ಪುಟ:ನೀರೆದೆ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೩ ಇಪ್ಪತ್ತು ನಾಲ್ಕನೆಯ ಪರಿಚ್ಛೇದ ರಮಣೀ-ನಾನು ಬಲ್ಲೆನು-ಆದರೆ ತಾವು ಅರಿಯರಿ. ಅನ್ನ ದಾ--ನಾನರಿಯದಿರುವುದಾವದು ? ಹೇಳು. ರಮಣೀ-ನಾಚಿಕೆಯಿಲ್ಲದೆ ನಾನದನ್ನು ಹೇಳಬೇಕು. ಅನ್ನ ದಾ-ನಿಸ್ಸಂಕೋಚವಾಗಿ ಹೇಳು. ರಮಣೀ-ನೀರದೆಯನ್ನು ನಾನು ಮನಸಾ ನನ್ನ ಪತ್ನಿಯೆಂದು ಗ್ರಹಣ ಮಾಡಿದ್ದೇನೆ. ಅವಳ ಹೊರತು ನಾನು ಮತ್ತಾರನ್ನೂ ಮದುವೆ ಯಾಗನು. ಅನ್ನ ದಾ-ನಾನೂ ಕನ್ಯಾದಾನ ಮಾಡಲು ಸಿದ್ದವಾಗಿದ್ದೇನೆ-ಆದರೆರಮಣೀ.. ಆದರೆ ಏನು ? ಅನ್ನ ದಾ-ಆದರೆ ಇಂದೇ ಮದುವೆಯಾಗಬೇಕು. ರರ್ಮ-ಇಂದೇ ? ಅದೇಕೆ ? ಅನ್ನ ದಾ-ನೀರದೆಗಿಂದು ಮದುವೆಯಂ ಮಾಡಬೇಕೆಂದು ಪ್ರತಿಜ್ಞೆ ಮಾಡಿದ್ದೇನೆ-ನೀನೊಪ್ಪದಿದ್ದರೆ ಬೇರೆ ವರನಿಗೆ ಕೊಟ್ಟು ಮದುವೆ ಮಾಡು ವೆನು. ರಮಣಿ:-ಹಾಗಾದರೆ, ನನ್ನ ಅದೃಷ್ಟದಲ್ಲಿ ನೀರದೆಯನ್ನು ಹೊಂದು ವಂತಿಲ್ಲ. ಅನ್ನ ದಾ-ಏಕೆ ? ರಮಣೀ-ತಾಯಿಯ ಅನುಮತಿಯಿಲ್ಲದೆ ಮದುವೆಯಾಗೆನು-ಮದು ವೆಯ ಮಾತು ಹಾಗಿರಲಿ-ಅವಳನ್ನು ಸ್ಪರ್ಶವನ್ನೂ ಮಾಡೆನು. ಅನ್ನದಾ -ನನ್ನ ಮಗಳನ್ನು ಮದುವೆಯಾಗಲು ತಾಯಿಯ ಅನುಮ ತಿಯು ಬೇಕೆ ? ನೀನಿನ್ನೂ ಹುಡುಗನಲ್ಲ. ರಮಣೀ.-ತಾಯಿಯು ಬದುಕಿರುವತನಕ ನಾನು ಹುಡುಗನೇ ಅಹುದು ; ಆಕೆಯ ಅನುಮತಿಯಿಲ್ಲದೆ ಮದುವೆಯಾಗೆನು, ಅನ್ನ ದಾ...ಹಾಗಾದರೆ ನೀರದೆಯನ್ನು ಬೇರೆ ವರನಿಗೆ ಕೊಟ್ಟುಬಿಡಲೆ? ರಮಣೀ ಇಷ್ಟವಿದ್ದಂತೆ ಮಾಡಬಹುಮ-ನೀರದೆಯನ್ನು ಹೊಂದದಿ ದರೆ, ನನ್ನ ಜೀವನವು ಮರುಭೂಮಿಯಾಗಿರುವುದು-ಸಂಸಾರವನ್ನು ಬಿಟ್ಟು ಸನ್ಯಾಸಾಶ್ರಮವನ್ನು ಗ್ರಹಣ ಮಾಡಬೇಕಾಗುವುದು- ಹಾಗೆ ಮಾಡಿ