ಪುಟ:ನೋವು.pdf/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು

 ಅದೆಷ್ಟೋ ಹೊತ್ತನ್ನು ದೇವರ ಎದುರಲ್ಲಿ ಅವರು ಕಳೆದರು.

Ο Ο Ο Ο ಅಯ್ಯನವರ ಬೀಗರದೊಂದು ಕಾಸಿನ ಸರ ಕಳವಾಯಿತೆಂಬ ಸುದ್ದಿ ನಿಧಾನವಾಗಿ ಹೆಜ್ಜೆ ಇಡುತ್ತ ಹಳ್ಳಿಯ ನಾಲ್ಕು ದಿಕ್ಕುಗಳಿಗೆ ಹಬ್ಬಿತು.

ಬಿತ್ತನೆಯ ಏರ್ಪಾಟಿಗಾಗಿ ಆಳುಗಳಿಗೆ ನಿರ್ದೇಶವೀಯುತ್ತ ಕುಳಿತಿದ್ದ ಶಾಮೇಗೌಡರು ಆ ಸುದ್ದಿ ಕೇಳಿ ಸಣ್ಣನೆ ನಕ್ಕು, ಮರುಕ್ಷಣವೆ ಗಾಂಭೀರ್ಯ ತಳೆದರು. ಆಳುಗಳು ವೇತನ ಪಡೆದು ತೆರಳುತ್ತಿದ್ದಂತೆ ಗೌಡರು ಒಬ್ಬನ ಕಡೆ ನೋಡಿ ಅಂದರು : "ಅಬ್ದುಲ್ಲ, ನೀನು ಒಸಿ

ಇದ್ಹೋಗು."

೨೭

ಮಳೆಗೆ ಕುಸಿದ ಗುಡಿಸಲನ್ನು ಮತ್ತೆ ಎತ್ತಿ ನಿಲ್ಲಿಸಿ ಅಬ್ದುಲ್ಲ ಜೀವನ ನಡೆಸಿದನಾದರೂ, ತಾನಿನ್ನು ಈ ಊರಿಗೆ ಹೊರಗಿನವನು, ಹೆಚ್ಚು ದಿನ ಇಲ್ಲಿ ತಾನು ಇರಲಾರೆ –ಎಂಬ ಭಾವನೆ ಅವನಲ್ಲಿ ಬೆಳೆದು, ಎಲ್ಲಿಗೆ ಹೋಗಲಿ? ಹೇಗೆ ಹೋಗಲಿ? ಎಂಬ ಚಿಂತೆಯಾಗಿ ಮಾರ್ಪಟ್ಟಿತು.

ಅಬುಲ್ಲನ ಆ ಚಿಂತೆಗೆ ಮುಖ್ಯ ಕಾರಣ ಆತ ತೀರಿಸಬೇಕಾದ ಗೌಡರ ಋಣ, ಹೇಳದೆ ಕೇಳದೆ ಕಣ್ಮರೆಯಾದರೊ ? ಸಾಧ್ಯವಿತು, ಆದರೆ ಅಬುಲ್ಲ ಅದನ್ನು ಮಾಡಲಾರ. ಮತ್ತೆ ಮತ್ತೆ ಸುಳಿದ ಆ ಯೋಚನೆಗಾಗಿ ತನ್ನನ್ನು ತಾನೇ ಆತ ನಿಂದಿಸಿದ.

' ಅಬುಲ್ಲ, ನೀನು ಒಸಿ ಇದ್ಹೋಗು,' ಎಂದು ಗೌಡರೆಂದಾಗ, ಸಾಲ ತೀರಿಸುವ ವಿಷಯ ಪ್ರಸ್ತಾಪಿಸುವರೇನೋ ಎಂದು ಅಬ್ದುಲ್ಲ ಅಳುಕಿದ. ಆದರೆ, ಗೌಡರು ಆಡಿದ ಮಾತು ಅವನಲ್ಲಿ ಹೊಸ ಚೇತನವನ್ನು ತುಂಬಿತು. ಕಣಿವೇಹಳ್ಳಿಯಿಂದ ಮೋಟಾರು ರಸ್ತೆಯತನಕ ಎರಡು ಮೈಲುದ್ದದ ಗಾಡಿ ಹೋಗುವ ದಾರಿ...

 "ಬಿತ್ತನೆ ಮುಗಿಯೂತ್ಲೆ ಕೆಲಸ ಶುರುವಾಗ್ಬೇಕು. ನವರಾತ್ರಿಗೆ ಮನೆಯಲ್ಲಿ ಮದುವೆ. ಅಷ್ಟರೊಳಗೆ ಮುಗಿದಿರ್ಬೆಕು   ಏನಂತೀಯಾ ? "

–ಹಾಗೆ ಹೇಳಿ ಉತ್ತರಕ್ಕಾಗಿ ತನ್ನನ್ನು ದಿಟ್ಟಿಸಿದ ಗೌಡರೆದುರು, ಮುಖವರಳಿಸಿ ಅಬುಲ್ಲನೆಂದ : " ನನಗೆ ಬುಟು ಡಿ, ಒಡೆಯಾ.. ನಾನೊಬ್ನೇ ಆದ್ರೂ ಸರಿ, ಮಾಡಿ ಮುಗಿಸ್ತೀನಿ." " ಉಚ ! ಒಬ್ನಿಂದ ಆತದಾ ? ಒಂದೈವತು ಅರುವತು ಜನ ರೈತರ ಜಮೆ ಮಾಡಾನ.. ನೀನು ಮೇಸ್ತ್ರಿಯಾಗು. ದುಡ್ಡೋಗ್ರೇ ಕೂಲಿಗೀಲಿ ಕೊಡಾನ. ಏನಂತೀಯಾ ?" " ಊಂ, ಒಡೆಯಾ, ಅಂಗೇ ಆಗ್ಲಿ... " ಗೌಡರಿಗೆ ಸಮಾಧಾನವಾಯಿತು. ಅಬುಲ್ಲ ಆ ಕೆಲಸ ಮಾಡಿಯೇ ಮಾಡುವನೆಂಬ ವಿಶ್ವಾಸ ಅವರಿಗಿತು... ...ಒಂದು ದಿನ ಇದ್ದಕ್ಕಿದ್ದಂತೆ ಹಳ್ಳಿಯವರು ದಾರಿ ಕಡಿಯತೊಡಗಿದಾಗ ಶ್ರೀನಿವಾಸಯ್ಯ