ಪುಟ:ನೀರೆದೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀರದ wwwwwwwww ೮೬ wwwww ಮಂದಿರವಾಗಿರುವುದು-ಈಗ್ಗೆ ಬಹುದಿನಗಳಿಗೆ ಹಿಂದೆ ನಾನಾ ಹಾಸಿಗೆಯನ್ನು ಸರಿಮಾಡಿ ಹಾಸುತ್ತಿದ್ದೆನು-ಅದು ನೆನವಿದೆಯೆ ? ” ಎಂದಳು. ರಮಣೀ-ಆ ಸಮಯಕ್ಕೆ ಸರಿಯಾಗಿ ನಾನು ಕೊಠಡಿಗೆ ಬಂದೆನು. ಅದು ನೆನವಿದೆ. ನಾನಂದು ನಿನ್ನನ್ನು ಪ್ರೀತಿಸುತ್ತೇನೆಂದು ತಿಳಿದುಕೊಂಡೆನು. ನಿರದೆ-ಹಾಸಿಗೆಯನ್ನೆ ದೇವಮಂದಿರವೆಂದು ಕಲ್ಪಿಸಿಕೊಂಡು, ನಿತ್ಯವೂ ಅದನ್ನು ಸರಿಮಾಡಿ ರಚನೆಯಂಗೈಯುತಿದ್ದೆನು. ಅದರಿಂದೆನಗೆ ಉಂಟಾಗುತ್ತಿದ್ದ ಸುಖವೂ ತೃಪ್ತಿಯ ಸ್ವಲ್ಪವಾದುದಾಗಿರಲಿಲ್ಲ. ಶಯ್ಕೆಯ ರಚನೆಯ ಬಿಟ್ಟು ಬೇರೆ ಆಶೆಯೆನಗಿರಲಿಲ್ಲ. ಆ ವ್ರತವನ್ನು ನಡಿಸಿ ಕೊಂಡು ಸುಖದಿಂದ ಕಾಲವನ್ನು ಕಳೆಯುತ್ತಿದ್ದನು. ಆದರೆ ರಮಣಿ -ಆದರೆ ಮತ್ತೇನು ? ನೀರದೆ -ಆದರೆ ಹೃದಯದಲ್ಲಿ ನೂತನ ಆಸೆಯು ತಲೆದೋರಿತು. ದೈವವಾಣಿಯಂತೆ ದೇವರ ಬಾಯಿಂದ ಎಂದು “ ನಿಂದೆಯು ನನ್ನ ಸಹಧ ಣಿ, ನೀರದೆಯು ನನ್ನ ಸುಖದುಃಖಗಳಲ್ಲಿ ಭಾಗಿಸಿ ” ಎಂದು ಕೇಳಿ > ಅಂದಿನಿಂದ ರಮಣಿ -ನಿಶ್ಚಿಸಬೇಡ, ಹೇಳು...ನಿನ್ನಾ ವೀಣಾಝಂಕಾರವನ್ನು ವಿನಿಕೆ ಸಿ. ನೀರದೆ ಮತ್ತೇನನ್ನು ಹೇಳಲಿ ? ನನ್ನ ದೇವರು ನನ್ನನ್ನು ಪ್ರೀತಿ ನೆ-ತಾಯಿಯು ನನ್ನನ್ನು ಆದರಿಸುತ್ತಾಳೆ...ನನ್ನಂತೆ ಸುಖಿಯು ಇರು ?

  • ರಮಣೀ-ನಿನಗಿಂತ ನಾನು ಹೆಚ್ಚು ಸುಖಿಯೆಂದು ತೋರುತ್ತದೆ. ಒಂದಾನೊಂದುದಿನ ನೀನು ಹೆಜ್ಜೆ ? ತಾಯಿಯು ಹೆಜ್ಜೆ ? ಎಂದು ಸಂದೇಹ ಪಡುತ್ತಿದ್ದನು. ಇನ್ನೊಂದು ದಿನಗಳಾದ ಬಳಿಕ, ನಿನಗಿಂತ ತಾಯಿಯು ಬಹಳ ಹೆಚ್ಚೆಂದು ತಿಳಿದೆನು -ಅ ನಂಬುಗೆಯೇ ನನ್ನ ಸುಖವಾಗಿರು ವುದು. ಆದುದರಿಂದ ನನಗಿಂತ ಹೆಚ್ಚು ಸುಖಿಗಳು ಮತ್ತಾರೂ ಇಲ್ಲವೆಂದು ಹೇಳುತಿದ್ದೆನು.