ಪುಟ:ನೀರೆದೆ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತು ನಾಲ್ಕನೆಯ ಪರಿಚ್ಛೇದ ಆ84 wwwwwwwwwwwww www ಒs ನೋಡಿದಳು.-ಅಂತಹ ಸೌಂದರ್ಯವನಾರೂ ಆವಾಗಲೂ ನೋಡಿರಲಿಲ್ಲಸಾಲಂಕಾರದ ದೇವಿಯ ಪ್ರತಿಮೆಯಂತಿದ್ದಳುಸೊಸೆಯು ಕಣ್ಣುಗಳನ್ನು ಮುಚ್ಚಿಕೊಂಡಿದ್ದಳು-ಆದರೆ ಅಧರವಲ್ಲಿ ಮೆಲ್ನಗು-ಅದು ಗರ್ವದ ನಗು ವಾಗಿರಲಿಲ್ಲ -ಆನಂದದ ನಗುವಾಗಿದ್ದಿತು-ಆ ನಗುವನಡಗಿಸಲಾರದವಳಾ ಗಿದ್ದಳು. ಆದರೆ ಯಜಮಾನಿಯ ಅಧರದಲ್ಲಿ ಗರ್ವದ ನಗುವು ತೋರುವುದು. ಆನಂದದಿಂದಲೂ ಗರ್ವದಿಂದಲೂ ಹೃದಯವು ತುಂಬಿದರೆ ಮನುಷ್ಯನಾವ ನಗುವನ್ನು ನಗುವನೋ ಯಜಮಾನಿಯ ಅಧರದಲ್ಲಿ ಅಂತಹ ನಗುವು-ಕಡದ ವಿಗ್ರಹದಂತಿದ್ದ ಸೊಸೆಯನ್ನು ಬರಮಾಡಿಕೊಂಡು ಅಂತಹ ಸೊಸೆಯು ಮತ್ತಾರ ಮನೆಯಲ್ಲಿಯೂ ಇಲ್ಲವೆಂತಲೂ ತನ್ನಂತೆ ಮತ್ತಾರೂ ಸುಖಿ ಗಳಲ್ಲವೆಂತಲೂ ಭಾವಿಸಿಕೊಂಡಳು, ವಾಮೆಯು ದೂರ ನಿಂತು “ ನೀರದೆಯು ಅಷ್ಟೊಂದು ಸುಂದರಿ ಯೆಂದು ಆವಾಗಲೂ ತಿಳಿದಿರಲಿಲ್ಲವೆಂತಲೂ ಆ ಭಿಕಾರಿಣಿಯೆಲ್ಲಿ? ಈ ದೇವಿಯ ಪ್ರತಿಮೆಯೆಲ್ಲಿ? ಅರ್ಥಾರ್ಥಸಂಬಂಧವಿಲ್ಲವೆಂತಲೂ ಸೊಸೆಯು ನಿಜವಾಗಿಯೂ ನೀರದೆಯಾಗಿರುವಳೆ ? ಎಂತ ಭಾವಿಸುವಳು. - ಸೊಸೆಯು ವಯಸ್ಸಾದವಳೆಂದು ಹೆಂಗಸರ ಮಹಲಿನಲ್ಲಿ ಚರ್ಚೆಯಾ ಯಿತು-ಆದರೆ ಅವಳಾ ರೂಪವೂ ಅವಳಾ ಅಮಲ್ಯ ಅಲಂಕಾರಗಳ ಆ ಚರ್ಚೆಯನ್ನಡಗಿಸಿದುವು. ನಾವು ಮನುಷ್ಯರನ್ನು ರೂಪಿಸಿ ಹಿಂಸಿಸುತ್ತೆವೆದೇವಿಯನ್ನು ಹಿಂಸಿಸಲಾರೆವು-ನೀರದೆಯು ಆ ದೇವಿಯಾಗಿದ್ದಳು-ಬಂದನ ರೆಲ್ಲರೂ ಸೊಸೆಯ ಸೊಬಗನ್ನೂ ಕೀರ್ತಿಯನ್ನೂ ಕೊಂಡಾಡುತ್ತ ಪ್ರತ ಮನಸ್ಕರಾಗಿ ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರು. ಪುಪ್ಪಶದ್ಯೆಯ ರಾತ್ರಿ ರಮಣಿಮೋಹನನು ಕೊಠಡಿಗೆ ಹೋಗಿ ನೋಡಿದನು, ಪುಷ್ಪಮಯಿ ನೀರದೆಯು ಸುಸ್ತಾಲಂಕಾರಗಳಿಂದ ಭೂಸಿತೆ ಯಾಗಿ ನೆಲದಮೇಲೆ ಕುಳಿತಿದ್ದಳು-ಮೋಹನನು ವಿತನಾಗಿ, “ಸೀರದೆ ? ನೆಲದಮೇಲೆ ಕುಳಿತಿರುವುದೇಕೆ ? ” ಎಂದು ವಿಚಾರಿಸಿದನು. ನೀರದೆಯು ಸುಮ್ಮನಿದ್ದಳು-ಕಡೆಗೆ ಒತ್ತಾಯ ಮಾಡಿದುದರಮೇಲೆ ನೀರದೆಯು “ ನಾನು ಹಾಸಿಗೆಯಮೇಲೆ ಹೇಗೆ ಕುಳಿತುಕೊಳ್ಳಲಿ?-ಆ ಹಾಸಿಗೆಯು ನನಗೆ ದೇವ