ಪುಟ:ನೋವು.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೬ ನೋವು

                               ೨೬                               
    ಹವಾಮಾನ ಅನುಕೂಲವಾಗಿತ್ತು. ಶ್ರಿನಿವಾಸಯ್ಯನವರಿಗೆ. ಮಳೆ ಬರಲಿಲ್ಲವಷ್ಟೇ ಅಲ್ಲ,

ಕೋಟಿ ನಕ್ಷತ್ರಗಳು ಕಣಿವೇಹಳ್ಳಿಯನ್ನು ನೋಡಿ ನಕ್ಕುವು. ಸಂಭ್ರಮವೆಲ್ಲ ಮುಗಿದು ನಗರ ದವರೂ ಶ್ರಿನಿವಾಸಯ್ಯನವರ ಮನೆಯವರೂ ಮಲಗಿದಾಗ ಮಧ್ಯರಾತ್ರೆ.

   "ಕೋರ್ಟ್ನಲ್ಲಿ ಒಂದು ಕೇಸಿದೆ. ನಾಳೆ ಮಧ್ಯಾಹ್ನದೊಳಗೆ ನಗರದಲ್ಲಿ ನಾನಿರ್ಲೇಬೇಕು." 

ಎಂದಿದ್ದರು ಮೋಹನರಾಯರು.

   ಬೆಳಗಾದೊಡನೆಯೇ ಅವರು ಹೊರಡುವ ಆತುರ ತೋರಿದರು.
   ಅಷ್ಟರಲ್ಲಿ ವಿಷ್ಣುಮೂತಿ೯ಯವರ ಹೆಂಡತಿಯ ಕಿರಿಚಾಟ ಕೇಳಿಸಿತು :  
   "ನನ್ನ ಕಾಸಿನ ಸರ ಕಳವಾಗಿದೆ ! ಕಾಸಿನ ಸರ ! ನನ್ನದೂ... !" 
  ಬಹಿರ್ದೆಶೆಗೆ ಹೋಗಿದ್ದ ವಿಷ್ಣುಮೂತಿ೯ ಅರ್ಧದಲ್ಲಿಯೇ ಓಡಿ ಬಂದು, ಪತ್ನಿಯನ್ನು 

ಸಂತೈಸಲು ಯತ್ನಿಸಿದರು.

   "ಸಿಗುತ್ತೆ. ನಿಧಾನವಾಗಿ ಹುಡುಕು." 
   "ಇನ್ನೆಲ್ಲೀಂದ್ರೆ ಹುಡುಕೋದು ? ಕದ್ದಿದಾರೆ ! ಖಂಡಿತ ! ಎಲ್ರನ್ನೂ ಕರೆಸಿ ! 

ತನಿಖೆ ಮಾಡೋಣ !"

   ಕಾಮಾಕ್ಷಿ ತಂದೆಯನ್ನು ಸಮಿಾಪಿಸಿ, ಕಿವಿಯಲ್ಲಿ,  "ಭಾಗೀರಥೀನೆ ಕದ್ದಿರೋದು 

ಗ್ಯಾರ೦ಟಿ. ಬೆಳಗ್ಗೆ ನಾವು ಮುಖ ತೊಳ್ಕೊ೦ಡು ವಾಪ್ಸು ಬರ್ತಿದ್ದಾಗ ಇಲ್ಲಿಂದ್ಲೇ ಅವಳು ಒಳಕ್ಕೆ ಹೋದ್ಲು. ನಾನು ನೋಡಿದೀನಿ," ಎಂದಳು.

    "ಸುಮ್ನಿರು ನೀನು !" ಎಂದು ಗದರಿಸಿದರು, ವಿಷ್ಣುಮೂತಿ೯. 
   ಪಡಸಾಲೆಯಲ್ಲಿ ಈ ಗದ್ದಲ ಆರಂಭವಾದೊಡನೆಯೇ ಭಾಗೀರಥಿ ಬಿಂದಿಗೆ ಎತ್ತಿಕೊಂಡು 

ಬಾವಿಯ ಬಳಿಗೆ ಹೋದಳು

  "ಇವರ ಮನೆ ಹಾಳಾಗ. ಹಾರಿಬಿಡಲೆ ಬಾವಿಗೆ ?" ಎಂದುಕೊಂಡಳು, ಕಟ್ಟೆಯ ಬಳಿ 

ನಿ೦ತು.

     ಬೇಡ, ಇಷ್ಟಕ್ಕೆಲ್ಲ ಯಾಕೆ? – ಎಂದು, ಮಡಿಲಿಗೆ ಕೈ ಹಾಕಿ ಅಂಗೈಯನ್ನು ಬಾವಿಯತ್ತ 

ಚಾಚಿದಳು.

   ಗೋವಿಂದನ ಅತ್ತೆಯ ಕೂಗಾಟದಿಂದ ದೊಡ್ಡಮ್ಮನಿಗೆ ಖೇದವಾಯಿತು. ಒಳ್ಳೆಯ 

ಲಕ್ಷಣವಲ್ಲ ಇದು,ಎನಿಸಿತು.

   "ಈಗೇನ್ಮಾಡೋಣ  ಅಮ್ಮ?" ಎಂದು ಕೇಳುತ್ತ ತಮ್ಮ ಬಳಿಗೆ ಬಂದ ಮಗನಿಗೆ 

ಅವರೆಂದರು:

   "ಶೀನ, ಅದೇನು ಕಳವಾಗಿದ್ರೂ ನಾವು ಅದಕ್ಕೆ ಜವಾಬ್ದಾರಿ. ಎಷ್ಟು ಖರ್ಚಾದರೂ 

ಸರೀನೇ, ಬೇರೆ ಕಾಸಿನ ಸರ ಮಾಡಿಸಿಕೊಡ್ತೀವಿ ಅಂತ ಹೇಳು. ಗಲಾಟೆ ಬೇಡ.”

   "ಹೂಂ,” ಎಂದು ಶ್ರಿನಿವಾಸಯ್ಯ ವಿಷ್ಣುಮೂರ್ತಿಯವರ ಬಳಿ ಸಾರಿ, ಅವರ ಪತ್ನಿಗೂ 

ಕೇಳಿಸುವಂತೆ,"ಕಾಸಿನ ಸರ ಸಿಗದೇ ಹೋದರೆ ಹೊಸದು ನಾವು ಮಾಡಿಸಿಕೊಡ್ತೇವೆ"ಎಂದರು.

    "ಯಾವ ಅಕ್ಕಸಾಲಿಗನಿಂದಾಗುತ್ತೆ ಅಂಥ ಕಾಸಿನ ಸರ ಮಾಡೋದು ಈಗಿನ ಕಾಲ್ದಲ್ಲಿ ?