ಪುಟ:ನೋವು.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು

 ಕೊಂಡು ಬಂದ್ಬಿಡಪ್ಪ. ಆರತ್ಯಕ್ಷತೆ ದಿವಸ ಅವಳು ಇಲ್ಲಿ ಇಲ್ದಿದ್ರೆ ಚೆನಾಗಿ ಕಾಣೊಲ್ಲ..." ಎಂದರು ಶ್ರೀನಿವಾಸಯ್ಯ. " ಹೂಂ," ಎಂದ ಗೋಪಾಲ.

ಅಷ್ಟೊಂದು ಹೆಂಗಸರು ಓಡಾಡುತ್ತಿದ್ದುದನ್ನು ನೋಡಿ' ನೋಡಿ, ತನ್ನ ಹೆಂಡತಿಯ ಅಗತ್ಯ ಗೋಪಾಲನಿಗೂ ಮನವರಿಕೆಯಾಗಿತ್ತು.

...ಹಳ್ಳಿಗೆ ಬಂದ ದಿನವೇ ನವದಂಪತಿಗಳು ಗುಡ್ಡ ಹತ್ತಿ ದೇವರ ದರ್ಶನ ಮಾಡಿ ಬಂದಿದ್ದರು. ಮತ್ತೆ ಒಂದು ದಿನ ಬಿಟು ಪದ್ಮನಾಭ ಪತ್ನಿಗೆ ಹೇಳಿದ : "ಬಾ, ವಾಕಿಂಗ್ ಹೋಗ್ಬರೋಣ.” " ಈ ಬಿಸಿಲಲ್ಲಿ ?" ಎಂದು ರಾಗವೆಳೆದು ಕೇಳಿದಳು ಆರತಿ. "ಇದು ಮಳೆಗಾಲದ ಬಿಸಿಲು. ಸಾಯಂಕಾಲ ಹುಯ್ದರೂ ಹುಯಿತೇ." "ಈಗಿನ್ನೂ ಮೂರು ಗಂಟೆ." "ಏಳು, ಏಳು"

 ಆರತಿ, ಕಥೆ ಪುಸ್ತಕವನ್ನು ಓದುತ್ತಿದ್ದಲ್ಲಿಗೇ ಬೋರಲು ಮಲಗಿಸಿ, ಎದ್ದಳು. ಸಿಂಗರಿಸಿ ಕೊಳ್ಳಲು ಇಪ್ಪತು ನಿಮಿಷ ಹಿಡಿಯಿತು.

ಪದ್ಮನಾಭನ ಸೂಚನೆಯಂತೆ ಆರತಿ, ಒಳಕ್ಕೆ ಹೋಗಿ, “ ಗುಡಿಗೆ ಹೋಗ್ಬರೀತಿವಿ,ಅಜ್ಜಿ," ಎಂದಳು ದೊಡ್ಡಮ್ಮನೊಡನೆ. ವಾಸ್ತವವಾಗಿ ತಾವು ಅಜ್ಜಿಯೇ ಎಂಬುದು ತಿಳಿದಿದ್ದರೂ, ಈ ಹೊಸಬರು ಕೂಡಾ ತಮ್ಮನ್ನು ದೊಡ್ಡಮ್ಮ ಎನ್ನೆಬಾರದೇ ಎಂಬ ಆಸೆ ಅವರಿಗೆ. ಅಲ್ಲದೆ, ಸಿಂಗರಿಸಿಕೊಂಡ ಆರತಿ ನಗರದ ಬಿನ್ನಾಣಗಿತ್ತಿಯಾಗಿದ್ದಳು. ಚಿಕ್ಕವರು, ಇನ್ನೂ ತಿಳಿದು -ಎಂದುಕೊಂಡರು. ಗುಡಿಯೊಂದು ನೆಪ. ಕಳೆದ ಎರಡು ದಿನಗಳಿಂದ ಪದ್ಮನಾಭನ ಮನಸ್ಸಿನ ಆಳದಲ್ಲಿ ಮೊಳೆತು ಹೆಮ್ಮರವಾಗಿ ಹೊರಕ್ಕೆ ಚಾಚ ಬಯಸಿತು ಒಂದು ಬಯಕೆ. ಅದೂ ಇದೂ ಆಡುತ್ತ ಮಾತನಾಡುತ್ತ ಆರತಿಯನ್ನು ಗುಡ್ಡದ ದಾರಿಯಲ್ಲಿ ಅವನು ಕರೆದೊಯ್ದು.

ಈಗ ಆತನ ಮಗ್ಗುಲಲ್ಲಿರುವವಳು ಆರತಿಯಲ್ಲ, ಸುಭದ್ರೆ. 

"ಆರತಿ, ನಾನು ನಿನಗೆ ಇಷ್ಟವಾ ?” "ಈಗ ಓದ್ತಾ ಇರೋ ಕಥೆ ಪುಸ್ತಕದಲ್ಲಿ ಒಬ್ಬ, 'ನಾನು ನಿನಗೆ ಇಷ್ಟವಾ?' ಅಂತ ಹುಡುಗೀನ ಕೇಳ್ತಾನೆ." "ಅವಳು ಏನು ಉತ್ತರ ಕೊಡಾಳೆ ?" ಹೂಂ ರಾಜ."

"ರಾಣಿ, ಇಲ್ಲೊಂದು ಹೊಂಡ ಇದೆ. ದಿಬ್ಬದ ಹೊಂಡ. ಒಳಗೆ ಕೂತರೆ ಯಾರಿಗೂ ಕಾಣಿಸೋಲ್ಲ." 

['ಇದು ವಧಸ್ಥಾನವೆನ್ನುವುದು ಈ ಹುಡುಗಿಗೆ ತಿಳಿಯದು. ವಧಸ್ಥಾನವೆನ್ನುವುದೇ ಸುಳ್ಳು. ಮುನಿಯ ಇಲ್ಲಿ ಮಲಗಿದ್ದುದು; ಗಿಡುಗ-ಹದ್ದುಗಳು- ಎಲ್ಲಾ ಸುಳ್ಳು, ತಾನೊಮ್ಮೆ | 3