ಪುಟ:ನೋವು.pdf/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Cവ്) ನೋವು " ಹ್ನ, ಮಕ್ಕಳಿಗೆಲ್ಲಾ ಮದುವೆಯಾಯು, ಸಂಸಾರ ಬೆಳೀತು. ಅಣ್ಣಯ್ಯ.ಹಾಯಾಗಿದ್ದಾರೆ." ಒಂದು ಕ್ಷಣ ಗೌಡರು ಅಂತರ್ಮುಖಿಯಾದರು. ಹಾಯಾಗಿರುವ ಶ್ರೀನಿವಾಸಯ್ಯ, ತಾವಿಬ್ಬರೂ ಅನ್ಯೋನ್ಯವಾಗಿದ್ದ ಆ ಕಾಲ. ಆತ ಒಳ್ಳೆಯವನೇ ಆದರೂ ಪರಿಸ್ಥಿತಿ ಬದಲಾಯಿ ತಲ್ಲ, ಆ ಜೀವ ಸಿಂಹವೇ. ಸಾಧು ಸಿಂಹ.. ಅದರ ಹೊಟ್ಟೆಯಲ್ಲಿ ಹುಟ್ಟಿದ ಈತನೋ-ನರಿ, ಗುಳ್ಳೆನರಿ. - - ನೆಲ ನೋಡುತ್ತಿದ್ದ ದೃಷ್ಟಿಯನ್ನು ಗೌಡರು ಮೇಲಕ್ಕೆತ್ತಿದರು. ಗೋವಿ೦ದನೇ ಮುಂದುವರಿದ : " ನಮ್ಮ ಕಷ್ಟಗಳು ಗೊತ್ತಲ್ಲ ನಿಮಗೆ ದೊಡ್ಡಮ್ಮನಿಗೆ ವಯಸಾಯು, ಚಿಕ್ಕವರನ್ನು ಇನ್ನೂ ಅವರು ಅರ್ಥ ಮಾಡಿಕೊಳ್ಳೋದು ಕಷ್ಟ, ನಮ್ಮ ಅತ್ತಿಗೆಗಂತೂ ಮೈಲಿ ಹುಷಾರಿಲ್ಲ. ನಿಶ್ಚಿತಾರ್ಥದ ದಿವಸ ಶುರುವಾದ ಕಾಹಿಲೆ ಪೂರ್ತಿ ವಾಸಿಯಾಗೇ ಇಲ್ಲ. ಪದ್ಮನ ಹೆಂಡ್ರಿಯಂತೂ ತಂದೆ ಮನೇಲೆ ಇರಾಳೆ, ಇವನೂ ಅಲ್ಲೇ ಮುಂದಿನ ವರ್ಷ ಲಾ ಓದಾನಲ್ಲ." ಗೌಡರು ಹೂಂಗುಟ್ಟದೆ ಕಿವಿಗೊಟ್ಟರು. ಲಾ ಅಂದರೆ ಲಾಯರಿಯಾಗೋದು. ಅದನ್ನು ಗೌಡರು ಬಲ್ಲರು.. ಅಯ್ಯನವರ ಕಿರಿಯ ಮಗನೂ ಲಾಯರಿ, ತಮ್ಮ ಅಳಿಯನೂ ಲಾಯರಿ. ಒಳಗೆ ಕರಗತೊಡಗಿದ್ದ ಅವರ ಮನಸ್ಸು ಮತ್ತೆ ಹೆಪ್ಪುಗಟ್ಟಿತು. ಇದ್ದಕ್ಕಿದ್ದಂತೆ ಗೋವಿಂದನೆಂದ : " ತಾವು ಬರಹೇಳಿದ ವಿಷಯ." | ಗೌಡರು ಗೋವಿಂದನನ್ನು ದಿಟ್ಟಿಸಿ ನೋಡಿ, ಕಣ್ಣು ಮುಚ್ಚಿ ತೆರೆದು, ಅಂದರು : * ಇಸ್ಯ ಯಂಥದೂ ಇಲ್ಲ, ಗೋವಿಂದಪ್ಪ, ನಿನ್ನ ನೋಡಿ ಶಾನೇ ದಿವಸ ಆಯಾಂತ ಕರೆಸ್ಥೆ, ಪುಢಾರಿಗು ನಮ್ಮ ಮರತ್ತೂ, ನಾವು ಅವರ ಮರಿಯೋಕಾತದಾ ?" - " ಛೆ ! ಛೆ! ದೊಡ್ಡ ಮಾತು ಹೇಳಿದಿರಿ. ಏನಿದೂ ಬಂದು ಊರಿನ ಪ್ರಮುಖರಿಗೆ ವರದಿ ಮಾಡೋದು ನನ್ನ ಕರ್ತವ್ಯ, ಇನ್ನು ಬರಲೇ ?”

  • ಅಂಗೇ ಮಾಡು". | ಗೋವಿಂದನೆದ್ದು ಮತ್ತೆ ಕೈಜೋಡಿಸಿ ಅಂದ : * ರಸ್ತೆ ಮುಗಿಯೋ ಹೊತ್ತಿಗೆ ಪತ್ರಿಕೆಗಳಲ್ಲೆಲ್ಲಾ ಸುದ್ದಿ ಬರೋ ಹಾಗೆ ಮಾಡ್ತಿನಿ." * ಸುಮ್ಮೆ ಹಂಥಾದ್ದೆಲ್ಲ ಯಾಕೆ ಗೋವಿಂದಪ್ಪ ?” " ಛೆ! ಛೆ! ಅದು ನನ್ನ ಕರ್ತವ್ಯ, ಈ ಮಣ್ಣಿನಲ್ಲಿ ಹುಟ್ಟಿ ಬೆಳೆದಿರೋನು ಈ ಹಳ್ಳಿగాగి ణఖే్చు వాూడాదిర్మిన్యే ?"

ಗೌಡರು ನಕ್ಕು, ಇನ್ನು ತೊಲಗು'–ಎನ್ನುವಂತೆ ಕೈ ಆಡಿಸಿದರು. ಗೋವಿಂದ ಹೊರಟು ಹೋದ ಮೇಲೆ ಗೌಡರೆದ್ದು ಒಳ ಮನೆಗೆ ಹೋದರು. ಅಲ್ಲಿ ಸುಬ್ಬಿ ತರಕಾರಿ ಹೆಚ್ಚುತ್ತ ಕುಳಿತಿದ್ದಳು. t “ಏನ್ಸೇಕಪ್ಪ ?” ಎಂದಳು ಆಕೆ ತನ್ನೆ ತಂದೆಯನ್ನು ನೋಡಿ. ನಗೆಯಿಲ್ಲ, ಸರಸವಿಲ್ಲ: ಮಗಳು ಬೆಳೆದಿದ್ದಾಳೆ; ಇವಳಿನ್ನು ಎಳೆಗೂಸಲ್ಲ. * ನಾಗೂ ಎಲ್ಲಿ ?"