ಪುಟ:ನೋವು.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಅಬ್ದುಲನ ಮುಖ ರಕ್ತರಂಜಿತವಾಯಿತು. ಗೋವಿಂದನ ಮಾತಿನ ರೀತಿ ಅವನಿಗೆ ಹಿಡಿಸಲಿಲ್ಲ. ಏನನ್ನೋ ಹೇಳಬಯಸಿ ತುಟಿಗಳು ಅಲುಗಿದುವಾದರೂ ಆತ ಸುಮ್ಮನಿದ್ದ. " ಅಂತೂ ಸರಕಾರ ಮಾಡೋದನ್ನ ಗೌಡರು ಮಾಡ್ತಿದಾರೆ. ತಾವೇ ಸರಕಾರ ಅಂತ ತಿಳ್ಕೊಂಡಿದಾರೆ, ಪಾಪ." ಅದಕ್ಕೂ ಅಬ್ದುಲ್ಲ ಸುಮ್ಮನಿದ್ಧ . " ಒಂದಿಷ್ಟು ದುಡ್ಡು ಬರ್ತಿತು , ನಿನ್ನ ಸಾಲ ತೀರಿಸೋಕಾದ್ರು ಆಗಿತು, ಹೋಯ್ತು." - ಅಬುಲ್ಲ ತೊದಲಿದ: " ಬಾಡಿ ಗೋವಿಂದಪ್ನೋರೆ, ಅಂಗನ್ಬ್ಯಾಡಿ . ಗೌಡರು ನನಗೆ ಅಲ್ಲಾನ ಸಮಾನ.ಮೈ ಚರ್ಮ ಕಿತ್ಕೋಡು, ಎಕ್ಕಡ ಮಾಡ್ತೀನಿ -ಅಂತ ಅವರು ಅಂದ್ರೆ ಕಿತ್ಕೋಟ್ಟೆನು." "ಅಲ್ಲವೆ ! ಅಲ್ಲವೆ !" "ಓಗಿ . ಊಟದೊತ್ತಾಯ್ತು ." ಗೋವಿಂದ ದುರುದುರನೆ ಅವನನ್ನು ನೋಡಿ ಮುಂದಕ್ಕೆ ಹೆಜ್ಜೆ ಇರಿಸಿದ. ಆಳುಗಳ ತಂಡವನ್ನು ಅವನು ದಾಟುತ್ತಲಿದ್ದಂತೆ ಒಬ್ಬ ರೈತನೆಂದ : "ಗೋವಿಂದಪ್ನೋರು ಮನೀಗೋತಿರೋ , ಓಟ್ಲಿಗೊ ?” ಗೋವಿಂದನಿಗೆ ರೇಗಿತು  : ಯಾಕಯ್ಯ?"

" ಇ ಹ್ಹಿ ಹ್ಹಿ .ನಿಮ್ಮ ಅಮ್ಮಾಓಟ್ಲಾಗವು".   

"ಮುಚ್ಚು ಬಾಯಿ !" 'ಇಹ್ಹಿ , ಅದಕ್ಕಾದ . ಮದುವೆಯಾದ ಮೇಲೆ ನಾಲ್ಕೈದು ಸಾರೆ ಆತ ನಗರಕ್ಕೆ ಹೋಗಿದ್ದ .ಪ್ರತಿ ಸಲವೂ 'ನಾನೂ ಭರ್ತಿನಿ,' ಎಂದಿದ್ದಳು. ಕಾಮಾಕ್ಷಿ 'ಈಗಲ್ಲ, ಇನ್ನೊಂದ್ದರ್ತಿ" ' ಈ ಸಲವಲ್ಲ, ನವರಾತ್ರಿಗೆ'-ಎಂದು ದಿನ ಕಳೆದಿದ್ದ ಗೋವಿಂದ. “ ಹೋಗಲಿ, ನೀವಿಲ್ಧೆ ಇದ್ದಾಗ ಗಜಾನನಣ್ಣನ ಹೋಟ್ಲಿಗಾದರೂ ಹೋಗ್ತಿರ್ತಿನಿ ".ಎಂದಿದ್ದಳು ಕಾಮಾಕ್ಷಿ. , ಅಣ್ಣನೊ, ತಮ್ಮನೊ ಹೆಂಡತಿಯ ಹೊಟ್ಟೆಯ ಹಾಗೂ ದೇಹದ ಹಸಿವನ್ನು ಚೆನಾಗಿ ಅರಿತಿಧ್ಧ ಗೋವಿಂದ ಅದಕ್ಕೆ ಒಪ್ಪಿರಲಿಲ್ಲ . “ ಬೇಡ ". “ ಯಾಕ್ಬೇಡ ? ನೀವು ಇಷ್ಟ ಬಂದಾಗ ಹೋಗೊಲ್ವೋ  ! ಜಲ್ಜಾ ಜತೆ ಮಾತಾ ಡೊಲ್ವೋ ? " ನಾನು ಹೋಗೋದು ಜಲಜಾ ಜತೆ ಮಾತಾಡೋದಕ್ಕಲ್ಲ." " ಮತ್ತೇನು ? ಬರೀ ಮುಖ ನೋಡ್ಕೊoಡು ಬರ್ತಿರೊ?” "ಕಾಮೂ ! ಏನೇ ಇದು ?" రో! "ಶ್ ! ಏನು , ಸ್ವರ ಎರಿಸ್ತಿದೀರಲ್ಲ ?”