ಪುಟ:ನೋವು.pdf/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೨ ನೊವು


ಮಗುವನ್ನೆತ್ತಿಕೊಂಡು ಬೀರನನ್ನು ಹಿಂಬಾಲಿಸಿ ಹೋದ ಜಲಜೆಯನ್ನು ಜೋಲು ಮೋರೆಯೊಡನೆ ನಿಂತ ಅವರು ಬಹಳ ಹೊತು ದಿಟ್ಟಿಸಿದರು......

... ಮನೆಯಲ್ಲಿ ಇಷ್ಟು ಗದ್ದಲವಾದರೂ ದೊಡ್ಡಮ್ಮ ತನ್ನನ್ನು ವಿಚಾರಿಸಲಿಲ್ಲ ಎಂಬ ಅಲ್ಪ ಸಮಾಧಾನ ಭಾಗೀರಥಿಗೆ.

ಮಧಾಹ್ನದ ಅನಂತರ ಶ್ರೀಪಾದನನ್ನು ತಟ್ಟಿ ಮಲಗಿಸಿ ಆದ ಮೇಲೆ, ಭಾಗೀರಥಿಯೂ ಅಡ್ಡಾದಳು. 
" ಕೊ೦ಚ ಹೊತ್ತು ಮಲಕೋ ಭಾಗೀ,"   ಎಂದರು ದೊಡ್ಡಮ್ಮ. 

ಭಾಗೀರಥಿ ಕಣ್ಣು ಮುಚ್ಚಿಕೊಂಡಳು. ನಿದ್ದೆ ಬರಲಿಲ್ಲ.

ಅಲ್ಲಾ, ಯಾಕೆ ತಾನು ಆ ಸರವನ್ನೆತ್ತಿಕೊಂಡೆ?

ಆ ಕೊಠಡಿಯಲ್ಲಿ ತನಗೆ ಕೆಲಸವಿರಲಿಲ್ಲ, ಆದರೂ ಪಾದಗಳು ಅತ್ತ  ಸಾಗಿದ್ದುವು. ಅದೂ ಅವರಿಲ್ಲದ ವೇಳೆ.

ಸೀರೆ ಆಭರಣಗಳ ಟ್ರಂಕು ತೆರೆದಿತು, ಒಂದೆಡೆ ಥಳಥಳನೆಂದಿತು ಸರ.ಯಾಕೋ ಏನೋ ತನ್ನ ನಡು ಬಗ್ಗಿತ್ತು.ಗೊತ್ತಿದ್ದೊ ಪಗೊತ್ತಿಲ್ಲದೆಯೋ ತಾನೆು ಅದನ್ನು ಎತ್ತಿಕೊಂಡಿದ್ದೆ. ತನ್ನ ಎದೆಯ ಮೇಲೆ ಅದನ್ನೊಮ್ಮೆ ಇಟ್ಟುಕೊಳ್ಳಬೇಕು ಎನಿಸಿತಲ್ಲ? ಅಷ್ಟರಲ್ಲೆ ಕಾಮಾಕ್ಷಿಯ ಧ್ವನಿ. ಮುಖ ತೊಳೆಯಲು ಹೋದವರು ಎಷ್ಟೊಂದು ಬೇಗ ಬಂದು ಬಿಟ್ಟಿದ್ದರು ! ಸರವನ್ನು ಅದಿದ್ದ ಸ್ಥಳದಲ್ಲೇ ಪುನಃ ಇಡಬೇಕು. ಆಗಲಿಲ್ಲ. ತನ್ನ ಕೈಯಲ್ಲಿದ್ದುದನ್ನು ಅವರು ಕಂಡರೆ? ಸರ ತನ್ನ ಮಡಿಲನ್ನು ಸೇರಿತು. ತಾನು ಅಲ್ಲಿಂದ ಪಾದ ಕೀಳಬೇಕು. ಅಂತೂ ಹೊರಟೆ. ಆದರೆ ದಾರಿಯಲ್ಲೆ ಅವರೆಲ್ಲರೂ ತನ್ನನ್ನು ಸಂಧಿಸಿದರು. ಅಬ್ಬ! ತಾನು ಕಳ್ಳಿಯೇ ಎನ್ನುವ ಹಾಗೆ ನೋಡಿದರಲ್ಲ ಅವರು ?

ಮುಂದೆ ಸ್ವಲ್ಪವೇ ಹೊತ್ತಿನಲ್ಲಿ ಸರ ತೆವಳಿಕೊಂಡು ತೆವಳಿಕೊಂಡು ಬಾವಿಯ ನೀರಿ ನೊಳಕ್ಕೆ ತಳಕ್ಕೆ ಇಳಿಯಿತು. ಅಲ್ಲಿ ಅದು ಭದ್ರ, ಸುರಕ್ಷಿತ. ಯಾರೂ ಅದನು ಕಾಣುವಂತಿಲ್ಲ, ಕದಿಯುವಂತಿಲ್ಲ.
ಕಳವಾಯಿತು ಎಂದು ಕೂಗಾಡಿದರು. ಎಂಥ ಸುಳ್ಳು ? ಯಾರು ಕದ್ದರು ? ಯಾರಿಗೆ ಬೇಕು ಆ ಸರ ? ಪೆಟ್ಟಿಗೆಯಲ್ಲಿದ್ದುದನ್ನು ಬಾವಿಯೊಳಗಿಟ್ಟೆ, ಇಲ್ಲಿ ಇದ್ದದ್ದನ್ನು ಅಲ್ಲಿ. ಆ ಮಹಾತಾಯಿಗೆ ತೊಟುಕೊಳ್ಳೋದಕ್ಕೆ ಈಗ ಸರ ಇಲ್ಲ ಅಂತಲೋ ?ಹೊಹೊ-

ಹೊಹೊಹೊಹೊ.. ಅದಕ್ಕೆ ಯಾರೇನು ಮಾಡೋಕಾಗುತ್ತೆ ? ಅನುಭವಿಸಬೇಕು, ಅನುಭವಿಸ ಬೇಕು.

ವಿಚಾರಣೆ ನಡೆಸಿ–ಅಂದಳಲ್ಲ ಆ ಆಕೆ ? ತನ್ನ ತಂಟೆಗೇನಾದರೂ ಬಂದಿದ್ದರೆ ಒಂದು ಕೈ ತೊರಿಸಿಯೆ ಬಿಡುತಿದ್ದೆ...

ದೊಡ್ಡಮ್ಮ, ಜಲಜೆಯ ಚಿತ್ರ ತಮ್ಮ ದೃಷ್ಟಿಯಿಂದ ದೂರವಾದ ಮೇಲೆ ತಾವೇ ಒಮ್ಮೆ ಸರ ಅಲ್ಲಿರಬಹುದೆ ಇಲ್ಲಿರಬಹುದೆ ಎಂದು ಹುಡುಕಿದರು. ಆಳುಗಳು ಯಾರಾದರೂ ಒಳಗೆ ಬಂದರೇನೊ ಎಂಬ ಸಂದೇಹ ಒಂದು ಕ್ಷಣ ಅವರನ್ನು ಕಾಡಿತು.

'ಸಲಿಗೆ ವಹಿಸಿ ಒಳಗೆ ಯಾರೂ ಹಾಗೆ ಓಡಾಡೋದೇ ಇಲ್ಲವಲ್ಲ, ಎಂದುಕೊಂಡರು. ದೇವರ ಮನೆಗೆ ಬಂದವರು ಅಲ್ಲಿ ನಿಂತು ಬಿಟ್ಟರು. ಗೋಡೆಗೆ ತುಸು ಒರಗಿ ನಿಶ್ಚಲವಾಗಿ