ಪುಟ:ನೋವು.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನೋವು ೧೮೯ " ನಾನು ಬರೋದಿಲ್ಲ." " ಅದು ಹ್ಯಾಗಾಗುತ್ತೆ?" " ಬರೋದಿಲ್ಲ, ಅಂದೆ. ನೀವು ಬೇಕಾದರೆ ಹೋಗ್ಬಹುದು." " ದೊಡ್ಡಮ್ಮ ಏನೆಂದಾರು?" " ಏನು ಬೇಕಾದರೂ ಅನ್ಲಿ, ನಾನು ಬರೋದಿಲ್ಲ." " ಇಷ್ಟು ದಿವಸವಾದರೂ ನಗರ ನೋಡ್ಲಿಲ್ಲ ಅಂತಿದ್ದೆ." "ಮಗ ದೊಡ್ಡವನಾದ್ಮೇಲೆ ಕರಕೊಂಡು ಹೋಗ್ತಾನೆ. ಮದುವೆಗೆ ನಾನು ಬರೋದಿಲ್ಲ." ಗೋಪಾಲ ನಿಟ್ಟುಸಿರುಬಿಟ್ಟ. ಅವನ ಮಾವ ಅಳಿಯನನ್ನು ಪಕ್ಕಕ್ಕೆ ಕರೆದು, "ಓರಗಿತ್ತಿಯರು ಮನೆಗೆ ಬರೋ ಕುಮೂಂಚೇನೆ ಹೀಗೆ. ಮುಂದೆ ಏನಾಗುತ್ತೋ ಏನೋ. ಸುಮ್ನೆ ಮನಸ್ಸಿಗೆ ಹಚ್ಕೊಂಡಿದಾಳೆ. ಮದುವೆಗೆ ಬರ್ಲೇ ಬೇಕೂಂತ ಒತ್ತಾಯ ಮಾಡ್ಬೇಡಿ," ಎಂದರು. ಗೋಪಾಲ ಕೀಳಿದ : " ನೀವು ?" " ಅವಳ್ನ ಇಲ್ಲಿ ಬಿಟ್ಬಿಟ್ಟು ಹ್ಯಾಗ್ಬರ್ಲಿ?" " ಆಧ್ನಿಜ. ನಾನೊಬ್ಬನೇ ಹೋಗ್ತೀನಿ." .ದಾರಿಯುದ್ದಕ್ಕೂ ತಲೆ ಕೆರೆದುಕೊಂಡ ಗೋಪಾಲ, ನಗರ ತಲಪಿ, ಕಲ್ಯಾಣ ಮಂಟಪಕ್ಕೆ ಬಂದು, "ಅವಳಿಗಿನ್ನೂ ಆರೋಗ್ಯ ಸರಿಯಿಲ್ಲ. ಅವತು ಇದ್ದ ಹಾಗೇ ಇದಾಳೆ," ಎಂದ. ಮೊಮ್ಮಗ ಆಡಿದುದು ಎಷ್ಟು ನಿಜವೋ ಎಷ್ಟು ಸುಳ್ಳೋ, ಮನೆಯ ಹಿರಿಯ ಸೊಸೆ ಮೈದುನಂದಿರ ಮದುವೆಗೆ ಬರಲಿಲ್ಲ ಎನ್ನುವುದಷ್ಟೇ ತಥ್ಯ, ದೊಡ್ಡಮ್ಮನ ಪಾಲಿಗೆ ಚಿಂತೆ ಯಿಂದ ಅವರ ಹುಬ್ಬಗಳು ಭಾರವಾದವು. ಮದುವೆ ಮನೆಯಲ್ಲಿ 'ಅಸ್ವಸ್ಥ'ಳಾಗುವುದಕ್ಕಿಂತ ಬರದಿದ್ದುದೇ ಒಳಿತಾಯಿತು– ಎಂದುಕೊಂಡರು ಕೊನೆಯಲ್ಲಿ. ಗೋಪಾಲನೊಬ್ಬನೇ ಬಂದುದನ್ನು ಕಂಡ ವಿಷ್ಣುಮೂರ್ತಿಯಾವರೂ ಮೋಹನ ರಾಯರೂ ಸಮಾಧಾನದ ನಿಟುಸಿರುಬಿಟ್ಟರು. . .ಈಗ ಅಯ್ಯನವರ ಹೊಸ ಸೊಸೆಯರು ಮನೆಗೆ ಬಂದಾಗ ಹಿರಿಯವಳು ಕಣ್ಣಿಗೆ ಬೀಳದುದನ್ನು ಕಂಡು ಹಳ್ಳಿಯವರಿಗೆ ವಿಸ್ಮಯವಾಯಿತು. ಮಾತುಗಳಿಗೇನು ಕಡಮೆ ? –" ತವರಿಗೆ ಹೋದಾಕೆ ಬಂದೇ ಇಲ್ಲ." –" ಆವತ್ತಿಂದೇ ಕಾಯಿಲೆ. ಭೂತಚೇಷ್ಟೆ." [ಗೌಡರ ಕಿವಿಗೂ ಅದು ಬಿತ್ತು. ತಮಗೆ ದಿನಗಳು ಯಾತನಾಮಯ ಎನಿಸಿದಾಗ, ಅವರಿಗೆ ಸಂತೋಷ-ಸಂಭ್ರಮ ಎಂದುಕೊಂಡಿದ್ದರು. ಅದು ವಿಚಿತ್ರವಾಗಿ ಕಂಡಿತ್ತು. ಆದರೆ ಈಗ, ಒಂದಿಷ್ಟು ಕಹಿಯನ್ನು ದೇವರು ಅವರಿಗೂ ಬಡಿಸಿದ್ದಾನೆ -ಎಂದು ತಮ್ಮನ್ನು ತಾವೇ ಸಂತೈಸಿದರು.]