ಪುಟ:ನೋವು.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು


" ಆಸೆ ಏನಿದ್ರೂ ಆ ಅಮ್ಮಾವ್ರು ಬರೋದರೊಳಗೆ ತೀರಿಸ್ಕೋಬೇಕೇನೊ?" " ಅಂಥಾದ್ದೇನು ?”

  • ಮತ್ತೆ ? ನಮ್ಮಮ್ಮ ಹೇಳಿದಾರೆ, ಈ ಅರಮನೇಲಿ ಅವಳೇ ಯಜಮಾನಿತಿ ಅಂತ.

ನಮ್ಮ ಮೇಲೆ ಸವಾರಿ ಮಾಡ್ದ್ಡೆ ಇರುತಾಳೆಯೆ ?" "ನಿಮ್ಮಮ್ಮನ ಹಿತೋಪದೇಶ ಆಗಿದೆ ಅನ್ನು." "ಹ್ಞು, ನಮ್ಮ ರಕ್ಷಣೆ ನಾವು ಮಾಡ್ಕೋಬೇಕೋ ಬೇಡ್ವೋ?" "ಅವಳೇನು ನಿನ್ನೆ ಮಾನಭಂಗ ಮಾಡ್ತಾಳೆಯೆ ?"

  • ಮಾನಭಂಗ ಅಂದರೆ ?"

"[ಹೆಂಡತಿಯ ಮೈ ಮೇಲೆ ಕೈ ಹಾಕಿ] ಇದು, ಹೀಗೆ."

  • ಥ ಹೋಗ್ರಿ !"
ಮತ್ತೇನು ? ನಿನ್ನ ಮೇಲೆ ಸವಾರಿ ಮಾಡ್ಬಹುದೂಂತ ಯಾರಾದರೂ ಭಾವಿಸಿಕೊಂಡಿದ್ದರೆ ಅದು ಭ್ರಾಂತಿ."

" ನಿಮ್ಮೊಬ್ಬರನ್ನು ಬಿಟ್ಟು." "ಧನ್ಯ." ಸ್ವಲ್ಪ ಹೊತ್ತಿನ ಬಳಿಕ- "ಏನೇ ಹೇಳಿ, ಒಂದು ಕೆಲಸ ಲೀಡರಾದ ನೀವು ಮಾಡಿಸ್ಬೇಕು. ಕೇಳಿಸ್ತೆ?”

"ಎರಡು ಕಿವೀನೂ ಆಗ್ಲೇ ಕೊಟು ಕೇಳ್ತಿದೀನಿ." 

"ಅಂಗಳ ದೊಡ್ಡದಾಗಿದೆ. ಈ ಮನೆ ಪಕ್ಕದಲ್ಲಿ ಒಂದು ತಾರಸಿ ಮನೆ ಕಟ್ಟಿಸ್ಬೇಕು.” "ಬರೇ ತಾರಸಿ ಮನೆ ಯಾಕೆ? ಪತ್ರಿಕೆಗಳಲ್ಲಿ ಗಗನ ಚುಂಬಿ ಅಂತ ಬರೀತಾರಲ್ಲ. ಅದನ್ನೇ ಕಟ್ಟಿಸೋಣ." "ಗಗನ ಚುಂಬಿ ಎಂದರೆ ? " ಕಾಮಾಕ್ಷಿಯ ತುಟಿಗಳ ಬಳಿಗೆ ತನ್ನವನ್ನೊಯ್ದು ಗೋವಿಂದನೆಂದ :

"ಆಕಾಶಕ್ಕೆ ಮುತ್ತು ಕೊಡುವಂಥ ಕಟ್ಟಡ. ಎತ್ತರದ್ದು. ಅಲ್ಲಿಂದ ಸ್ವರ್ಗ ಸಮಿಾಪ." 

"ರಸ್ತೆ ಮೊದಲು ಮಾಡಿಸಿ. ಬಸ್ಸು ಇಲ್ಲಿವರೆಗೂ ಬರೇಕು. ನಡೆಯೋಕಾಗೊಲ್ಲ ನನ್ಕೈಲಿ."

  • ಅಪ್ಪಣೆ.”

"ಮಾಡಿಸ್ದೇ ಇದ್ರೆ ನೋಡಿ ಮತ್ತೆ. ಹೊರಟ್ಮಟೋದವಳು ಮತ್ತೆ ಬರೋದೇ ಇಲ್ಲ." " ಮಧ್ಯೆ ಮಧ್ಯೆ ಒಂದಷ್ಟು ದಿವಸ ನೀನು ಇಲ್ಲಿ ಇಲ್ಲದೇ ಇದ್ದರೇ ಒಳ್ಳೆದೇನೊ.” ಕಾಮಾಕ್ಷಿಗೆ ಸಿಟು ಬಂತು. ಮೂಗಿನ ಹೊಳ್ಳೆಗಳು ಅದುರಿದುವು. "ಹಾಂ.. ನನ್ನ ಕಲಿಸ್ಬಿಡೋಕೆ ನೋಡ್ತಿದೀರಾ ?"

"ಅಳ್ಬೇಡ ಕಾಮೂ, ನನ್ನ ಚಿನ್ನ ಅಳಬೇಡ ಅಂದ್ರೆ...” ...ಅಂತೂ ಅವರ ಪಾಲಿಗೆ ಹೊತ್ತು ಹೀಗೆ ನಿಧಾನವಾಗಿ ಕಳೆಯಿತು. 

..ಚಪ್ಪರ.ತಳಿರು ತೋರಣ. ಆಳುಗಳಿಗೆ ಕೆಲಸ. "ಗೋಪೂ, ನಿನ್ನ ಮಾವನಿಗೆ ಕಾಗದ ಬರೊಡ್ತೀನಿ.ಹೋಗಿ ನಿನ್ನ ಹೆಂಡತೀನ ಕರ