಣ್ಣಿನಲ್ಲಿ ಎರಡು ಮಚ್ಚೆಗಳಿದ್ದುವು. ಅಂತಹ ಮಚ್ಚೆ ಗಳಾರಿಗೂ ಇರದು, ಭಗವಂತನ ಅನುಗ್ರಹದಿಂದ ನೀರದೆಯನ್ನು ಪುನಃ